ಬುಧವಾರ, ಅಕ್ಟೋಬರ್ 28, 2020
18 °C

ಒಟಿಟಿಯಲ್ಲಿ ‘ಮಿಸ್‌ ಇಂಡಿಯಾ’ ಸಿನಿಮಾ ಬಿಡುಗಡೆ?

. Updated:

ಅಕ್ಷರ ಗಾತ್ರ : | |

Prajavani

ಕೀರ್ತಿ ಸುರೇಶ್‌ ನಟನೆಯ ‘ಪೆಂಗ್ವಿನ್’ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಅವರು ನಾಪತ್ತೆಯಾದ ತನ್ನ ಪುತ್ರನನ್ನು ಹುಡುಕಾಟ ನಡೆಸುವ ತಾಯಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಅವರ ಮನೋಜ್ಞ ನಟನೆಗೆ ಸಿನಿಪ್ರಿಯರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.

ಈಗ ಕೀರ್ತಿ ನಟನೆಯ ತೆಲುಗಿನ ‘ಮಿಸ್‌ ಇಂಡಿಯಾ’ ಚಿತ್ರವೂ ಒಟಿಟಿಯಲ್ಲಿಯೇ ತೆರೆ ಕಾಣಲಿದೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ನರೇಂದ್ರನಾಥ್‌. ಜಗಪತಿಬಾಬು, ನವೀನ್‌ ಚಂದ್ರ, ರಾಜೇಂದ್ರ ಪ್ರಸಾದ್, ನರೇಶ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಇದು ತೆರೆಕಾಣುವ ನಿರೀಕ್ಷೆಯಿದೆ. ಆದರೆ, ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಚಿತ್ರದ ಪಾತ್ರಕ್ಕಾಗಿ ಅವರು ದೇಹದ ತೂಕವನ್ನು ಇಳಿಸಿಕೊಂಡಿದ್ದರಂತೆ. ಸವಾಲಿನಿಂದ ಕೂಡಿದ ಪಾತ್ರ ಇದಾಗಿದೆ. ಅಂದಹಾಗೆ ಇದರಲ್ಲಿಯೂ ಅವರು ಬಣ್ಣ ಹಚ್ಚಿರುವುದು ತಾಯಿಯ ಪಾತ್ರಕ್ಕೆ ಎಂಬುದು ವಿಶೇಷ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು