ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ 'ಚಾಂಪಿಯನ್ಸ್ ಆಫ್ ದಿ ಅರ್ಥ್' ಪ್ರಶಸ್ತಿಯನ್ನು ತಮಿಳುನಾಡಿನ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರಿಗೆ ನೀಡಲಾಗಿದೆ. ನೈರೋಬಿಯಲ್ಲಿ ಬುಧವಾರ ನಡೆದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ ಅವರು 2025ನೇ ಸಾಲಿನ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಪ್ಲಾಸ್ಟಿಕ್ ಬಳಕೆ ತಗ್ಗಿಸುವುದು, ಅರಣ್ಯ ಪ್ರದೇಶದ ವಿಸ್ತರಣೆ ಹಾಗೂ ವನ್ಯಜೀವಿಗಳ ಸಂರಕ್ಷಣೆ ಸೇರಿದಂತೆ ಭಾರತದಲ್ಲಿ ಪರಿಸರ ಸವಾಲುಗಳ ವಿರುದ್ಧದ ಹೋರಾಟಗಳಲ್ಲಿ ಅವರು ಗಮನಾರ್ಹ ಕೆಲಸ ಮಾಡಿದ್ದಾರೆ ಎಂಬುದಾಗಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಸಮಾಜಮುಖಿ, ಸ್ಫೂರ್ತಿದಾಯಕ ಕಾರ್ಯಕ್ಕಾಗಿ ಪ್ರಶಸ್ತಿ ಸ್ವೀಕರಿಸಿರುವ ಸಾಹು ಅವರು, 'ಮ್ಯಾಂಗ್ರೂ ಗಿಡಗಳನ್ನು ಬೆಳೆಸುವ ಹಾಗೂ ಆ ಪ್ರದೇಶವನ್ನು ಶುಚಿಯಾಗಿಡುವ ಕೆಲಸವನ್ನು ತಮ್ಮದೇ ಎಂದುಕೊಂಡು ಮಾಡುತ್ತಿದ್ದ ಹಾಗೂ ನನ್ನೊಂದಿಗೆ ನಿಂತ ಸ್ಥಳೀಯರೇ ನನಗೆ ಸ್ಫೂರ್ತಿ' ಎಂದು ಹೇಳಿಕೊಂಡಿದ್ದಾರೆ.

ಯಾರು ಈ ಸುಪ್ರಿಯಾ ಸಾಹು?
1991ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಸುಪ್ರಿಯಾ ಸಾಹು, ಕಳೆದ ನಾಲ್ಕೂವರೆ ವರ್ಷಗಳಿಂದ ತಮಿಳುನಾಡು ಸರ್ಕಾರದ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

ವಿಶ್ವಸಂಸ್ಥೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಬಾಲ್ಯದ ದಿನಗಳಲ್ಲೇ ಪರಿಸರ ಸಂರಕ್ಷಣೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು ಸುಪ್ರಿಯಾ. ಅವರಿಗೆ ಆನೆಗಳೆಂದರೆ ಅಚ್ಚುಮೆಚ್ಚು. ಅವು ಸ್ಥಿತಿಸ್ಥಾಪಕತ್ವ ಗುಣ, ಕೌಟುಂಬಿಕ ಬಾಂಧವ್ಯ, ನಾಯಕತ್ವ ನಿಭಾಯಿಸುವುದು ಹೇಗೆ ಎಂಬುದನ್ನು ಕಲಿಸುತ್ತವೆ ಎಂದು ಪ್ರತಿಪಾದಿಸುವ ಅವರ ಇನ್ಸ್ಟಾಗ್ರಾಂ ಖಾತೆಯ ತುಂಬೆಲ್ಲ ಆನೆಗಳದ್ದೇ ರಾಜ್ಯಭಾರ!

ಸಾಹು ಅವರ 30 ವರ್ಷಗಳ ವೃತ್ತಿ ಜೀವನದುದ್ದಕ್ಕೂ ಭಾರತದ ಶ್ರೀಮಂತ ಜೀವವೈವಿಧ್ಯ ಕುರಿತಾದ ಒಲವು ವಿಸ್ತಾರಗೊಳ್ಳುತ್ತಲೇ ಇದೆ. ಮಾನವನ ಬೇಜವಾವ್ದಾರಿ ಚಟುವಟಿಕೆಗಳಿಂದ ಉಂಟಾಗುತ್ತಿರುವ ಹಾನಿಯ ಬಗ್ಗೆಯೂ ಚೆನ್ನಾಗಿ ಅರಿತುಕೊಂಡಿದ್ದಾರೆ.

ತಾವು ನೀಲಗಿರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ದಿನಗಳನ್ನು ಸ್ಮರಿಸಿರುವ ಅವರು, 'ಪ್ರಾಣಿಗಳು ಪ್ಲಾಸ್ಟಿಕ್ ತ್ಯಾಜ್ಯ ತಿನ್ನುವುದನ್ನು ನೋಡಿದಾಗ, ನಮ್ಮ ಭೂಮಿ ಉಸಿರುಗಟ್ಟುತ್ತಿದೆ ಎಂಬುದು ಮನವರಿಕೆಯಾಯಿತು. ಆ ಅನುಭವ ನನ್ನನ್ನು ಪರಿವರ್ತಿಸಿತು' ಎಂದು ಹೇಳಿಕೊಂಡಿದ್ದಾರೆ.

ಸುಪ್ರಿಯಾಗೆ ಪ್ರಶಸ್ತಿ ನೀಡಿದ್ದೇಕೆ?
ಹವಾಮಾನಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳು, ಪರಿಸರ ವ್ಯವಸ್ಥೆಯನ್ನು ಮತ್ತೆ ಸಹಜ ಸ್ಥಿತಿಗೆ ತರಲು ಮಾಡಿದ ಪ್ರಯತ್ನಗಳು ಹಾಗೂ ತಮಿಳುನಾನಾದ್ಯಂತ ತಣ್ಣನೆಯ ವಾತಾವರಣ ಸೃಷ್ಟಿಸಲು ಮುಂಚೂಣಿಯಲ್ಲಿ ನಿಂತದ್ದಕ್ಕಾಗಿ ಸುಪ್ರಿಯಾ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂಬುದಾಗಿ ವಿಶ್ವಸಂಸ್ಥೆ ಹೇಳಿದೆ.

ಅತ್ಯಾಧುನಿಕ ಹಾಗೂ ಹಳೆಯ ತಂತ್ರಜ್ಞಾನಗಳ ಸಂಯೋಜನೆಯೊಂದಿಗೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಹಂತದಲ್ಲಿ ದುರ್ಬಲ ಸುಮದಾಯಗಳನ್ನು ರಕ್ಷಿಸುವುದು ಹೇಗೆ ಎಂಬುದನ್ನು ಅವರು ಕೈಗೊಂಡ ಉಪಕ್ರಮಗಳು ಪ್ರತಿಪಾದಿಸುತ್ತವೆ.

'ಅವರ ಕ್ರಮಗಳು ಹಸಿರು ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದೆ. ರಾಜ್ಯವನ್ನು ವಿಜ್ಞಾನಾಧಾರಿತ, ಸಮುದಾಯ ಚಾಲಿತ ಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ಮಾದರಿಯನ್ನಾಗಿ ಇರಿಸಿದೆ' ಎಂದು ವಿಶ್ವಸಂಸ್ಥೆ ಉಲ್ಲೇಖಿಸಿದೆ.

ಸಾಹು ಅವರ ಕ್ರಮಗಳಿಂದಾಗಿ ತಮಿಳುನಾಡಿನಲ್ಲಿ ಅರಣ್ಯ ಪ್ರದೇಶ ವಿಸ್ತರಣೆಯಾಗಿದೆ. ಸುಮಾರು 1.2 ಕೋಟಿ ಜನರಿಗೆ ಅನುಕೂಲವಾಗಿದೆ ಎನ್ನಲಾಗಿದೆ.

ಪ್ರಮುಖ ಉಪಕ್ರಮಗಳು
ನೀಲಗಿರಿ ಜಿಲ್ಲೆಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣ ತೊಡೆದುಹಾಕುವ ಉದ್ದೇಶದಿಂದ 2000ನೇ ಇಸವಿಯಲ್ಲಿ 'ಆಪರೇಷನ್ ಬ್ಲ್ಯೂ ಮೌಂಟೇನ್' ಅಭಿಯಾನಕ್ಕೆ ಚಾಲನೆ ನೀಡಿದ್ದರು. ಆ ಹೊತ್ತಿನಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ವಿಚಾರವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಸ್ಥಿತಿಸ್ಥಾಪಕತ್ವಕ್ಕೆ ಒತ್ತು ನೀಡುವ ಉದ್ದೇಶದಿಂದ ತಮಿಳುನಾಡು ಗ್ರೀನ್ ಕ್ಲೈಮೇಟ್ ಕಂಪನಿ ಎಂಬ ಎನ್ಜಿಒ ಆರಂಭಿಸಿದ್ದ ಸಾಹು, ನಗರದಲ್ಲಿ ಏರಿಕೆಯಾಗುತ್ತಿರುವ ತಾಪಮಾನ ಮತ್ತು ವಾತಾವರಣವನ್ನು ತಂಪಾಗಿಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಆರಂಭಿಸಿದ್ದರು.

ಸುಮಾರು 200 ಹಸಿರು ಶಾಲೆಗಳಲ್ಲಿ ತೀವ್ರ ಉಷ್ಣತೆಯನ್ನು ಸಹಿಸಿಕೊಳ್ಳಬಲ್ಲ ವಿಶಿಷ್ಟ 'ಕೂಲ್ ರೂಫ್ ಯೋಜನೆ'ಯನ್ನು ಮುನ್ನಡೆಸಿದ್ದರು.

ತಮಿಳುನಾಡಿನಾದ್ಯಂತ ಸುಮಾರು 10 ಕೋಟಿ ಸಸಿಗಳನ್ನು ನೆಡುವ ಹಾಗೂ 65 ಹೊಸ ಮೀಸಲು ಅರಣ್ಯಗಳನ್ನು ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ. ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಮ್ಯಾಂಗ್ರೋವ್ ಸಂಖ್ಯೆ ದ್ವಿಗುಣಗೊಂಡಿದೆ. ಜೌಗು ಪ್ರದೇಶದ ಸಂಖ್ಯೆ 1ರಿಂದ 20ಕ್ಕೆ ಏರಿಕೆಯಾಗಿದೆ. ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಗಾಗಿ ಸುಮಾರು ₹540 ಕೋಟಿ ಮೊತ್ತದ ನಿಧಿ ಆರಂಭಿಸಲಾಗಿದೆ ಎಂದೂ ವಿಶ್ವಸಂಸ್ಥೆ ಹೇಳಿದೆ.

ಸಾಹು ಅವರು, ನಗರ ಯೋಜನೆ ಭಾಗವಾಗಿ 'ಪ್ರಕೃತಿ ಮೊದಲು' ಎಂಬ ವಿಧಾನವನ್ನು ಚೆನ್ನೈಗೆ ಅಳವಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.