ನಂಜನಗೂಡಿನ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ನಗರಸಭೆ ಆಯ-ವ್ಯಯ ಮಂಡನೆ ಸಭೆಯಲ್ಲಿ ಪಾಲುಗೊಂಡ ಸದಸ್ಯರುಗಳು .
ಸದಸ್ಯ ಮಹದೇವಸ್ವಾಮಿ ಸಭಾತ್ಯಾಗ ಉಪಾಧ್ಯಕ್ಷೆ ರೆಹನಾಭಾನು ಉಪಸ್ಥಿತಿ ರೆವಿನ್ಯು ಬಡಾವಣೆಗಳಿಂದ ತೆರಿಗೆ ಸಂಗ್ರಹ ಗುರಿ
‘ನಗರ ಅಭಿವೃದ್ಧಿಗೆ ಹೆಚ್ಚಿನ ಅನುದಾನ’
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ‘ನಗರಸಭೆ ಆದಾಯ ಹೆಚ್ಚಿಸುವ ಸಲುವಾಗಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ₹502 ಲಕ್ಷ ಮೀಸಲಿಡಲಾಗಿದೆ. ಬಜಾರ್ ರಸ್ತೆ ತರಕಾರಿ ಮಾರ್ಕೆಟ್ ಜಾಗದಲ್ಲಿ ಬಹು ಮಹಡಿ ಕಾಂಪ್ಲೆಕ್ಸ್ ನಿರ್ಮಿಸಲು ಸರ್ಕಾರದಿಂದ ಅನುದಾನ ಪಡೆಯಲಾಗುವುದು’ ಎಂದರು. ‘ನಗರದಲ್ಲಿ ರಸ್ತೆ ಬದಿ ಆಹಾರ ಮಳಿಗೆಗಳಿಂದ ವಾಹನ ಸವಾರರಿಗೆ ಉಂಟಾಗುತ್ತಿದ್ದ ತೊಂದರೆ ನಿವಾರಿಸಲು ನಗರಸಭೆ ವ್ಯಾಪಾರಿಗಳಿಗೆ ಫುಡ್ ಜೋನ್ ಆರಂಭಿಸಿದ್ದು ಒಳ್ಳೆಯ ಬೆಳವಣಿಗೆ ನಗರದ ಇನ್ನೂ ಎರಡು ಕಡೆ ಫೂಡ್ ಜೋನ್ ನಿರ್ಮಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಾರಿ ಕ್ಷೇತ್ರದ ಅಭಿವೃದ್ಧಿಗಾಗಿ ₹25 ಕೋಟಿ ವಿಶೇಷ ಅನುದಾನ ನೀಡಿದ್ದರು. ಈ ಬಾರಿ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ವಿಶೇಷ ಅನುದಾನಕ್ಕಾಗಿ ₹8 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಅವರಿಂದ ಹೆಚ್ಚಿನ ಅನುದಾನ ಪಡೆದು ನಗರದ ಅಭಿವೃದ್ದಿಗಾಗಿ ಹೆಚ್ಚು ಬಳಸಲಾಗುವುದು’ ಎಂದು ಹೇಳಿದರು.