ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಗ್ಯಾರಘಟ್ಟ ಗ್ರಾಮ ಪಂಚಾಯಿತಿ ಚೌಡೇನಹಳ್ಳಿ ಗ್ರಾಮದಲ್ಲಿ ಕುರಿಗಳ ಮೇಲೆ ವನ್ಯಪ್ರಾಣಿ ದಾಳಿ ಮಾಡಿದ ಪರಿಣಾಮ ಸುಮಾರು 14 ಕುರಿಗಳು ಸಾವನ್ನಪ್ಪಿ ನಾಲ್ಕು ಕುರಿಗಳು ಗಾಯಗೊಂಡಿವೆ.

ಗ್ರಾಮದ ಶಂಕರಪ್ಪ ಎಂಬವರಿಗೆ ಕುರಿಗಳು ಸೇರಿವೆ. ದಾಳಿಯಿಂದ ಸುಮಾರು ₹2.50 ಲಕ್ಷ ನಷ್ಟ ಸಂಭವಿಸಿದೆ. ಮಂಗಳವಾರ ರಾತ್ರಿ 9 ಗಂಟೆಗೆ ವನ್ಯಪ್ರಾಣಿ ಮನೆ ಬಳಿಯ ಕುರಿಗೂಡಿನೊಳಗೆ ನುಗ್ಗಿ ದಾಳಿ ನಡೆಸಿದೆ.

ಸ್ಥಳಕ್ಕೆ ಪಶು ಇಲಾಖೆ ಅಧಿಕಾರಿಗಳು ಹಾಗೂ ಉಪ ವಲಯ ಅರಣ್ಯಾಧಿಕಾರಿ ಪ್ರದೀಪ.ಜಿಡಿ, ವಲಯ ಅರಣ್ಯಾಧಿಕಾರಿ ಮಧು ಭೇಟಿ ನೀಡಿದರು. ಮರಣೋತ್ತರ ಪರೀಕ್ಷೆಯ ನಂತರ ಯಾವ ಪ್ರಾಣಿಯಿಂದ ದಾಳಿಯಾಗಿದೆ ಎಂಬುದನ್ನು ಖಚಿತ ಪಡಿಸಬಹುದೆಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಂದೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.