ಶನಿವಾರ, ಜನವರಿ 18, 2020
21 °C

‘ಭಾರತ್‌ ಬಂದ್‌’ಗೆ ಜೆಡಿಎಸ್‌ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಾರ್ಮಿಕ ಸಂಘಟನೆಗಳ ಒಕ್ಕೂಟವು ಕರೆ ನೀಡಿರುವ ಜ.8ರ ‘ಭಾರತ್‌ ಬಂದ್‌’ ಮುಷ್ಕರಕ್ಕೆ ಜೆಡಿಎಸ್‌ನ ತುಮಕೂರು ಜಿಲ್ಲಾ ಘಟಕವೂ ಬೆಂಬಲ ಸೂಚಿಸಿದೆ.

ದೇಶದ ಆರ್ಥಿಕ ಹಿಂಜರಿತಕ್ಕೆ ಕಾರಣ ಆಗಿರುವ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಿಸಬೇಕು. ಈ ನೀತಿಗಳಿಂದ ಉದ್ಯೋಗ ಕಳೆದುಕೊಳ್ಳುತ್ತಿರುವ ಕಾರ್ಮಿಕರು ಮತ್ತು ಉದ್ಯಮಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು. ಉದ್ಯೋಗ ಸೃಷ್ಠಿಗೆ ಪೂರಕವಾದ ನೀತಿಗಳನ್ನು ರೂಪಿಸಬೇಕು ಎಂಬ ಒತ್ತಾಯಕ್ಕಾಗಿ ಈ ಮುಷ್ಕರ ನಡೆಯುತ್ತಿದೆ. ಇದರಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸಕ್ರಿಯರಾಗಿ ಭಾಗವಹಿಸಲಿದ್ದಾರೆ ಎಂದು ಜಿಡಿಎಸ್‌ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ.ಆಂಜಿನಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು