ರಾಯಚೂರು: ‘ಸಿದ್ಧಲಿಂಗಯ್ಯನವರು ಸಾಹಿತ್ಯ ಲೋಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿ, ಯುವಪೀಳಿಗೆಯನ್ನು ನಿದ್ದೆಯಿಂದ ಹೊರಗೆ ತಂದವರು. ಸಿದ್ದಲಿಂಗಯ್ಯನವರ ಬರಹದಿಂದ ಸಾಹಿತ್ಯದಲ್ಲಿ ದೊಡ್ಡ ಪಲ್ಲಟವಾಯಿತು' ಎಂದು ಸಾಹಿತಿ ಬಾಬು ಭಂಡಾರಿಗಲ್ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ನೌಕರರ ಮನೋರಂಜನ ಸಂಘದ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ, ಎಸ್. ಟಿ ನೌಕರರ ಸಮನ್ವಯ ಸಮಿತಿ, ಹೊಸಮನಿ ಪ್ರಕಾಶನದ ಆಶ್ರಯದಲ್ಲಿ ಆಯೋಜಿಸಿದ್ದ ‘ಸಿದ್ದಲಿಂಗಯ್ಯ ಅವರ ಬದುಕು-ಬರಹ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

'ಇಕ್ರಲಾ, ಹೊಡಿರಲಾ, ಯಾರಿಗೆ ಬಂತು ಸ್ವಾತಂತ್ರ್ಯ ಸೇರಿದಂತೆ ಅವರ ಇತರೆ ಪದ್ಯ, ಕ್ರಾಂತಿಗೀತೆಗಳು ಹೋರಾಟಗಾರರಲ್ಲಿ ಹೊಸ ಹುಮ್ಮಸ್ಸು, ಚೈತನ್ಯ ಮೂಡಿಸಿದವು. ಅವರ ಪ್ರತಿಯೊಂದು ಕಾವ್ಯಗಳಲ್ಲಿ ತಳಸಮುದಾಯದವರ ನೋವು ಇಣುಕುತ್ತದೆ. ಹೋರಾಟಕ್ಕೆ ಹುರಿದುಂಬಿಸುತ್ತದೆ' ಎಂದು ತಿಳಿಸಿದರು.

ಕವಿ ಈರಣ್ಣ ಬೆಂಗಾಲಿ ಮಾತನಾಡಿ, ‘ಡಾ.ಬಿ. ಆರ್. ಅಂಬೇಡ್ಕರ್ ಅಂತಹ ಕ್ರಾಂತಿಯಲ್ಲಿ ಹೊರಹೊಮ್ಮಿದವರ ಪೈಕಿ ಸಿದ್ಧಲಿಂಗಯ್ಯನವರು ಕೂಡ ಒಬ್ಬರು' ಎಂದು ಬಣ್ಣಿಸಿದರು.

'ಸಿದ್ದಲಿಂಗಯ್ಯನವರಿಗೆ ಸಿಕ್ಕ ಅವಕಾಶಗಳಿಂದಲೇ ಪರಿಶಿಷ್ಟರ ಕಲ್ಯಾಣಕ್ಕೆ ಶ್ರಮಿಸಿದರು. ಅದರ ಮೂಲಕ ತಳ ಸಮುದಾಯದವರಲ್ಲಿ ಬದಲಾವಣೆಗೆ ಶ್ರಮಿಸಿದರು' ಎಂದು ತಿಳಿಸಿದರು.

'ಸಿದ್ಧಲಿಂಗಯ್ಯನವರನ್ನು ದಲಿತ ಕವಿ ಎಂದು ಕರೆಯುವುದರ ಮೂಲಕ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ತರವಲ್ಲ. ಅವರ ಸಾಹಿತ್ಯದಿಂದ ಸಮಾಜದಲ್ಲಿ ದೊಡ್ಡ ಪಲ್ಲಟಗಳಾಗಿವೆ. ಅವರು ಸಮಾಜದ ಹಾಗೂ ಜಗದ ಕವಿ' ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ ಅಣ್ಣಪ್ಪ ಮೇಟಿಗೌಡ ಮಾತನಾಡಿ, ‘ಸಿದ್ದಲಿಂಗಯ್ಯನವರು ಹೊಲೆ ಮಾದಿಗರ ಹಾಡು ಮೂಲಕ ದಲಿತ ಕವಿಯಾದರು. ಅವರನ್ನು ದಲಿತ ಕವಿಯ ನಿಜವಾದ ಫಲಾನುಭವಿಯೆಂದೇ ಹೇಳಬಹುದು. ಸಿದ್ದಲಿಂಗಯ್ಯ ಅವರು ರೂಪಿಸಿದ ಜೀವನಕ್ರಮ ಸಾಹಿತ್ಯದಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಹಾಗೆಯೇ ಅವರು ವ್ಯಕ್ತಿಯಾಗಿ, ಕವಿಯಾಗಿ ಸಂಸ್ಕೃತಿಯ ಚಿಂತಕರಾಗಿ ಮೆರೆದರು. ಕೊಳಗೇರಿಯ ಅನಾಮಧೇಯ ಸಿದ್ದಲಿಂಗಯ್ಯನವರು ಇಂದು ದೊಡ್ಡ ಕವಿಯಾಗಿದ್ದಾರೆ ಎಂದರು.

‘ಸಿದ್ದಲಿಂಗಯ್ಯ ಅವರ ಸಾಹಿತ್ಯ ಮತ್ತು ಚಿಂತನೆಯನ್ನು ವಿಮರ್ಶಿಸಿ ಚರ್ಚಿಸಿದಾಗ ಯುವ ಪೀಳಿಗೆಗೆ ಹೊಸ ದಾರಿ ತೋರಲು ಅವರ ಸಾಹಿತ್ಯವು ಸಹಾಯಕವಾಗುತ್ತದೆ. ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ಎರಡೂ ಒಂದೇ ಆಗಿದ್ದು ಸಾಹಿತ್ಯವು ವ್ಯಕ್ತಿ ಮತ್ತು ಸಮುದಾಯದ ಅಭಿವ್ಯಕ್ತಿಯ ಜೀವನದೃಷ್ಠಿಯಾಗಿದೆ. ಸಿದ್ದಲಿಂಗಯ್ಯ ಜನ ಸಮುದಾಯದೊಂದಿಗೆ ಕಾವ್ಯದ ಮೂಲಕ ಸದಾ ಇರುತ್ತಾರೆ’ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಎಸ್.ಸಿ, ಎಸ್.ಟಿ ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಜಿಂದಪ್ಪ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ ಮರ್ಚಟಾಳ, ಮಹಾಂತೇಶ ಬಿರಾದಾರ, ಕೆ.ಜಿ.ವೀರೇಶ, ಪಿ.ಬಸವರಾಜ ನಾಯಕ, ಸಾಹಿತಿ ಇಮಾಮುದ್ದೀನ್ ಮಾಡಗಿರಿ, ದೇವರಾಜ ಬಿಂಗಮ್, ರಾಘವೇಂದ್ರ, ಸಂತೋಷ ನಂದಿನಿ, ರುದ್ರಯ್ಯ ಉಪಸ್ಥಿತರಿದ್ದರು.

ಬಶೀರ್ ಅಹ್ಮದ್ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.