ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಪೂಜಾ ಪಾತ್ರಧಾರಿ ಆಶಾ ಅಯ್ಯನರ್ ಆಚೆ ಬಂದಿದ್ದಾರೆ. ಈ ಬಗ್ಗೆ ಖುದ್ದು ನಟಿ ಆಶಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟಪಡಿಸಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳ ತಂಗಿ ಪೂಜಾ ಪಾತ್ರದಲ್ಲಿ ಆಶಾ ನಟಿಸುತ್ತಿದ್ದರು. ಇತ್ತೀಚೆಗೆ ಪೂಜಾಳ ಪಾತ್ರಕ್ಕೆ ತಿರುವು ಸಿಕ್ಕಿತ್ತು. ಹೀಗಿರುವಾಗಲೇ, ಭಾಗ್ಯಲಕ್ಷ್ಮೀ ಧಾರಾವಾಹಿಯಿಂದ ಪೂಜಾ ಪಾತ್ರಧಾರಿ ಆಶಾ ಅಯ್ಯನರ್ ಹೊರ ನಡೆದಿದ್ದಾರೆ. ಜೊತೆಗೆ ಧಾರಾವಾಹಿಯಿಂದ ಆಚೆ ಬಂದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
.PHOTOS |ನಿನಗಾಗಿ ಧಾರಾವಾಹಿ ಅಂತ್ಯ: ನಟಿ ದಿವ್ಯಾ ಉರುಡುಗ ಭಾವುಕ ವಿದಾಯ.PHOTOS | ಮಾದಕ ನೋಟ ಬೀರಿದ 'ಅಣ್ಣಯ್ಯ' ಧಾರಾವಾಹಿ ಖ್ಯಾತಿಯ ನಿಶಾ ರವಿಕೃಷ್ಣನ್.
ಆಶಾ ಅಯ್ಯನರ್ ಪೋಸ್ಟ್ನಲ್ಲಿ ಏನಿದೆ?

‘ಎಲ್ಲರಿಗೂ ನಮಸ್ಕಾರ.. ನಾನು ನಿಮ್ಮ ಭಾಗ್ಯಲಕ್ಷ್ಮೀ ಪೂಜಾ. ಆದರೆ ಇನ್ನು ಮುಂದೆ ಭಾಗ್ಯಲಕ್ಷ್ಮೀಯಲ್ಲಿ ಪೂಜಾ ಆಗಿ ಬರುವುದಿಲ್ಲ ಅಂತ ಹೇಳೋಕೆ ತುಂಬಾ ಬೇಸರ ಇದೆ. ಈ ತಂಡವನ್ನು ಬಿಡೋದು ಸುಲಭದ ಮಾತಾಗಿರಲಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ನಾನು ಭಾಗ್ಯಲಕ್ಷ್ಮೀಯನ್ನು ಬಿಡುತ್ತಿದ್ದೇನೆ. ಮೂರು ವರ್ಷ ಭಾಗ್ಯಲಕ್ಷ್ಮೀ ತಂಡ ನನಗೆ ತುಂಬಾನೇ ಬೆಂಬಲ ನೀಡಿದೆ. ತುಂಬಾನೇ ನೆನಪುಗಳನ್ನು ಕೊಟ್ಟಿದೆ ಜೊತೆಗೆ ತುಂಬಾನೇ ಕಲಿಸಿದೆ. ಅದನ್ನು ನಾನು ನನ್ನ ಜೀವನದಲ್ಲಿ ಯಾವಾಗಲೂ ಅಳವಡಿಸಿಕೊಳ್ಳುತೀನಿ’.

‘ನನಗೆ ಭಾಗ್ಯಲಕ್ಷ್ಮೀ ತಂಡದ ಟೆಕ್ನಿಷಿಯನ್ಸ್, ಕಲರ್ಸ್ ಕನ್ನಡ ಟೀಂ, ಜೈ ಮಾತಾ ಕಂಬೈನ್ಸ್ ಪ್ರೊಡಕ್ಷನ್ ಹೌಸ್ ಹಾಗೂ ಎಲ್ಲಾ ಕಲಾವಿದರು (co-artist) ತುಂಬಾನೇ ಬೆಂಬಲ ನೀಡಿ ತುಂಬಾನೇ ಪ್ರೀತಿ ಕೊಟ್ಟಿದೀರಾ. ನಾನು ಈ ಪಾತ್ರವನ್ನ ಇಲ್ಲಿ ತನಕ ತರಲು ಕಾರಣ ನೀವೇ ಆಗಿರುತೀರಾ. ನಿಮ್ಮೆಲ್ಲರಿಗೂ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲುವುದಿಲ್ಲ. ಹಾಗೇ ಇಷ್ಟು ವರ್ಷ ಭಾಗ್ಯಲಕ್ಷ್ಮೀಯ ಪೂಜಾಳನ್ನು ತುಂಬಾ ಪ್ರೀತಿಯಿಂದ ಬೆಳಿಸಿಕೊಂಡು ಬಂದಿದ್ದೀರಾ. ಹಾಗೇಯೇ ಇನ್ನು ಮುಂದೆ ಬರುವಂತಹ ಪೂಜಾಳನ್ನು ಕೂಡ ಅಷ್ಟೇ ಪ್ರೀತಿ ಮಾಡಿ. ಅಷ್ಟೇ ಬೆಂಬಲಿಸಿ. ಹಾಗೂ ಭಾಗ್ಯಲಕ್ಷ್ಮೀನ ಇನ್ನೂ ಎತ್ತರಕ್ಕೆ ಬೆಳೆಸಿ ಎಂದು ನನ್ನ ಅಭಿಮಾನಿಗಳಿಗೆ ಹಾಗೂ ನನ್ನ ಪ್ರೀತಿಯ ವೀಕ್ಷಕರಿಗೆ ವಿನಂತಿಸುತ್ತೇನೆ’.

ತುಂಬಾ ಧನ್ಯವಾದಗಳು.. ತುಂಬಾ ಪ್ರೀತಿ ಕೊಟ್ಟು ಇಲ್ಲಿ ತನಕ ಕರೆದುಕೊಂಡು ಬಂದಿದ್ದೀರಾ. ಇನ್ನು ಮುಂದೆ ನಾನು ಏನೇ ಮಾಡಿದರೂ ಕೂಡ ಬೆಂಬಲ ಹಾಗೂ ಪ್ರೀತಿ ಬೇಕು. ಅದಕ್ಕೆ ನಾನು ಯಾವಾಗಲೂ ಆಭಾರಿಯಾಗಿರುತ್ತೇನೆ. ಈ ತಂಡದ ಜೊತೆ ಮತ್ತೆ ಭವಿಷ್ಯದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕರೆ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲ. ಏಕಂದರೆ ನನಗೆ ಅಷ್ಟು ಪ್ರೀತಿ ಕೊಟ್ಟಿದೆ ಅಷ್ಟು ಬೆಂಬಲ ನೀಡಿದೆ ಈ ಚಾನೆಲ್. ಮತ್ತೆ ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಗಲಿ ಅಂತ ಹೇಳುತ್ತಾ.. ಈ ಇಡೀ ತಂಡದ ಜೊತೆ ತುಂಬಾ ಒಳ್ಳೆ ಸಂಬಂಧ ಇದೆ. ಅದನ್ನ ಉಳಿಸಿಕೊಂಡು ಹೋಗುತ್ತೇನೆ. ಹಾಗೆ ನನ್ನಿಂದ ಏನಾದರೂ ತೊಂದರೆ ಆಗಿದ್ದರೆ ಅಥವಾ ಬೇಜಾರಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ. ಅವಕಾಶ ನೀಡದಕ್ಕೆ ಧನ್ಯವಾದಗಳು’ ಎಂದು ನಟಿ ಆಶಾ ಅಯ್ಯನರ್ ಬರೆದುಕೊಂಡಿದ್ದಾರೆ.

ಸದ್ಯ ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೊಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಆಶಾ ಅವರ ಮುಂದಿನ ಕೆಲಸಕ್ಕೆ ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಪೂಜಾ ಪಾತ್ರ ಹೇಗಿತ್ತು ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.