ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

NDA ಎಂದರೆ ‘ನಿತೀಶ್ –ನಾಯ್ಡು ಡಿಪೆಂಡೆಂಟ್ ಅಲಯನ್ಸ್‌’: ಪವನ್ ಖೇರಾ ವ್ಯಂಗ್ಯ

Published 8 ಜೂನ್ 2024, 3:25 IST
Last Updated 8 ಜೂನ್ 2024, 3:25 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಭಾಷಣ ಮಾಡಿದನ್ನು ಬಿಟ್ಟು ಎಲ್ಲಿಯೂ ಕೂಡ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ಉಲ್ಲೇಖಿಸಿರಲಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಸಂಸತ್ತಿನಲ್ಲಿ ಶುಕ್ರವಾರ ನಡೆದ ಎನ್‌ಡಿಎ ಸಭೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಪವನ್ ಖೇರಾ, ಎನ್‌ಡಿಎ ಎಂದರೆ ‘ನಿತೀಶ್ –ನಾಯ್ಡು ಡಿಪೆಂಡೆಂಟ್ ಅಲಯನ್ಸ್‌’ ಎಂದು ವ್ಯಂಗ್ಯವಾಡಿದ್ದಾರೆ.

ಸಂಸತ್ ಭವನದ ಆವರಣದಲ್ಲಿದ್ದ ರಾಷ್ಟ್ರೀಯ ನಾಯಕರಾದ ಮಹಾತ್ಮ ಗಾಂಧೀಜಿ, ಬಿ.ಆರ್‌. ಅಂಬೇಡ್ಕರ್, ಛತ್ರಪತಿ ಶಿವಾಜಿ ಸೇರಿದಂತೆ ಮಹನೀಯರ ಪ್ರತಿಮೆಗಳನ್ನು ಸ್ಥಳಾಂತರ ಮಾಡಿರುವ ಬಗ್ಗೆ ನರೇಂದ್ರ ಮೋದಿ ಅವರು ಜನರಿಗೆ ವಿವರಣೆ ನೀಡಬೇಕು ಎಂದು ಪವನ್ ಖೇರಾ ಆಗ್ರಹಿಸಿದ್ದಾರೆ.

‘ಪ್ರತಿಮೆಗಳನ್ನು ಸಂಸತ್ ಭವನದ ಆವರಣದಲ್ಲಿರುವ ‘ಪ್ರೇರಣಾ ಸ್ಥಳ’ಕ್ಕೆ ಗೌರವಯುತವಾಗಿ ಸ್ಥಳಾಂತರ ಮಾಡಲಾಗಿದೆ. ಸಂಸತ್ತಿನ ಸಂಕೀರ್ಣಕ್ಕೆ ಬರುವ ಸಂದರ್ಶಕರು ಈ ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ವೀಕ್ಷಿಸಲು ಮತ್ತು ಅವರ ಜೀವನ ಅನುಭವದಿಂದ ಸ್ಫೂರ್ತಿ ಪಡೆಯುವ ರೀತಿಯಲ್ಲಿ ಅನುಕೂಲವಾಗಲೆಂದು ಈ 'ಪ್ರೇರಣಾ ಸ್ಥಳ'ವನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಲೋಕಸಭಾ ಕಾರ್ಯಾಲಯ ತಿಳಿಸಿತ್ತು. ಈ ಕ್ರಮವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಬಂದಿಲ್ಲ. ಇದರಿಂದ ಹತಾಶೆಗೊಳಗಾಗಿರುವ ಬಿಜೆಪಿಗರು, ಮಹನೀಯರ ಪ್ರತಿಮೆಗಳನ್ನು ಬೇರೆ ಕಡೆ ಸ್ಥಳಾಂತರಿಸುವ ಮೂಲಕ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಖೇರಾ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT