ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಂಡ್ರೆಗೆ ಅವಮಾನ | ಕಾಗೇರಿ ಪದತ್ಯಾಗಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಒತ್ತಾಯ

Last Updated 18 ಫೆಬ್ರುವರಿ 2023, 14:40 IST
ಅಕ್ಷರ ಗಾತ್ರ

ರಾಯಚೂರು: ಪಕ್ಷದ ವಕ್ತಾರರಂತೆ ವರ್ತಿಸಿರುವ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆ ಸ್ಥಾನಕ್ಕೆ ಗೌರವ ಕೊಟ್ಟು ಸ್ಥಾನ ತ್ಯಜಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕವು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಿತು.

ಸಜ್ಜನ ರಾಜಕಾರಣಿ ಮನೆತನದಿಂದ ಬಂದಿರುವ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರನ್ನುದ್ದೇಶಿಸಿ ಸಭಾಧ್ಯಕ್ಷರು ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಯಾವುದೋ ದುರುದ್ದೇಶ ಇಟ್ಟುಕೊಂಡು ಸಭಾಧ್ಯಕ್ಷರು ಮಾತನಾಡಿರುವುದನ್ನು ಸಹಿಸಿಕೊಳ್ಳಲಾಗದು. ವಿಧಾನಸಭೆ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಒಬ್ಬ ಜನನಾಯಕನಿಗೆ ಅವಮಾನ ಮಾಡಿರುವುದನ್ನು ಪ್ರಜ್ಞಾವಂತ ಸಮಾಜ ಸಹಿಸಿಕೊಳ್ಳುವುದಿಲ್ಲ. ಸಭಾಧ್ಯಕ್ಷರು ಆ ಸ್ಥಾನದಲ್ಲಿ ಉಳಿದುಕೊಳ್ಳಬೇಕಾದರೆ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು. ಕಾಗೇರಿ ಅವರು ಕೂಡಲೇ ಸ್ಥಾನ ತ್ಯಜಿಸಬೇಕು. ಇಲ್ಲವಾದರೆ ತತ್ವ ನಿಷ್ಠೆ ಬದ್ಧತೆ ಇಲ್ಲದ ರಾಜಕಾರಣಿ ಎಂದು ಭಾವಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಪಾಟೀಲ ಮಿರ್ಜಾಪುರ, ಪರಮೇಶ್ವರ ಸಾಲಿಮಠ, ಶಿವರಣ ಅರಕೇರಿ, ಎಂ,ಭೀಮರೆಡ್ಡಿ, ಚಂದ್ರಶೇಖರ್‌ ಮಿಯಾಪೂರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT