ಇತ್ತೀಚೆಗೆ ಜರುಗಿದ ರಾಷ್ಟ್ರೀಯ ರಂಗಭೂಮಿ ಪ್ರಶಸ್ತಿ ಸಮಾರಂಭದಲ್ಲಿ ದಕ್ಷಿಣ ಭಾರತದಿಂದ ಪ್ರಶಸ್ತಿ ಪಡೆದ ಏಕೈಕ ನಾಟಕ ಮಂಜು ಕೊಡಗು ನಿರ್ದೇಶನದ ದಶಾನನ ಸ್ವಪ್ನಸಿದ್ಧಿ.

ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಅಧ್ಯಾಯಗಳಲ್ಲಿ ಒಂದಾದ ‘ದಶಾನನ ಸ್ವಪ್ನಸಿದ್ಧಿ’ಯು ಕನ್ನಡದಲ್ಲಿ ಮಾಂತ್ರಿಕ ವಾಸ್ತವವಾದದ ಮೊದಲ ಮಾದರಿ. ವಾಸ್ತವತೆ ಮತ್ತು ಭ್ರಾಮಕ ಕಲ್ಪನೆಗಳ ಸಂಯೋಜನೆಯ ಹೆಣಿಗೆ ಇಲ್ಲಿದೆ: ರಾಮನ ತಪಸ್ಸಿನ ಶಕ್ತಿಯ ಅಗ್ನಿಜ್ವಾಲೆಯಲ್ಲಿ ರಾವಣನ ಮೂಲಬಲದ ಬಹುಭಾಗ ನಿರ್ನಾಮವಾಗಿದೆ. ಅವನು ದುರ್ಗಿಯನ್ನು ತಣಿಸಿ ಶತ್ರುನಾಶಕ ವರ ಪಡೆಯುವ ಸಂಕಲ್ಪದಿಂದ ತಪಸ್ಸು ಮಾಡುತ್ತಾನೆ. ರಾವಣನ ಅಭೀಪ್ಸೆಯನ್ನು ನೆರವೇರಿಸದಂತೆ ಕಾಳಿಯನ್ನು ಇತರೆ ದೇವತೆಗಳು ತಡೆಹಿಡಿಯುತ್ತಾರೆ. ಹತಾಶನಾದ ರಾವಣ ತನ್ನ ತಲೆಗಳನ್ನು ದೇವಿಗೆ ನಿವೇದಿಸುವ ನಿರ್ಣಯ ಮಾಡಿದಾಗ ಶಿಲಾಮೂರ್ತಿ ಕಂಪಿಸತೊಡಗುತ್ತದೆ. ಆಗ ರಾವಣನು ಸ್ವಪ್ನಸಮಾಧಿಯನ್ನು ತಲುಪುತ್ತಾನೆ. ಅಲ್ಲಿ ಅವನಿಗೆ ಕಾಣಿಸುವ ಧ್ಯಾನಮಾಲಿನಿ ಮತ್ತು ಲಂಕಾಲಕ್ಷ್ಮಿಯರ ದೈನ್ಯಸ್ಥಿತಿಯು ರಾವಣನನ್ನು ಪಶ್ಚಾತ್ತಾಪಕ್ಕೆ ದೂಡುತ್ತದೆ. ಅವನು ರಾಮನೊಡನೆ ಏಕಾಂಗಿಯಾಗಿ ಯುದ್ಧ ಮಾಡಲು ತೀರ್ಮಾನಿಸಿದಾಗ ದುರ್ಗಾದೇವಿಯು ಪ್ರತ್ಯಕ್ಷಳಾಗಿ ‘ಮರುಹುಟ್ಟಿ’ನಲ್ಲಿ ರಾವಣನು ರಾಮನನ್ನು ಸೋಲಿಸುವ ಮತ್ತು ಸೀತೆಯು ಅವನಿಗೆ ವಶವಾಗುವ ಭರವಸೆ ಕೊಡುತ್ತಾಳೆ. ದೇವಿಯು ಮಾಯವಾದ ಬಳಿಕ ಪರಿಶುದ್ಧನಾಗುವ ಅವನಿಗೆ ಒಂದು ನೋಟ ಕಾಣುತ್ತದೆ. ಅದರಲ್ಲಿ ಅವನು ದೋಣಿಯನ್ನೇರುತ್ತಾನೆ. ಅಲೆಯೆದ್ದು ದೋಣಿ ಮಗುಚಿ ಅವನು ಪ್ರವಾಹದಲ್ಲಿ ಮುಳುಗಿ ಮೇಲೇಳುವಾಗ ಕುಂಭಕರ್ಣ ಕಾಣುತ್ತಾನೆ. ಇಬ್ಬರೂ ಹೊಳೆಯೊಡನೆ ಹೋರಾಡಿ, ಶಿಶುರೂಪವನ್ನು ತಳೆದು ದಡ ಸೇರುತ್ತಾರೆ. ಅದೊಂದು ಆಶ್ರಮ. ಶಿಶುರೂಪದ ರಾವಣ, ಕುಂಭಕರ್ಣರು ಅಳುತ್ತಿದ್ದಾರೆ. ಸೀತೆ ಬಂದು ತನ್ನ ಆ ಅವಳಿ ಮಕ್ಕಳನ್ನೆತ್ತಿಕೊಂಡು ಮುದ್ದಾಡಿ ಮೊಲೆಯೂಡುತ್ತಾಳೆ. ಈ ಸ್ವಪ್ನದೃಶ್ಯಕ್ಕೆ ವಿಸ್ಮಿತನಾಗಿ ಎಚ್ಚರಗೊಂಡಾಗ ರಾವಣ ಮಂಡೋದರಿಯ ತೊಡೆಯ ಮೇಲಿದ್ದಾನೆ. ಅವನನ್ನು ಸಂತೈಸುವ ಮಂಡೋದರಿಯು ರಾಮನನ್ನು ಸೀತೆಗೊಪ್ಪಿಸುವಂತೆ ಹೇಳುತ್ತಾಳೆ. ಕಾಳಗದಲ್ಲಿ ರಾಮನನ್ನು ಸೋಲಿಸಿ, ತನ್ನನ್ನು ಗೆದ್ದ ಸೀತೆಗೆ ರಾಮನನ್ನು ಗೆದ್ದು ಕಪ್ಪ ಸಲ್ಲಿಸುತ್ತೇನೆ ಅನ್ನುತ್ತಾನೆ ರಾವಣ.

ಕನಸು-ವಾಸ್ತವಗಳ ಈ ಸಂಕೀರ್ಣ ಎಳೆಯನ್ನು ರಂಗದ ಮೇಲೆ ಅದೇ ಸಂಕೀರ್ಣತೆಯಲ್ಲಿ ತಂದಿರುವವರು ನಿರ್ದೇಶಕ ಮಂಜು ಕೊಡಗು. ‘ರಂಗಭೂಮಿಯು ಸಿನಿಮಾ, ಸೀರಿಯಲ್ ಮೋಡ್ಗೆ ಹೋಗುತ್ತಿದೆಯೇನೋ ಅನ್ನಿಸುತ್ತಿದ್ದಾಗ ಇದಕ್ಕೊಂದು ದಾರಿಯಾಗಿ ಕಂಡಿದ್ದು ‘ದಶಾನನ ಸ್ವಪ್ನಸಿದ್ಧಿ’. ಕಡಿಮೆ ಸ್ಥಳಾವಕಾಶದಲ್ಲಿ, ಕೆಲವೇ ಕಲಾವಿದರೊಟ್ಟಿಗೆ, ಈಗಿರುವುದಕ್ಕಿಂತ ಭಿನ್ನ ರಂಗ ಮಾದರಿಯೊಂದನ್ನು ಸೃಷ್ಟಿಸಲು ಸಾಧ್ಯವಾ? ಅಂತ ಪ್ರಯತ್ನ ಮಾಡಿದೆವು. ಕಾವ್ಯದ ಜೊತೆ ಕೆಲಸ ಮಾಡುವಾಗ ಸೃಜನಶೀಲತೆಯ ಸಾಧ್ಯತೆ ಹೆಚ್ಚಿರುತ್ತದೆ. ಭಾವ ವಿಸ್ತಾರ, ದೇಹ ಚಲನೆಯ ವಿಸ್ತಾರದ ಮೂಲಕ ಮಾತನ್ನು ಮೀರಿದ ಮತ್ತೇನನ್ನೋ ತೋರಿಸಲು ಸಾಧ್ಯವಿದೆಯೇ ಅಂತ ಸತತವಾಗಿ ಯೋಚಿಸುತ್ತ ಇದು ಮೂಡಿಬಂತು...’ ಎನ್ನುತ್ತಾರೆ ನಿರ್ದೇಶಕ ಮಂಜು ಕೊಡಗು.

ದ್ರಾವಿಡ ಕ್ರಿಯಾವಿಧಿಯಲ್ಲಿ ಬಳಸುವ ತಮಿಳು ಪಠ್ಯವನ್ನು ನಾಟಕದ ಆರಂಭದಲ್ಲಿ ಬಳಸಿಕೊಂಡಿರುವುದು ಪರಂಪರಾಗತ ವೇದ ಶ್ಲೋಕ ಪಠಣದ ರೂಢಿಯನ್ನು ಮುರಿದಿದೆ. ರಾವಣ ಪಾತ್ರಧಾರಿ ಅವಿನಾಶ್ ರೈ ಮಂತ್ರಲಯವನ್ನು ಉಚ್ಚರಿಸುವ ಪರಿಯಲ್ಲಿ ನಟ, ಮಾತು ಮತ್ತು ಚಲನೆಯು ಈ ಪಠಣದಿಂದಲೇ ಹುಟ್ಟಿದೆಯೇನೋ ಅನ್ನಿಸುವಷ್ಟು ತೀವ್ರವಾಗಿ ನೋಡುಗರನ್ನು ಸೆಳೆದು, ನಾಟಕದ ನೋಡುವಿಕೆಗೆ ಸಿದ್ಧಗೊಳಿಸುತ್ತದೆ. ಜಾಗೃತ-ಸ್ವಪ್ನದ ಐದು ಅವಸ್ಥೆಗಳನ್ನು ತೋರಿಸಲು ಭಿನ್ನ ನೃತ್ಯಪ್ರಕಾರಗಳನ್ನು ಬಳಸಿಕೊಳ್ಳಲಾಗಿದೆ. ಕಾಳಿ, ಲಂಕಿಣಿ, ದುರ್ಗೆ, ಸೀತೆ ಮತ್ತು ಮಂಡೋದರಿ- ಈ ಐದೂ ಪಾತ್ರಗಳನ್ನೂ ಅದ್ಭುತವಾಗಿ ನಿಭಾಯಿಸಿರುವ ಶ್ವೇತಾ ಅರೆಹೊಳೆಯವರು.

ರಾವಣ, ಕುಂಭಕರ್ಣರು ಸೀತೆಯ ಮಗುವಾಗಿ ಮೊಲೆಹಾಲು ಕುಡಿಯುವ ದೃಶ್ಯವು ಎಲ್ಲೆ ಮೀರದೆ ಧ್ವನಿಪೂರ್ಣವಾಗಿ ಮೂಡಿ, ವಾತ್ಸಲ್ಯವು ಭಕ್ತಿಯಾಗಿ ಪರಿವರ್ತನೆಯಾಗುವ ಸೋಜಿಗವನ್ನು ನೋಡಿದವರಿಗೆ ಇವರಿಬ್ಬರ ಮಾತಿನ ಧ್ವನಿಯ ಅರಿವಾಗುತ್ತದೆ.

ಇತ್ತೀಚೆಗೆ ಜರುಗಿದ ರಾಷ್ಟ್ರೀಯ ರಂಗಭೂಮಿ ಪ್ರಶಸ್ತಿ ಸಮಾರಂಭದಲ್ಲಿ ಈ ನಾಟಕದ ವಸ್ತ್ರವಿನ್ಯಾಸಕಿ ರಾಜೇಶ್ವರಿ ಕೊಡಗು ‘ಅತ್ಯುತ್ತಮ ವಸ್ತ್ರವಿನ್ಯಾಸ’ ಪ್ರಶಸ್ತಿಯನ್ನು ಪಡೆದಿದ್ದಾರೆ. ದೇಶದಾದ್ಯಂತ ಬಂದ 367 ನಾಟಕಗಳ ಪೈಕಿ ಈ ನಾಟಕವು ಅತ್ಯುತ್ತಮ ಹತ್ತು ನಾಟಕಗಳಲ್ಲಿ ಒಂದಾಗಿ ಆಯ್ಕೆಯಾಗಿತ್ತು. ಐದು ವಿಭಾಗದಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಇದು, ದಕ್ಷಿಣ ಭಾರತದಿಂದ ಆಯ್ಕೆಯಾಗಿದ್ದ ಐದು ನಾಟಕಗಳಲ್ಲಿ ಪ್ರಶಸ್ತಿ ಪಡೆದ ಏಕೈಕ ನಾಟಕ. ನಾಟಕದ ಸಂಗೀತವನ್ನು ಅರುಣ್ಕುಮಾರ್, ಭರತ್, ಸುಮೇಧ್ ಕಶ್ಯಪ್, ಬೆಳಕು ವಿನ್ಯಾಸವನ್ನು ಮಂಜು ಹಿರೇಮಠ ನಿರ್ವಹಿಸಿದ್ದಾರೆ. ರಂಗದ ಮೇಲೆ ಚೈತ್ರಾ ಕೋಟ್ಯಾನ್ ಮತ್ತು ಚರಿತ್ ಸುವರ್ಣ ಕೂಡ ಇದ್ದಾರೆ.

‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಲೌಕಿಕ-ಅಲೌಕಿಕದ ಸಂಯೋಗವು ಉತ್ಕಟ ಸ್ಥಿತಿಯಲ್ಲಿ ಕಾಣಿಸುವುದು ‘ದಶಾನನ ಸ್ವಪ್ನಸಿದ್ಧಿ’ ಭಾಗದಲ್ಲಿ. ಇದನ್ನು ರಂಗಪಠ್ಯವಾಗಿಸಿ ರಂಗಭೂಮಿಯ ಸಾಧ್ಯತೆಗಳನ್ನು ನಾಟಕ ತಂಡವು ವಿಸ್ತರಿಸಿದೆ. ಈ ಬಗೆಯ ಪ್ರಯೋಗಗಳು ಕಾವ್ಯವನ್ನು ಮನಸ್ಸಿಗೆ ಹತ್ತಿರವಾಗಿಸುತ್ತವೆ. ಕಾವ್ಯಗ್ರಹಿಕೆಯ ಹೊಸಕಿಂಡಿಗಳನ್ನೂ ಈ ನಾಟಕವು ತೆರೆದಿದ್ದು, ಕುವೆಂಪು ಹೇಳುವ ‘ಕಣ್ಣಂತೆ ಕಾಣ್ಕೆಯಯ್!’ ಮಾತಿಗೆ ಅನ್ವರ್ಥವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.