ಮಸ್ಕಿ: ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ತಾಲ್ಲೂಕಿನ ಮಸ್ಕಿ ಜಲಾಶಯದಿಂದ 600 ಕ್ಯೂಸೆಕ್ ನೀರನ್ನು ಹಿರೇ ಹಳ್ಳಕ್ಕೆ ಬಿಡಲಾಗಿದೆ. ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ದಂಡೆಯ ಗ್ರಾಮಗಳಿಗೆ ಹಳ್ಳದಲ್ಲಿ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
.ಮಸ್ಕಿ: ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಆರ್. ಬಸನಗೌಡ ತುರ್ವಿಹಾಳ.
ಸುರಿದ ಮಳೆಗೆ ಬೆಟ್ಟದಿಂದ ಹರಿದು ಬಂದ ನೀರು ಬಸವೇಶ್ವರ ನಗರಕ್ಕೆ ನುಗ್ಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ತಹಶೀಲ್ದಾರ್ ಕಚೇರಿ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಕೆರೆಯಂತಾಗಿದೆ. ಬಸವೇಶ್ವರ ನಗರದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಮುಂದೆ ಹರಿದು ಹೋಗದೆ ನಿಂತಲ್ಲಿಯೇ ನಿಂತಿದ್ದರಿಂದ ಸ್ಥಳೀಯ ನಿವಾಸಿಗಳು ಸೋಮವಾರ ಬೆಳಿಗ್ಗೆ ನಿತ್ಯದ ಕೆಲಸಗಳಿಗೆ ಪರದಾಡುವಂತಾಯಿತು. ಮನೆಗಳಿಂದ ಹೊರ ಬಾರದಂತ ವಾತಾವರಣ ನಿರ್ಮಾಣವಾಗಿತ್ತು

ಪುರಸಭೆಯ ಮುಖ್ಯಾಧಿಕಾರಿ ನರಸರೆಡ್ಡಿ ಸೂಚನೆಯಂತೆ ಸುನೀಲ್, ಹಜರ್ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಮಳೆ ನೀರನ್ನು ತಾತ್ಕಾಲಿಕವಾಗಿ ಹೊರ ಕಳಿಸಲು ವ್ಯವಸ್ಥೆ ಮಾಡಿದರು.
.ರಾಯಚೂರು | 14 ಸರ್ಕಾರಿ ಶಾಲೆಗಳಿಗೆ ಹಸಿರು ಬೋರ್ಡ್ ವಿತರಣೆ.
ವಾಲ್ಮೀಕಿ ನಗರ, ಸೋಮನಾಥ ನಗರ, ಗಾಂಧಿ ನಗರ ಸೇರಿದಂತೆ ವಿವಿದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮಳೆಗಳಿಗೆ ನುಗ್ಗಿದ ಬಗ್ಗೆ ವರದಿಗಳು ಬಂದಿವೆ. ಹೆದ್ದಾರಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದರಿಂದ ಪುರಸಭೆ ಸಿಬ್ಬಂದಿ ಚರಂಡಿಯ ಮೋರಿಗಳನ್ನು ತೆರವುಗೊಳಿಸಿ ಚರಂಡಿಗೆ ನೀರು ಹೋಗುವಂತೆ ಮಾಡಿದರು.

ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಹಾನಿ ಬಗ್ಗೆ ವರದಿ ತರಿಸಿಕೊಳ್ಳಲಾಗುವುದು ಎಂದು ತಹಶೀಲ್ದಾರ್ ಮಂಜುನಾಥ ಬೋಗಾವತಿ ತಿಳಿಸಿದ್ದಾರೆ
.ರಾಯಚೂರು | ವಿಮಾನ ನಿಲ್ದಾಣ ಕಾಮಗಾರಿ ತ್ವರಿತಗೊಳಿಸಿ: ಜಿಲ್ಲಾಧಿಕಾರಿ ನಿತೀಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.