ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ನಿರ್ದೇಶಕ, ನಟಿ ರವೀನಾ ತಂದೆ ರವಿ ಟಂಡನ್ ನಿಧನ

Last Updated 11 ಫೆಬ್ರುವರಿ 2022, 11:33 IST
ಅಕ್ಷರ ಗಾತ್ರ

ಮುಂಬೈ: ಹಿಂದಿ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಟಂಡನ್ ಶುಕ್ರವಾರ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಪುತ್ರಿ ಹಾಗೂ ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ಪುತ್ರ ರಾಜೀವ್ ಟಂಡನ್ ಅವರನ್ನು ರವಿ ಟಂಡನ್ ಅಗಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶದ ಸೋಂಕಿಗೆ ರವಿ ಅವರು ಒಳಗಾಗಿದ್ದರು. ಶುಕ್ರವಾರ ನಸುಕಿನ ಜಾವ 3.30ಕ್ಕೆ ಉಸಿರಾಟದ ವೈಫಲ್ಯದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

47 ವರ್ಷದ ರವೀನಾ ಅವರು ತಮ್ಮ ತಂದೆಯ ಸಾವಿನ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

‘ನೀವು ಯಾವಾಗಲೂ ನನ್ನೊಂದಿಗೆ ನಡೆಯುತ್ತೀರಿ. ನಾನು ಯಾವಾಗಲೂ ನಿಮ್ಮಲ್ಲಿರುತ್ತೇನೆ. ನೀವು ನನ್ನನ್ನು ತೊರೆದುಹೋಗಲು ಎಂದಿಗೂ ಬಿಡುವುದಿಲ್ಲ. ಲವ್ ಯು ಪಪ್ಪಾ’ ಎಂದು ತಿಳಿಸಿದ್ದಾರೆ. ತಂದೆಯ ಜೊತೆಗಿನ ಫೋಟೊಗಳನ್ನೂ ರವೀನಾ ಹಂಚಿಕೊಂಡಿದ್ದಾರೆ.

ರಾಜೇಶ್ ಖನ್ನಾ, ಶ್ರೀದೇವಿ ಮತ್ತು ಸ್ಮಿತಾ ಪಾಟೀಲ್ ಅಭಿನಯದ ‘ನಜರಾನಾ’, ರಿಷಿ ಕಪೂರ್ ಮತ್ತು ನೀತು ಕಪೂರ್ ನಟನೆಯ ‘ಜೂಟಾ ಕಹಿನ್ ಕಾ’, ಅಮಿತಾಭ್ ಬಚ್ಚನ್ ಅಭಿನಯದ ‘ಮಜ್ಬೂರ್’ ಸೇರಿದಂತೆ ಹಲವು ಸೂಪರ್‌ ಹಿಟ್‌ ಚಿತ್ರಗಳನ್ನು ರವಿ ಟಂಡನ್‌ ನಿರ್ದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT