ಭೂಸ್ವಾಧೀನಕ್ಕಾಗಿ ಗುರುತಿಸಿರುವ ಜಮೀನಿನ ಹೆಚ್ಚಿನ ಭಾಗ ಕೃಷಿ ಭೂಮಿಯಾಗಿದೆ
ದೇವನಹಳ್ಳಿಯಲ್ಲಿ ಚನ್ನರಾಯಪಟ್ಟಣ ಮುಖ್ಯರಸ್ತೆಯ ಮಧ್ಯೆ ಮಳೆಯ ನಡುವೆಯೂ ಹೋರಾಟದಲ್ಲಿ ಭಾಗಿಯಾಗಿರುವ ರೈತ ಮಹಿಳೆಯರು (ಸಂಗ್ರಹ ಚಿತ್ರ)
ಭೂಮಿ ಉಳಿಸಿಕೊಳ್ಳುವ ಹೋರಾಟದಲ್ಲಿ ಪೊಲೀಸರು ಹಲ್ಲೆ ನಡೆಸಿದರು. ನನ್ನ ಎಡ ಕಣ್ಣಿಗೆ ಹಾನಿ ಆಯಿತು. ಈಗಾಗಲೇ ಎರಡು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ನಮ್ಮ ಅಜ್ಜ, ಅಪ್ಪ ಕೊಟ್ಟ ಭೂಮಿಯನ್ನು ಯಾರಿಗೂ ಕೊಡುವುದಿಲ್ಲ. ಮುಂದಿನ ತಲೆಮಾರಿಗೆ ಉಳಿಸಿಕೊಳ್ಳುತ್ತೇವೆ
- ಪ್ರಮೋದ್, ಯುವ ರೈತ
ನಾನು ಎಂಜಿನಿಯರಿಂಗ್ ಪಧವೀಧರ, ಖಾಸಗಿ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ನೀಡುತ್ತಾರೆ. ಆದರೆ, ನಮ್ಮ ಕೃಷಿ ಭೂಮಿಯಲ್ಲಿ ಅದಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತೇವೆ. ಹೈನುಗಾರಿಕೆ, ಹೂವು ಬೆಳೆಯಿಂದ ಆರ್ಥಿಕವಾಗಿ ಸದೃಢರಾಗಿದ್ದೇವೆ
- ನಲ್ಲಪ್ಪನಹಳ್ಳಿ ನಂದನ್, ಯುವ ರೈತ
ಸಿದ್ದರಾಮಯ್ಯ, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲರಿಗೆ ಭೂ ದಾಹ ಹೆಚ್ಚಾಗಿದೆ. ರೈತರ ಬದುಕು ಹಾಳು ಮಾಡಿ, ನಮ್ಮ ರಕ್ತವನ್ನು ಹೀರಿ ಕುಡಿದು ಅದರ ಮೇಲೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಜೀವ ಇರುವವರೆಗೂ ಬಿಡುವುದಿಲ್ಲ
- ನಂಜಪ್ಪ, ಹಿರಿಯ ರೈತ
ಎಲ್ಲ ಸರ್ಕಾರಗಳೂ ಕಾರ್ಪೋರೇಟ್ ಪೋಷಿತ ಹುಲಿಗಳೆಂದು ಮನದಟ್ಟಾಗಿದೆ. ಭೂ ದಾಹಕ್ಕೆ ಸಿದ್ದರಾಮಯ್ಯ ಸರ್ಕಾರವೂ ಹೊರತಾಗಿಲ್ಲ, ಜಾತ್ಯತೀತವಾಗಿ ಕಟ್ಟಿರುವ ಜನಾಂದೋಲನ ಇನ್ನಷ್ಟು ತೀವ್ರವಾಗಲಿದೆ