ತುಮಕೂರು: ಗ್ರಾಹಕರಿಗೆ ಸೇವೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ ಕ್ಯಾತ್ಸಂದ್ರದ ಶಮಿಕಾ ಇಂಡಿಯನ್ ಗ್ಯಾಸ್ ಏಜೆನ್ಸಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹33 ಸಾವಿರ ದಂಡ ವಿಧಿಸಿದೆ. 45 ದಿನದಲ್ಲಿ ಹಣ ಪಾವತಿಗೆ ಸೂಚಿಸಿದೆ.

‘ಸಿಲಿಂಡರ್ ಸ್ಟೌ ಸಂಪರ್ಕಿಸುವ ಪೈಪ್ನಲ್ಲಿ ಸೋರಿಕೆಯಾಗಿ ಅನಿಲದ ವಾಸನೆ ಬರುತ್ತಿದೆ’ ಎಂದು ಹೈಕೋರ್ಟ್ ವಕೀಲ, ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಕದರನಹಳ್ಳಿ ತಾಂಡ್ಯದ ಎಲ್.ರಮೇಶ್ ನಾಯಕ್ ಏಜೆನ್ಸಿಗೆ ದೂರು ನೀಡಿದ್ದರು. ಪೈಪ್ ಬಳಕೆಯ ಅವಧಿ 5 ವರ್ಷ ಮೀರಿ ಹೆಚ್ಚುವರಿ 2 ವರ್ಷ ಆಗಿತ್ತು. ಅಪಾಯಕಾರಿ ಎಂದು ಏಜೆನ್ಸಿಗೆ ದೂರು ನೀಡಿ ತಿಂಗಳು ಕಳೆದರೂ ಪೈಪ್ ಬದಲಾಯಿಸದೆ ಏಜೆನ್ಸಿ ನಿರ್ಲಕ್ಷ್ಯ ಮಾಡಿತ್ತು.

ರಮೇಶ್ ಆಯೋಗಕ್ಕೆ ದೂರು ನೀಡಿದ್ದರು. ಜಿಲ್ಲಾ ಗ್ರಾಹಕರ ಆಯೋಗ ದೂರಿನ ವಿಚಾರಣೆ ನಡೆಸಿದರು. ಗ್ರಾಹಕರ ಮಾನಸಿಕ ವೇದನೆಗೆ ಪರಿಹಾರವಾಗಿ ₹25 ಸಾವಿರ, ವ್ಯಾಜ್ಯ ವೆಚ್ಚವಾಗಿ ₹8 ಸಾವಿರ ನೀಡುವಂತೆ ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.