ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪ್ಪನವರಂತೆ ನಾನೂ ನಿಮ್ಮ ಸೇವೆಗೆ ಸಿದ್ಧ; ಗೀತಾ ಶಿವರಾಜ್‌ಕುಮಾರ್

Published 1 ಮೇ 2024, 15:48 IST
Last Updated 1 ಮೇ 2024, 15:48 IST
ಅಕ್ಷರ ಗಾತ್ರ

ತ್ಯಾಗರ್ತಿ: ‘ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳಿಲ್ಲದೇ ನೇರವಾಗಿ ಜನರಿಗೆ ತಲುಪುವಂತಹ ಯೋಜನೆಯಾಗಿದ್ದು ಬಂಗಾರಪ್ಪ ಅವರ ಮಗಳಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವೆ. ತಮ್ಮ ಆಶೀರ್ವಾದ ಬೇಡುವೆ’ ಎಂದು ಗೀತಾ ಶಿವರಾಜ್‌ಕುಮಾರ್ ಕೋರಿದರು.

ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತಂದು ಗ್ರಾಮೀಣ ಪ್ರದೇಶದ ರೈತರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರಂತೆ ನಾನೂ ನಿಮ್ಮ ಸೇವೆಗೆ ಸಿದ್ಧಳಾಗಿದ್ದು ಒಂದು ಅವಕಾಶವನ್ನು ಕಲ್ಪಿಸಿಕೊಡಿ’ ಎಂದು ಮತ ಯಾಚಿಸಿದರು.

ಸಾಗರ ಶಾಸಕರಾದ ಗೋಪಾಲಕೃಷ್ಣ ಮಾತನಾಡಿ, ‘ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೆ ತಂದು ಪ್ರತಿ ರೈತರ ಅಭಿವೃಧ್ಧಿಗೆ ಶ್ರಮಿಸಿದರು. ಆಶ್ರಯ, ಆರಾಧನಾ, ಅಕ್ಷಯ ಯೋಜನೆಯಡಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಿದ್ದರು. ಅದರಂತೆ ಇಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿಗಳನ್ನು ಈಡೇರಿಸಿದೆ’ ಎಂದು ಹೇಳಿದರು.

ಮುಖಂಡರಾದ ಚೇತನ್‌ರಾಜ್ ಕಣ್ಣೂರು, ಸೋಮಶೇಖರ್ ಲಾವಿಗೆರೆ, ಶಿವರಾಜ್‌ಕುಮಾರ್, ದುನಿಯಾ ವಿಜಯ್, ಕಲಸೆ ಚಂದ್ರಪ್ಪ, ಜ್ಯೋತಿ, ರೇಖಾ ಸೇರಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಗೋಪಾಲಕೃಷ್ಣ ಬೇಳೂರು ಗೀತಾಶಿವರಾಜ್‌ಕುಮಾರ್ ಶಿವರಾಜ್‌ಕುಮಾರ್ ದುನಿಯಾವಿಜಯ್ ವೇದಿಕೆಯಲ್ಲಿ ಮುಖಂಡರೊAದಿಗೆ ಉಪಸ್ಥಿತರಿರುವುದು.
ಗೋಪಾಲಕೃಷ್ಣ ಬೇಳೂರು ಗೀತಾಶಿವರಾಜ್‌ಕುಮಾರ್ ಶಿವರಾಜ್‌ಕುಮಾರ್ ದುನಿಯಾವಿಜಯ್ ವೇದಿಕೆಯಲ್ಲಿ ಮುಖಂಡರೊAದಿಗೆ ಉಪಸ್ಥಿತರಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT