ಮೈಸೂರು: ‘ಯಕ್ಷಗಾನ ಕಲಾವಿದರಲ್ಲಿ ಅನೇಕರು ಸಲಿಂಗಿಗಳು. ಅಲ್ಲಿ ಅಂಥ ಅನಿವಾರ್ಯತೆಯಿತ್ತು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದರು.
.ಹೋಟೆಲ್ ಕಾರ್ಮಿಕರಿಗೆ ಕನ್ನಡ ಕಲಿಸಿ: ಪುರುಷೋತ್ತಮ ಬಿಳಿಮಲೆ .
ಇಲ್ಲಿನ ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ಮಂಗಳವಾರ ‘ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು’ ಹಾಗೂ ‘ನಾವು ಕೂಗುವ ಕೂಗು’ ಕೃತಿಗಳನ್ನು ಬಿಡುಗಡೆ ಮಾಡಿದ ಅವರು, ‘ಸತ್ಯವನ್ನು ಹೇಳಲು ಹಿಂಜರಿಯಬಾರದು. ಕಲಾವಿದರು ಮೇಳಕ್ಕೆಂದು ಆರೆಂಟು ತಿಂಗಳು ತಿರುಗಾಟದಲ್ಲೇ ಇದ್ದರಿಂದ, ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಅವರ ಮೇಲೆ ಇತರರಿಗೆ ಮೋಹವೇ ಇರುತ್ತಿತ್ತು’ ಎಂದರು.

‘ಎಷ್ಟೋ ಬಾರಿ ಸ್ತ್ರೀ ವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ರಂಗಭೂಮಿಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು’ ಎಂದು ವಿವರಿಸಿದರು.
. ಎಸ್ಸೆಸ್ಸೆಲ್ಸಿ, ಪಿಯುಸಿ ತೇರ್ಗಡೆ ಅಂಕ ಕಡಿಮೆ ಮಾಡದಿರಿ: ಪುರುಷೋತ್ತಮ ಬಿಳಿಮಲೆ .
‘ಆಗೆಲ್ಲ ಕಲಾವಿದ ಮೇಳಕ್ಕೆಂದು ಹೋಗಿ ವಾಪಸಾದಾಗ ಹಲವರಿಗೆ ಮನೆಯೇ ಇರುತ್ತಿರಲಿಲ್ಲ. ಪ್ರವಾಹಕ್ಕೆ ಕೊಚ್ಚಿ ಹೋಗಿರುತ್ತಿತ್ತು. ಅಂಥ ದುರಂತ ಕಾವ್ಯಗಳು ಅವರ ಬದುಕಿನಲ್ಲಿವೆ. ಅವನ್ನು ಗ್ರಹಿಸುವ ಶಕ್ತಿ ಸಮಾಜಕ್ಕೆ ಇಲ್ಲವಾಗಿದೆ. ಹಾಡಿನ ಚಪ್ಪಾಳೆಯಷ್ಟೇ ಮುಖ್ಯವಾಗಬಾರದು. ಅವರ ಬದುಕಿನ ಬಿಕ್ಕಟ್ಟಿನ ಕಾವ್ಯಕ್ಕೆ ಅಕ್ಷರಸ್ಥರು, ವಿದ್ವಾಂಸರು ದನಿಯಾಗಬೇಕು. ಹಾಡುಗಾರ ವೈರಿಯ ಮನೆ ಎದುರು ನಿಂತು ಭಿಕ್ಷೆ ಬೇಡಿದಾಗ ಅವನಿಗೆ ವಿಷ ಹಾಕಲು ಯತ್ನಿಸಿದವರಿದ್ದಾರೆ. ಮಾನವ ಸಂಬಂಧಗಳನ್ನು ಗೌಣಗೊಳಿಸಿ, ಕಲೆಯನ್ನು ಎತ್ತಿ ಹಿಡಿಯುವ, ‘ಭಿಕ್ಷೆಯಲ್ಲೂ ವೈರಿಯ ಮನೆ ಬಿಟ್ಟುಹೋಗಬಾರದು’ ಎಂಬ ಗುರು ದೀಕ್ಷೆಯನ್ನು ಕಲಾವಿದ ತೆಗೆದುಕೊಂಡಿರುತ್ತಿದ್ದ’ ಎಂದರು.
.ಕನ್ನಡ ಕುಸಿಯುತ್ತಿರುವ ಕಾಲಘಟ್ಟದಲ್ಲಿದ್ದೇವೆ: ಪುರುಷೋತ್ತಮ ಬಿಳಿಮಲೆ