ಅತ್ಯುತ್ತಮ ಹಿನ್ನೆಲೆ ಗಾಯಕಿ- ಶೃತಿ ಪ್ರಹ್ಲಾದ, ಸಿನಿಮಾ- ಕರಟಕ ದಮನಕ- ‘ಹಿತ್ತಲಕ ಕರಿಬ್ಯಾಡ ಮಾವ’

ನಾಮನಿರ್ದೇಶನಗೊಂಡವರು:

ಸಂಗೀತಾ ಕಟ್ಟಿ– ಜೀನಿಯಸ್ ಮುತ್ತಾ- ಗೊರು ಗೊರುಕ ಗೊರುಕನ

ಸುನಿಧಿ ಗಣೇಶ್ –ಕಬಂಧ– ಜೋಲಿ ತೂಗೋ

ಶೃತಿ ಪ್ರಹ್ಲಾದ– ಕರಟಕ ದಮನಕ- ಹಿತ್ತಲಕ ಕರಿಬ್ಯಾಡ ಮಾವ

ಶ್ರೀಲಕ್ಷ್ಮಿ ಬೆಳ್ಮಣ್– ಇಬ್ಬನಿ ತಬ್ಬಿದ ಇಳೆಯಲಿ- ರಾಧೆ

ವೈಶ್- ಭೀಮ- ಐ ಲವ್ ಯು ಕಣೊ

ಯಾವುದೇ ಸಿನಿಮಾದ ಹೆಸರು ಹೆಚ್ಚು ಕೇಳಿಬರುತ್ತಿದೆ ಎಂದರೆ, ಆ ಸಿನಿಮಾದ ಹಾಡೊಂದು ಜನರ ಬಾಯಲ್ಲಿ ಗುನುಗುತ್ತಿದೆ ಎಂದೇ ಅರ್ಥ. ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿ ಮೂಡಿಬಂದ ‘ಕರಟಕ ದಮನಕ’ ಸಿನಿಮಾದ ‘ಹಿತ್ತಲಕ ಕರಿಬ್ಯಾಡ ಮಾವ...’ ಹಾಡು ಕೂಡ ಬಹಳ ಫೇಮಸ್ ಆದ ಈಚಿನ ಹಾಡು. ಈ ಹಾಡನ್ನು ಹಾಡಿರುವ ಗಾಯಕಿ ಶೃತಿ ಪ್ರಹ್ಲಾದ ಅವರಿಗೆ ಈ ಬಾರಿಯ ‘ಅತ್ಯುತ್ತಮ ಗಾಯಕಿ’ ಪ್ರಶಸ್ತಿ ದೊರೆತಿದ್ದು, ನಟಿ ಪ್ರಿಯಾಂಕಾ ಉಪೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಟ್ರಾವೆಲ್ ಮಾರ್ಟ್ನ ಮೋಹನ್ ಸುಂದರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ತಮ್ಮ ಸಿನಿಮಾ ನಂಟಿನ ಕುರಿತು ಮಾತನಾಡಿದ ಆರ್. ಅಶೋಕ್, ‘ನಾನು ಈಚೆಗೆ ನೋಡಿದ್ದು ಗಣೇಶ್ ಅಭಿನಯದ ಸಿನಿಮಾ. ನಾನು ರಾಜ್ಕುಮಾರ್ ಅಭಿಮಾನಿ. ಅವರ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಥಿಯೇಟರ್ಗೆ ನುಗ್ಗಿಕೊಂಡು ಹೋಗಿ ನೋಡುತ್ತಿದ್ದೆ. ‘ಆಪರೇಷನ್ ಡೈಮಂಡ್ ರಾಕೆಟ್’ ಸಿನಿಮಾವನ್ನು ಗೀತಾಂಜಲಿ ಥಿಯೇಟರ್ನಲ್ಲಿ ಹೀಗೇ ನುಗ್ಗಿಕೊಂಡು ಹೋಗಿದ್ದೆ’ ಎನ್ನುತ್ತಾ, ‘ನಾನು ಕೂಡ ಬಾತ್ರೂಂ ಸಿಂಗರ್’ ಎಂದು ನಗೆಚಟಾಕಿ ಹಾರಿಸಿದರು.

ಪ್ರಶಸ್ತಿಯನ್ನು ಸ್ವೀಕರಿಸಿದ ಗಾಯಕಿ ಶೃತಿ ಪ್ರಹಾದ, ಪ್ರಶಸ್ತಿಯನ್ನು ತಂದೆ–ತಾಯಿಗೆ ಅರ್ಪಿಸಿದರು. ಹಾಡಲು ಅವಕಾಶ ಕೊಟ್ಟ ಯೋಗರಾಜ್ ಭಟ್ಟರಿಗೆ, ಹರಿಕೃಷ್ಣ, ವಾಣಿಯವರಿಗೆ ಧನ್ಯವಾದ ಸಲ್ಲಿಸಿ, ‘ಹಿತ್ತಲಕ ಕರಿಬ್ಯಾಡ ಮಾವ...’ ಹಾಡನ್ನು ಹಾಡಿ ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.