ಗುರುವಾರ , ಜೂಲೈ 9, 2020
23 °C

ವಂಶಿಗೆ ಗ್ರೀನ್‌ ಸಿಗ್ನಲ್‌ ಕೊಡುವರೇ ಮಹೇಶ್‌?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

2019ರಲ್ಲಿ ತೆರೆ ಕಂಡ ಮಹೇಶ್‌ ಬಾಬು ಅಭಿನಯದ ‘ಮಹರ್ಷಿ’ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಅಮೆರಿಕದಲ್ಲಿ ಸಾಪ್ಟ್‌ವೇರ್‌ ಎಂಜಿನಿಯರ್ ಆಗಿರುವ ರಿಷಿ ಕುಮಾರ್‌ ಸ್ನೇಹಿತನಿಗಾಗಿ ಭಾರತಕ್ಕೆ ಬಂದು, ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಡುವುದು, ಕೊನೆಗೆ ಅದರಲ್ಲಿ ಜಯ ಗಳಿಸುವ ಕಥೆ ಹೊಂದಿತ್ತು ಆ ಚಿತ್ರ. ರಿಷಿ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮಹೇಶ್‌ ಬಾಬು. ಈ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಆ್ಯಕ್ಷನ್ ಕಟ್ ಹೇಳಿದ್ದರು. 

ಮಹರ್ಷಿ ನಂತರ ನಿರ್ದೇಶಕ ವಂಶಿ ಪೈಡಿಪಲ್ಲಿ ಮಹೇಶ್ ಜೊತೆ ಮತ್ತೊಂದು ಸಿನಿಮಾ ಮಾಡುವುದು ಪಕ್ಕಾ ಆಗಿದೆ. ಈ ವಿಷಯ ಹಿಂದೆಯೇ ಅಧಿಕೃತವಾಗಿ ಘೋಷಣೆಯಾಗಿತ್ತು. ಈ ಚಿತ್ರವೂ ಮಹೇಶ್ ಬಾಬು ನಟನೆಯ 27ನೇ ಚಿತ್ರವಾಗಬೇಕಿತ್ತು. ಆದರೆ ಪರಶುರಾಂ ನಿರ್ದೇಶನದ ‘ಸರ್ಕಾರ್ ವಾರಿ ಪಾಠ’ ಈ ಚಿತ್ರವನ್ನು ಹಿಂದೆ ಹಾಕಿದೆ. ಅಲ್ಲದೇ ಇದೇ ಮಹೇಶ್‌ ಬಾಬು ಅವರ 27ನೇ ಚಿತ್ರವಾಗಲಿದೆ.

ಇದರೊಂದಿಗೆ ರಾಜಮೌಳಿ ತಮ್ಮ ಮುಂದಿನ ಚಿತ್ರದಲ್ಲಿ ಮಹೇಶ್‌ ಬಾಬು ನಾಯಕ ಎಂದು ಘೋಷಿಸಿದ್ದಾರೆ. ಆದರೆ ರಾಜಮೌಳಿ ಹಾಗೂ ಮಹೇಶ್ ಕಾಂಬಿನೇಷ್‌ನ ಈ ಚಿತ್ರವೂ 2022ರಲ್ಲಿ ಸೆಟ್ಟೇರಲಿದೆ. ಹಾಗಾಗಿ ಈ ಸಿನಿಮಾ ಮಾಡಲು ಮೊದಲು ಮಹೇಶ್‌ಗೆ ತುಂಬಾನೇ ಸಮಯಾವಕಾಶಗಳಿವೆ. ಹಾಗಾಗಿ ವಂಶಿ ಅವರು ಸೂಪರ್‌ಸ್ಟಾರ್‌ನಿಂದ ಹಸಿರು ನಿಶಾನೆ ಪಡೆಯುವ ಅವಕಾಶಗಳು ಹೆಚ್ಚಿವೆ ಎನ್ನುತ್ತಿವೆ ಮೂಲಗಳು. 

‘ಊಪಿರಿ’ ಸಿನಿಮಾದ ಈ ನಿರ್ದೇಶಕ ಒಂದು ಭಿನ್ನವಾದ ಸ್ಕ್ರಿಪ್ಟ್‌ ಅನ್ನು ತಯಾರಿಸಿದ್ದು, ಸದ್ಯದಲ್ಲೇ ಮಹೇಶ್ ಅವರನ್ನು ಭೇಟಿ ಮಾಡುವ ಯೋಚನೆಯಲ್ಲಿದ್ದಾರಂತೆ. ತಮ್ಮ ಸ್ಕ್ರಿಪ್ಟ್‌ ಅನ್ನು ಮಹೇಶ್‌ ಖಂಡಿತ ಒಪ್ಪಿಕೊಳ್ಳುತ್ತಾರೆ ಎಂಬ ಆತ್ಮವಿಶ್ವಾಸ ವಂಶಿ ಅವರದ್ದು. 

ಅದ್ಯಾಗೂ ಮಹೇಶ್ ಬಾಬು ಅವರ 28ನೇ ಸಿನಿಮಾದ ಬಗ್ಗೆ ಅನೇಕ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲದರ ನಡುವೆ ‍ವಂಶಿ ಸ್ಕ್ರಿಪ್ಟ್‌ ತುಂಬಾ ಪ್ರಭಾವ ಬೀರಿದರಷ್ಟೇ ಮಹೇಶ್ ಅದನ್ನು ಒಪ್ಪಿಕೊಳ್ಳಲು ಸಾಧ್ಯ ಎನ್ನುವ ಮಾತುಗಳು ಚಾಲ್ತಿಯಲ್ಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು