ಶನಿವಾರ, ಮೇ 21, 2022
19 °C

ಬಿಗ್‌ಬಾಸ್ ಸ್ಪರ್ಧಿ ತೇಜಸ್ವಿ ಪ್ರಕಾಶ್‌ರನ್ನು ತರಾಟೆಗೆ ತೆಗೆದುಕೊಂಡ ಬಿಪಾಶ ಬಸು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಬಿಗ್ ಬಾಸ್ ಸೀಸನ್ 15 ಹಿಂದಿ ಆವೃತ್ತಿ ಬಹುತೇಕ ಫೈನಲ್ ಹಂತಕ್ಕೆ ತಲುಪಿದೆ. ಈ ಬಾರಿಯ ಸ್ಪರ್ಧಿಗಳ ಪೈಕಿ, ತೇಜಸ್ವಿ ಪ್ರಕಾಶ್ ಅವರು ನಟಿ ಶಮಿತಾ ಶೆಟ್ಟಿಯವರನ್ನು ಆಂಟಿ ಎಂದು ಕರೆದು ವಿವಾದಕ್ಕೀಡಾಗಿದ್ದಾರೆ.

ಬಿಗ್‌ಬಾಸ್ ಹೋಟೆಲ್ ಟಾಸ್ಕ್ ಸಂದರ್ಭದಲ್ಲಿ ತೇಜಸ್ವಿ ಅವರು ಶಮಿತಾರನ್ನು ‘ಆಂಟಿ‘ ಎಂಬ ಪದ ಬಳಸಿ ಕರೆದಿರುವುದನ್ನು ಬಾಲಿವುಡ್ ನಟಿ ಬಿಪಾಶ ಬಸು ಖಂಡಿಸಿದ್ದಾರೆ.

ಈ ಕುರಿತು ಬಿಪಾಶ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಮೊದಲು ತಪ್ಪು ಮಾಡಿ ನಂತರ ಕ್ಷಮೆ ಕೇಳುವುದು ಸರಿಯಲ್ಲ. ವಯಸ್ಸಿನ ಕಾರಣಕ್ಕೆ ನಿಂದಿಸುವುದು ಖಂಡಿತಾ ತಪ್ಪು ಎಂದು ಪರೋಕ್ಷವಾಗಿಯೇ, ಹೆಸರು ಉಲ್ಲೇಖಿಸದೆಯೇ ತೇಜಸ್ವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಮಿತಾ ಶೆಟ್ಟಿಯನ್ನು ಬಿಪಾಶ ಬಸು ಬೆಂಬಲಿಸಿದ್ದಾರೆ. ಹೋಟೆಲ್ ಟಾಸ್ಕ್ ಸಂದರ್ಭ ತೇಜಸ್ವಿ ಮತ್ತು ಶಮಿತಾ ಮಧ್ಯೆ ಈ ಮಾತುಕತೆ ನಡೆದಿತ್ತು. ನಂತರದಲ್ಲಿ ತೇಜಸ್ವಿ ಕ್ಷಮೆ ಕೇಳಲು ಯತ್ನಿಸಿದರಾದರೂ, ಶಮಿತಾ ಅವರ ಮಾತು ಕೇಳಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು