ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಚುನಾವಣೆಯಲ್ಲಿ ಸತ್ಯಕ್ಕೆ ಜನ ಬೆಲೆ ನೀಡುತ್ತಾರೆ: ಸಚಿವ ಮಧುಬಂಗಾರಪ್ಪ

Published 7 ಮೇ 2024, 7:25 IST
Last Updated 7 ಮೇ 2024, 7:25 IST
ಅಕ್ಷರ ಗಾತ್ರ

ಸೊರಬ: 'ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರ ತಲೆಯಲ್ಲಿ ಭಾವನೆಗಳಿಲ್ಲ. ಬದಲಿಗೆ ಮತದಾರರು ಸತ್ಯಕ್ಕೆ ಬೆಲೆ ಕೊಡುತ್ತಾರೆ' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.

ಇಲ್ಲಿನ ಕುಬಟೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ, ಪತ್ನಿ ಅನಿತಾ ಮಧುಬಂಗಾರಪ್ಪ ಅವರೊಂದಿಗೆ ಸರತಿ ಸಾಲಿನಲ್ಲಿ ತೆರಳಿ ಮತದಾ‌ನ ಮಾಡಿ, ಮಾಧ್ಯಮಗಳಿಗೆ ಪ್ರತಿಕ್ರಿಸಿದರು.

ಮತದಾನ ಮಾಡಿರುವುದು ಬಹಳ ಖುಷಿಯಾಗುತ್ತಿದೆ. ಮತದಾನ ಪ್ರತಿಯೊಬ್ಬರ ಹಕ್ಕು. ಜನರು ತಪ್ಪದೇ ಮತಕಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಕೋರಿದರು.

ರಾಜ್ಯದಲ್ಲಿ ಸುಳ್ಳು ಮತ್ತು ಸತ್ಯದ ನಡುವೆ ಚುನಾವಣೆ ನಡೆಯುತ್ತಿದೆ. ಇಲ್ಲಿ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ಸಹಕಾರ ನೀಡಿವೆ. ಆದ್ದರಿಂದ, ಗ್ಯಾರಂಟಿ ಯೋಜನೆಗಳು ಗೆಲ್ಲುತ್ತವೆ ಎಂದರು.

ಬಿಜೆಪಿಯವರು ಅಭಿವೃದ್ಧಿ ಹೆಸರಿನಲ್ಲಿ ಸುಳ್ಳಿನ ರಾಜಕಾರಣ ನಡೆಸಿದ್ದಾರೆ. ಸುಳ್ಳು ಭರವಸೆ ನೀಡಿಕೊಂಡು ಕಾಲ ಕಳೆದಿದ್ದಾರೆ. ಆಡಳಿತಾರೂಢ ಸರ್ಕಾರ ಜನರಿಗೆ ಸಹಕಾರ ನೀಡಿದರೆ, ಜನರು ಮರಳಿ ಸರ್ಕಾರ ರಚಿಸಲು ಸಹಕಾರ ಮಾಡುತ್ತಾರೆ. ಈ ಬಾರಿ ಈ ಬೆಳವಣಿಗೆ ಆಗಲಿದೆ ಎಂದರು.

ಜಿಲ್ಲೆಯಲ್ಲಿ ಗೀತಾಕ್ಕ ಪರ ಪ್ರಚಾರ ಸಭೆಗಳ ಮೂಲಕ ಮತದಾರರನ್ನು ಭೇಟಿ ಮಾಡುವ ಉದ್ದೇಶ ಈಡೇರಿದ್ದಲ್ಲದೆ ರಾಷ್ಟ್ರ ನಾಯಕರು ಕೂಡ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಮತಯಾಚಿಸಿದ್ದು ಹೆಚ್ಚಿನ ಬಲ ನೀಡಿದೆ ಎಂದರು.

'ಜಾತಿ, ಹಣದ ಹೆಸರಲ್ಲಿ ರಾಜಕಾರಣ ಸಲ್ಲದು'

ಚುನಾವಣೆಗಳಲ್ಲಿ ವೈಯಕ್ತಿಕ ಟೀಕೆ- ಟಿಪ್ಪಣಿಗಳು ದೂರವಾಗಬೇಕು. ಜಾತಿ, ಹಣದ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತ ಮಹಿಳೆಯರಿಗೆ ಸರ್ಕಾರದಿಂದ ನ್ಯಾಯ ಸಿಕ್ಕೇ ಸಿಗುತ್ತದೆ. ವಿಪಕ್ಷದವರು ಹತಾಶರಾಗಿ ಕೆಲವು ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT