ಕೊಪ್ಪಳ ಜಿಲ್ಲೆಯಲ್ಲಿ ಬೆಳೆದ ಮಾವಿನ ಹಣ್ಣುಗಳು
ಕೊಪ್ಪಳ ತಾಲ್ಲೂಕಿನ ಯಲಮಗೇರಿ ಗ್ರಾಮದಲ್ಲಿ ನಳನಳಿಸುತ್ತಿರುವ ಪಪ್ಪಾಯ ಬೆಳೆ
ಕುಷ್ಟಗಿ ತಾಲ್ಲೂಕಿನ ನಿಡಶೇಷಿ ಬಳಿ ತೋಟಗಾರಿಕಾ ಇಲಾಖೆಯ ಫಾರ್ಮ್‌ನಲ್ಲಿ ‘ಕಲ್ಲಿನ ರಿಂಗ್’ನಲ್ಲಿ ದಾಳಿಂಬೆ ಬೆಳೆ
ಇಸ್ರೇಲಿ ಕೃಷಿ ಮಾದರಿಯಲ್ಲಿ ಕುಷ್ಟಗಿ ತಾಲ್ಲೂಕಿನ ನಿಡಷೇಷಿಯಲ್ಲಿ ಬೆಳೆದಿರುವ ಲಿಂಬೆ
ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳಿಗೆ ತೋಟಗಾರಿಕಾ ಇಲಾಖೆ ಮಾಡಿರುವ ‘ಕೊಪ್ಪಳ’ ಹೆಸರಿನ ಬ್ರ್ಯಾಂಡ್

ಕೊಪ್ಪಳ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 33 ಸಾವಿರ ಹೆಕ್ಟೇರ್ ತೋಟಗಾರಿಕಾ ಪ್ರದೇಶ ಹೆಚ್ಚಾಗಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರತಿವರ್ಷವೂ 10 ಸಾವಿರ ಹೆಕ್ಟೇರ್ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಕೃಷ್ಣ ಸಿ. ಉಕ್ಕುಂದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೊಪ್ಪಳ
ಪಪ್ಪಾಯ ಹಾಗೂ ಮಾವು ಬೆಳೆಯಲು ಆರಂಭಿಸಿದ ಬಳಿಕ ನೌಕರನಂತೆ ಪ್ರತಿ ತಿಂಗಳೂ ಹಣ ಗಳಿಸಲು ಸಾಧ್ಯವಾಗುತ್ತಿದೆ. ತೋಟಗಾರಿಕೆಯಿಂದ ರೈತನೂ ಉದ್ಯಮಿಯಾಗುತ್ತಿದ್ದಾನೆ.
ಪಾಲಾಕ್ಷಗೌಡ ಮೇಟಿ ರೈತ
ಕೊಪ್ಪಳ ಜಿಲ್ಲೆಯಲ್ಲಿರುವ ಬಹುತೇಕ ಕೆಂಪು ಮಣ್ಣು ಬಿಸಿಲಿನ ವಾತಾವರಣ ತೋಟಗಾರಿಕಾ ಬೆಳೆಗಳಿಗೆ ಹೇಳಿಮಾಡಿಸಿದಂತಿದೆ. ಇಂಥ ವಾತಾವರಣದಲ್ಲಿ ಮಾವಿನ ಹಣ್ಣುಗಳ ರುಚಿಯೂ ಹೆಚ್ಚು
ಅಂಬರೀಶ್ ತಟ್ಟಿ ರೈತ
ದಾಳಿಂಬೆ ಬೆಳೆದು ಕೋಟ್ಯಂತರ ರೂಪಾಯಿ ಲಾಭ ಗಳಿಸಿದ್ದೇನೆ. ಖರ್ಚು ಕೂಡ ಸಾಕಷ್ಟಿದೆ. ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಹೂಡಿಕೆ ಮಾಡುವ ಖರ್ಚಿಗೆ ನಷ್ಟವಾಗುವುದಿಲ್ಲ.
ದ್ಯಾಮಣ್ಣ ಗುಂಡಗಿ ದಾಳಿಂಬೆ ಬೆಳೆದ ಕುಷ್ಟಗಿ ರೈತ