ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಅನ್ಯಾಯ ಮಾಡುವ ಸರ್ಕಾರಗಳು‌ ಭಸ್ಮವಾಗುತ್ತವೆ: ದರ್ಶನ್ ಪಾಲ್

ಮಲೆನಾಡಿನಲ್ಲಿ ಮಹಾ ಪಂಚಾಯತ್‌
Last Updated 20 ಮಾರ್ಚ್ 2021, 14:30 IST
ಅಕ್ಷರ ಗಾತ್ರ

ಶಿವಮೊಗ್ಗ: ಜನರು ಕೋವಿಡ್ ಸಂಕಷ್ಟದಲ್ಲಿ ಇದ್ದಾಗ ಸುಗ್ರಿವಾಜ್ಞೆ ಮೂಲಕ ರೈತ ವಿರೋಧಿ ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ. ದೇಶದ ರೈತರಿಗೆ ಅನ್ಯಾಯ ಮಾಡುವ ಸರ್ಕಾರಗಳು‌ ಭಸ್ಮವಾಗುತ್ತವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಡಾ.ದರ್ಶನ್ ಪಾಲ್ ಎಚ್ಚರಿಸಿದರು.

ನಗರದ ಸೈನ್ಸ್ ಮೈದಾನದಲ್ಲಿ ಶನಿವಾರ ಐಕ್ಯ ಒಕ್ಕೂಟ ಸಮಿತಿ, ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ರೈತರ ಮಹಾ ಪಂಚಾಯತ್‌ನಲ್ಲಿ‌ ಅವರು ಮಾತನಾಡಿದರು.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ರೈತರು ನಿರಂತರ ಹೋರಾಟ ನಡೆಸುತ್ರಿದ್ದಾರೆ. ರೈತರ ಒಗ್ಗಟ್ಟಿನ ಹೋರಾಟ ಇದೇ ರೀತಿ ಮುಂದುವರಿದರೆ ಎನ್ ಡಿಎ ಸರ್ಕಾರ ರಾಜಕೀಯ ಪತನ ಕಾಣಲಿದೆ ಎಂದರು.

ಗುರುನಾನಕ್ ಅವರಂತೆ ಬಸವಣ್ಣ ಟಿಪ್ಪು ಈ‌ ನೆಲದ ದಾರ್ಶನಿಕರು. ಮಲೆನಾಡಿನ ಜನರು ಗಣಿಗಾರಿಕೆ ವಿರುದ್ಧ ಹೋರಾಡಿ ಹಿಮ್ಮೆಟ್ಟಿಸಿದ್ದರು. ರೈತ ಪಮಚಾಯತ್ ಮೂಲಕ ದಕ್ಣಿಣದ ಜನರಿಗೆ ಮೊದಲ‌ ಸಂದೇಶ ನೀಡಿದ್ದಾರೆ. ದೆಹಲಿ ಹೋರಾಟದ ಜತೆ ಇದ್ದೇವೆ ಎನ್ನುವ ಭರವಸೆ ವ್ಯವಾಗಿದೆ ಎಂದು ಕೃತಜ್ಞತೆ ‌ಸಲ್ಲಿಸಿದರು.

ಮೂರು ಕೃಷಿ ಕಾಯ್ದೆಗಳ ವಿರುದ್ಶ ಎಲ್ಲರು ಸೇರಿ ಹೋರಾಟ ರೂಪಿಸಲು ಎರಡು ತಿಂಗಳಾಯಿತು. ನಂತರ ಪಂಚಾಬ್, ಹರಿಯಾಣದಲ್ಲಿ ಭಾರಿ ಪ್ರತಿರೋಧ ಅರಂಬಿಸಿದೆವು, 115 ದಿನ ಹೋರಾಟ ಗಡಿಯಲ್ಲಿ ನೆಲೆ ನಿಂತಿದ್ದೇವೆ. 11 ಸಂಧಾನ ಸಭೆ ನಡೆದರೂ ಸರ್ಕಾರ ಕಾಯ್ದೆ ಹಿಂಪಡೆದಿಲ್ಲ. ಬದಲಿಗೆ ಹೋರಾಟ ಮುರಿಯಲು ಪ್ರಯತ್ನ ನಡೆಸಿದೆ. ಆದರೆ, ಒಗ್ಗಟ್ಟು ಮುರಿಯಲು ಸಾಧ್ಯವಾಗಿಲ್ಲ. ಹೋರಾಟದ ಫಲವಾಗಿ ಹಿಂದೂ ಮುಸ್ಲಿಮರು ಕಟ್ಟ ವಿರೋಧಿಗಳು ಒಗ್ಗೂಡಿದ್ದಾರೆ. ಜನರ ಶಕ್ತಿ ಬಲಗೊಂಡಿದೆ ಎಂದರು.

ಪಂಚಾಬ್ ರೈತರು ಭಿನ್ನಾಭಿಪ್ರಾಯ ಮರೆತ ಕಾರಣ ದೆಹಲಿ ಗಡಿ ತಲುಪಿದೆವು. ನೀವೂ ಒಗ್ಗಟ್ಟು ಪ್ರದರ್ಶಿಸಿದರೆ ಇನ್ನಷ್ಟು ಶಕ್ತಿ. ಗುರಿ ಮುಟ್ಟುವವರೆಗೂ ಹೋರಾಟ ನಿಲ್ಲದು. ಬಾಂಬ್ ಗಳ ಸುರಿಮಳೆಗರೆದರೂ ಅಲ್ಲಿಂದ ಕದಲುವುದಿಲ್ಲ ಎಂದು ‌ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT