ಭಾನುವಾರ, ಸೆಪ್ಟೆಂಬರ್ 25, 2022
21 °C

ಶಂಶೇರಾ ಚಿತ್ರಕ್ಕೆ ಸೋಲು: ಸುದೀರ್ಘ ಬರಹ ಪ್ರಕಟಿಸಿದ ಬಾಲಿವುಡ್ ನಟ ಸಂಜಯ್ ದತ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ನಟ ರಣಬೀರ್​ ಕಪೂರ್​ ಅಭಿನಯದ ‘ಶಂಶೇರಾ’ ಚಿತ್ರಕ್ಕೆ ಸಿನಿಪ್ರಿಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 
 
ಕರಣ್‌ ಮಲ್ಹೋತ್ರ ಆ್ಯಕ್ಷನ್ ಕಟ್ ಹೇಳಿರುವ ‘ಶಂಶೇರಾ’ ಸಿನಿಮಾ ಜುಲೈ 22ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. 

ಚಿತ್ರದಲ್ಲಿ ರಣಬೀರ್ ಕಪೂರ್‌, ವಾಣಿ ಕಪೂರ್, ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ವರ್ಷದ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಶಂಶೇರಾ’ ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ನಿರೀಕ್ಷಿತ ಮಟ್ಟದ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ರಣಬೀರ್​ ಕಪೂರ್ ಅಭಿಮಾನಿಗಳಿಗೆ ಈ ಚಿತ್ರ ಇಷ್ಟವಾಗಿಲ್ಲ. ವಾರಾಂತ್ಯದಲ್ಲೂ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರದತ್ತ ಮುಖ ಮಾಡಿಲ್ಲ. ಹಾಗಾಗಿ ಚಿತ್ರಕ್ಕೆ ಸೋಲು ಖಚಿತ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಚಿತ್ರ ವೀಕ್ಷಿಸಿರುವ ಸಿನಿಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದೀಗ ಚಿತ್ರ ಪ್ರದರ್ಶನದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಸಂಜಯ್ ದತ್, ನಿರ್ದೇಶಕ ಕರಣ್‌ ಮಲ್ಹೋತ್ರ ಪರ ನಿಲ್ಲುವುದಾಗಿ ಹೇಳಿಕೊಂಡಿದ್ದು, ಪ್ರೇಕ್ಷಕರು ತಡವಾಗಿ ಚಿತ್ರಮಂದಿರಗಳತ್ತ ಹೆಜ್ಜೆ ಹಾಕಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ಈ ಚಿತ್ರದಲ್ಲಿ ದರೋಗಾ ಶುದ್ಧ್ ಸಿಂಗ್ ಎನ್ನುವ ಪಾತ್ರವನ್ನು ಸಂಜಯ್ ದತ್ ನಿರ್ವಹಿಸಿದ್ದಾರೆ.

‘ಶಂಶೇರಾ’ ಸಿನಿಮಾ  ನಾವು ತೆರೆಯ ಮೇಲೆ ತಂದಿರುವ ಕನಸು. ಪ್ರತಿಯೊಂದು ಚಿತ್ರಗಳನ್ನು ಪ್ರೇಕ್ಷಕರನ್ನು ಆನಂದಿಸುವ ಉದ್ದೇಶದಿಂದಲೇ ತಯಾರಿಸಲಾಗುತ್ತದೆ. ಪ್ರತಿ ಚಿತ್ರದ ಯಶಸ್ಸು ಪ್ರೇಕ್ಷಕರಿಂದ ವ್ಯಕ್ತವಾಗುವ ಪ್ರತಿಕ್ರಿಯೆಯನ್ನು ಅವಲಂಭಿಸಿರುತ್ತದೆ. ಇದಕ್ಕೆ ‘ಶಂಶೇರಾ’ ಚಿತ್ರ ಹೊರತಲ್ಲ. ಕೆಲವರು ಚಿತ್ರವನ್ನು ವೀಕ್ಷಿಸದೆ ತಮ್ಮಿಷ್ಟದಂತೆ ಪ್ರತಿಕ್ರಿಯಿಸಿರುವುದು ಬೇಸರ ಮೂಡಿಸಿದೆ. ನಾವೆಲ್ಲರೂ ಪಟ್ಟ ಶ್ರಮವನ್ನು ಪ್ರೇಕ್ಷಕರು ಗೌರವಿಸದಿರುವುದು ನನಗೆ ಬೇಸರ ಮೂಡಿಸಿದೆ’ ಎಂದು ಬರೆದುಕೊಂಡಿದ್ದಾರೆ.

ಓದಿ... 

ದೇಶದಾದ್ಯಂತ ಸುದ್ದಿಯಲ್ಲಿರುವ ನಟಿ ಅರ್ಪಿತಾ ಮುಖರ್ಜಿ ಯಾರು? ಆಕೆಯ ಹಿನ್ನೆಲೆ ಏನು? 

ವಿಶ್ವದಾದ್ಯಂತ ತೆರೆಕಂಡ ವಿಕ್ರಾಂತ್​ ರೋಣ: ಸುದೀಪ್​ಗೆ ಶುಭ ಹಾರೈಸಿದ ರಾಜಮೌಳಿ

ವಿಕ್ರಾಂತ್​ ರೋಣ Twitter Review: ಸುದೀಪ್ ನಟನೆಗೆ ಬಹುಪರಾಕ್‌ ಎಂದ ಪ್ರೇಕ್ಷಕರು

ಗಂಡಸರಂತೆ ಮೀಸೆ ಬೆಳೆಸಿಕೊಂಡ ಮಹಿಳೆ: ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವೈರಲ್ 

ಟಿ–ಶರ್ಟ್‌ ಮೇಲೆ ನಟ ಸುಶಾಂತ್ ಭಾವಚಿತ್ರ: ಟ್ರೆಂಡ್ ಆಯ್ತು #BoycottFlipkart

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು