ಈಗ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಅಬ್ಬರ. ನಟ ಚಿರಂಜೀವಿ ನಟನೆಯ ‘ಸೈರಾ ನರಸಿಂಹ ರೆಡ್ಡಿ’ಯೂ ಇದೇ ಮಾದರಿಯ ಚಿತ್ರ. ಮೇಕಿಂಗ್ನಿಂದಲೇ ಈ ಚಿತ್ರ ದೊಡ್ಡ ಸದ್ದು ಮಾಡುತ್ತಿದೆ. ಅಕ್ಟೋಬರ್ 2ರಂದು ತೆರೆಕಾಣುತ್ತಿದ್ದು, ಅಂದೇ ಹೃತಿಕ್ ರೋಷನ್ ನಟನೆಯ ‘ವಾರ್’ ಕೂಡ ಬಿಡುಗಡೆಯಾಗುತ್ತಿದೆ.

‘ಸೈರಾ’ ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳದಲ್ಲಿ ತೆರೆಕಾಣುತ್ತಿದೆ. ‘ವಾರ್’ ಚಿತ್ರ ಹಿಂದಿಯಷ್ಟೇ ಅಲ್ಲದೆ ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಎರಡೂ ಬಿಗ್ ಬಜೆಟ್ನ ಸಿನಿಮಾಗಳು ನಿರೀಕ್ಷೆ ಹೆಚ್ಚಿಸಿವೆ.

‘ಸೈರಾ ನರಸಿಂಹರೆಡ್ಡಿ’ ಚಿರಂಜೀವಿ ಅಭಿನಯದ 151ನೇ ಸಿನಿಮಾ.ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ನರಸಿಂಹರೆಡ್ಡಿ ಅವರ ಜೀವನಗಾಥೆಯ ಚಿತ್ರ ಇದು. ಆ ಪಾತ್ರಕ್ಕೆ ಚಿರಂಜೀವಿ ಜೀವ ತುಂಬಿದ್ದಾರೆ.

ಸೈರಾಗುರು ಗೋಸಾಯಿ ವೆಂಕಣ್ಣ ಪಾತ್ರಕ್ಕೆ ಅಮಿತಾಭ್ ಬಚ್ಚನ್ ಬಣ್ಣ ಹಚ್ಚಿದ್ದಾರೆ. ಅವುಕು ಪ್ರಾಂತ್ಯದ ರಾಜನಾಗಿ ಸುದೀಪ್ ಕಾಣಿಸಿಕೊಂಡಿದ್ದಾರೆ.ನಯನತಾರಾ, ತಮನ್ನಾ ಭಾಟಿಯಾ, ಸೇತುಪತಿ ಕೂಡ ನಟಿಸಿದ್ದಾರೆ. ಈ ಚಿತ್ರಕ್ಕೆ ಸುರೇಂದರ್ ರೆಡ್ಡಿಆ್ಯಕ್ಷನ್ ಕಟ್ ಹೇಳಿದ್ದು, ಚಿರಂಜೀವಿ ಪುತ್ರ ರಾಮ್ಚರಣ್ ಬಂಡವಾಳ ಹೂಡಿದ್ದಾರೆ.

‘ವಾರ್’ ಅಬ್ಬರ

ಹೃತಿಕ್ ರೋಷನ್, ವಾಣಿ ಕಪೂರ್, ಟೈಗರ್ ಶ್ರಾಫ್ ನಟಿಸಿರುವ ಹಿಂದಿಯ ‘ವಾರ್’ ಚಿತ್ರದ ಮೇಲೂ ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದೆ.

ಆದಿತ್ಯ ಚೋಪ್ರಈ ಚಿತ್ರ ನಿರ್ಮಿಸಿದ್ದು, ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಟ್ರೈಲರ್ ವೀಕ್ಷಿಸಿದವರ ಸಂಖ್ಯೆ 3 ಕೋಟಿ ದಾಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.