ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

BBK11: ತೀವ್ರ ಕುತೂಹಲ ಮೂಡಿಸಿದ ಸ್ವರ್ಗ ನರಕದ ಪರಿಕಲ್ಪನೆ–ಹೋಂ ಟೂರ್ ವಿಡಿಯೊ ನೋಡಿ

ಬಿಗ್ ಬಾಸ್ ಕನ್ನಡ ಚಾಫ್ಟರ್ 11ರ ಆರಂಭಕ್ಕೆ ಕ್ಷಣಗಣನೇ ಶುರುವಾಗಿದೆ.
Published : 29 ಸೆಪ್ಟೆಂಬರ್ 2024, 10:34 IST
Last Updated : 29 ಸೆಪ್ಟೆಂಬರ್ 2024, 10:34 IST
ಫಾಲೋ ಮಾಡಿ
Comments

ಬೆಂಗಳೂರು: ಬಿಗ್ ಬಾಸ್ ಕನ್ನಡ ಚಾಫ್ಟರ್ 11ರ ಆರಂಭಕ್ಕೆ ಕ್ಷಣಗಣನೇ ಶುರುವಾಗಿದೆ. ಲಕ್ಷಗಟ್ಟಲೇ ಅಭಿಮಾನಿಗಳನ್ನು ಹೊಂದಿರುವ ಈ ಶೋ ಈ ಸಾರಿ ಸಂಪೂರ್ಣ ಭಿನ್ನವಾಗಿದೆ ಎಂಬುದು ಮನೆಯ ಪರಿಕಲ್ಪನೆಯನ್ನು ನೋಡಿದ ತಕ್ಷಣ ಗೊತ್ತಾಗಲಿದೆ.

ಹೌದು, ಈ ಬಾರಿಯ ಬಿಗ್ ಬಾಸ್ ಮನೆಯನ್ನು ಹಿಂದೆಂದಿಗಿಂತಲೂ ಕಾಣದ ರೀತಿ ಅದ್ಭುತವಾಗಿ ನಿರ್ಮಿಸಲಾಗಿದೆ. ಸ್ವರ್ಗ–ನರಕ ಪರಿಕಲ್ಪನೆಯ ಅಡಿ ಮನೆಯೊಳಗೇ ಎರಡು ಮನೆ ಮಾಡಲಾಗಿದೆ.

ಈ ಕೋಟೆಯೊಳಗೆ ಕನಸನ್ನು ಅರಸುವವರು ಸ್ವರ್ಗಕ್ಕೆ ಹೋಗುತ್ತಾರೋ ನರಕಕ್ಕೆ ಹೋಗುತ್ತಾರೋ ಎಂಬ ಸವಾಲನ್ನು ಆರಂಭದಲ್ಲೇ ನೀಡಲಾಗಿದೆ.

ಅತ್ಯಂತ ಐಷಾರಾಮಿ ಎನ್ನುವಂತೆ ಸ್ವರ್ಗದ ಮನೆಯನ್ನು ನಿರ್ಮಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ನರಕದ ಮನೆ ನಿರ್ಮಿಸಲಾಗಿದೆ. ಯಾರಾರು ಯಾವುದನ್ನು ಅನುಭವಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಕುರಿತ ವಿಡಿಯೊ ತುಣಕನ್ನು ಕಲರ್ಸ್ ಕನ್ನಡ ಹೋಂ ಟೂರ್ ಅಡಿ ಹಂಚಿಕೊಂಡಿದೆ. ಮನೆಯ ನಿರ್ಮಾಣ, ಪರಿಕಲ್ಪನೆ ನೋಡುಗರಿಗೆ ತೀವ್ರ ಕುತೂಹಲ ಮೂಡಿಸಿದೆ.

ಸಂಜೆ 6ರಿಂದ ಕಲರ್ಸ್‌ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆರಂಭವಾಗುವ ಮೊದಲೇ ಕೆಲವು ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.

ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್‌, ಲಾಯರ್ ಜಗದೀಶ್, ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತೆ ಎಂದು ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಹಾಗೂ ನಾಲ್ಕನೇ ಸ್ಪರ್ಧಿಯಾಗಿ ಉತ್ತರ ಕರ್ನಾಟಕ ಮೂಲದ ಗೋಲ್ಡ್‌ ಸುರೇಶ್‌ ಅವರ ಹೆಸರನ್ನು ರಾಜ–ರಾಣಿ ಕಾರ್ಯಕ್ರಮದ ಫಿನಾಲೆಯಲ್ಲಿ ಬಹಿರಂಗ ಮಾಡಲಾಗಿದೆ.

ಇನ್ನುಳಿದ ಸ್ಪರ್ಧಿಗಳು ಯಾರು ಎನ್ನುವುದು ಕಾರ್ಯಕ್ರಮ ಆರಂಭವಾದ ಬಳಿಕ ತಿಳಿದು ಬರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT