ಹಬ್ಬದ ಸೀಸನ್ನಲ್ಲಿ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಬೇಕೆನ್ನುವ ನಿರೀಕ್ಷೆಗೆ ಮತ್ತೊಮ್ಮೆ ‘ಕರುನಾಡ ಸವಿಯೂಟ‘ ಕಾರ್ಯಕ್ರಮ ಆರಂಭಗೊಂಡಿದ್ದು, ಕನ್ನಡಿಗರ ಮನೆಗಳಿಗೆ ರಾಜ್ಯದ ನಾನಾ ಮೂಲೆಗಳ ರಸವತ್ತಾದ ಅಡುಗೆ ರೆಸಿಪಿಗಳನ್ನು ಸಿದ್ಧಪಡಿಸುವ ಬಗೆ ಸುಲಭವಾಗಲಿದೆ. ಫ್ರೀಡಂ ಹೆಲ್ದೀ ಕುಕ್ಕಿಂಗ್ ಆಯಿಲ್ ಅರ್ಪಿಸುವ ಈ ಬಾರಿಯ ‘ಕರುನಾಡ ಸವಿಯೂಟ ಸೀಸನ್–4‘ರ ಎಲ್ಪಿಜಿ ಪಾರ್ಟ್ನರ್ ಇಂಡೇನ್, ಕಿಚನ್ ಪಾರ್ಟ್ನರ್ ಪ್ರೆಸ್ಟೀಜ್, ಸ್ಪೆಷಲ್ ಪಾರ್ಟ್ನರ್ ಭೀಮಾ ಮತ್ತು ಲೇಸ್, ಅಸೋಸಿಯೇಟ್ ಪಾರ್ಟ್ನರ್ ಎಸ್ಬಿಐ ಕಾರ್ಡ್, ವೆಂಕಾಬ್, ಎಕೋ ಕ್ರಿಸ್ಟಲ್ ಸಹಯೋಗದಲ್ಲಿ ಆರಂಭಗೊಳ್ಳುತ್ತಿದೆ. ಜತೆಗೆ, ಬಾಯಿಯಲ್ಲಿ ನೀರೂರಿಸುವ ವಿವಿಧ ಖಾದ್ಯಗಳ ವಿವರಣೆಯನ್ನು ನೀಡಬಲ್ಲ ಖ್ಯಾತ ಪಾಕಪ್ರವೀಣರಾದ ಸಿಹಿ ಕಹಿ ಚಂದ್ರು, ಆದರ್ಶ್ ತಟ್ಪತಿ, ಒಗ್ಗರಣೆ ಡಬ್ಬಿ ಮುರಳಿಯವರ ನಿರೂಪಣೆಯಿರಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ರಸವತ್ತಾದ ಸವಿಯೂಟಗಳನ್ನು ಸರಳ ಭಾಷೆಯಲ್ಲಿ ಎಲ್ಲರಿಗೂ ವಿವರಿಸಲಿದ್ದಾರೆ. ಕಾರ್ಯಕ್ರಮಗಳನ್ನು ಮಿಸ್ ಮಾಡದೇ, ಕನ್ನಡ ನಾಡಿನ ನಾನಾ ಸವಿರುಚಿಗಳ ಸ್ವಾದವನ್ನು ಸಂಭ್ರಮಿಸಿ.

ಏನೇನಿದೆ ಗೊತ್ತಾ?

ಹಲಸಿನ ಮುಲ್ಕ, ಹುರಿಗಡಲೆ ನಿಪ್ಪಟ್ಟು, ಸೌತೆಕಾಯಿ ಮುದ್ದಿಪಲ್ಯ, ಹಿತ್ಕಿದ ಅವರೇಬೇಳೆ ಮೇಲೋಗರ, ಬೋಂಡಾಸೂಪ್, ರಾಯಚೂರು ರಗಡ್ ತುಂಟಾಪುರ ಶೈಲಿ ಕೋಳಿ ಕಡ್ಡಿ, ಬಟಾಣಿ ಕುರ್ಮಾ, ಮನೋಲಿ ಕಡಲೇ ಸುಕ್ಕಾ ಮಸಾಲಾ ರೆಸಿಪಿ ವಿವರಣೆ ಕುರಿತ ವಿಡಿಯೋಗಳು ಈಗಾಗಲೇ ಅಪ್ಲೋಡ್ ಆಗಿವೆ.

ಏನೆಲ್ಲಾ ರೆಸಿಪಿ ಬರಲಿವೆ?

ಕೊಳ್ಳೇಗಾಲ ಮಟನ್ –ನಲ್ಲಿ ಪಲಾವ್, ಕನಕಪುರ ಶೈಲಿಯ ಹೊಳೆ ಮೀನು ಸಾರು, ಚಿಕ್ಕಪೇಟೆ ಕಾಲುಸೂಪ್, ಮೈಸೂರು ಶೈಲಿಯ ಖೀಮಾ ವಡೆ, ಬ್ಯಾಚಲರ್ ಕ್ವಿಕ್ ಮಟನ್ ಫ್ರೈ, ಮಳವಳ್ಳಿ ವೈಟ್ ಚಿಕನ್ ಪಲಾವ್ ಮತ್ತು ನಾಟಿ ಕೋಳಿ ಬಸ್ಸಾರು ಮಾಡುವ ಬಗೆಯ ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ.

ಮನೆಯಲ್ಲೇ ಟ್ರೈ ಮಾಡಿ!

ವಿಭಿನ್ನ ರುಚಿಗಳ ಅಡುಗೆ ಖಾದ್ಯಗಳನ್ನು ಸಿದ್ಧಪಡಿಸಬೇಕೆನ್ನುವ ನಿರೀಕ್ಷೆಗೆ ಪರಿಹಾರೋಪಾಯವಾಗಿ ‘ಕರುನಾಡ ಸವಿಯೂಟ ಸೀಸನ್–4‘ ಶುರುವಾಗಿದ್ದು, ಮನೆಯಲ್ಲಿಯೇ ಕುಳಿತು ಪ್ರಜಾವಾಣಿ ಯೂಟ್ಯೂಬ್ ಚಾನೆಲ್ನ ವಿಡಿಯೋಗಳ ಮೂಲಕ ಮಾರ್ಗದರ್ಶನ ಪಡೆಯಬಹುದಾಗಿದೆ. ಕಳೆದ 3ಸೀಸನ್ಗಳಲ್ಲಿ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಮತ್ತೊಮ್ಮೆ ಕರುನಾಡ ಖಾದ್ಯಪ್ರಿಯರಿಗೆ ಮತ್ತಷ್ಟು ಅಡುಗೆ ರೆಸಿಪಿಗಳನ್ನು ಈ ಸೀಸನ್ನಲ್ಲಿ ನೀಡಲಾಗುತ್ತಿದೆ. ಖಾದ್ಯಪ್ರಿಯರು, ಅಡುಗೆ ಕಲಿಕೆಯಲ್ಲಿರುವವರು ಸೀಸನ್ನಲ್ಲಿ ವಿವರಿಸಲ್ಪಡುವ ರೆಸಿಪಿಗಳನ್ನು ಕಲಿತು, ಮನೆಮಂದಿಯ ಮೆಚ್ಚುಗೆ ಗಳಿಸಿಕೊಳ್ಳಬಹುದು.

ಸಿಹಿ ಕಹಿ ಚಂದ್ರು

ಕರುನಾಡಿನಲ್ಲಿ ‘ಸಿಹಿ ಕಹಿ ಚಂದ್ರು‘ರವರ ಬಗ್ಗೆ ತಿಳಿಯದವರು ಇರಲಿಕ್ಕಿಲ್ಲ. ಆ ಪ್ರಮಾಣದಲ್ಲಿ ಕನ್ನಡಿಗರಿಗೆ ಚಿರಪರಿಚಿತರು. ಕೇವಲ ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ, ನಿರ್ಮಾಪಕರಾಗಿ, ರಂಗಭೂಮಿ ಕಲಾವಿದರಾಗಿಯೂ ಕೀರ್ತಿ ಗಳಿಸಿದವರು ಸಿಹಿ ಕಹಿ ಚಂದ್ರು. ಅವರ ಹೆಸರಿನೊಂದಿಗೆ ಸದಾ ಜೊತೆಯಾಗಿರುವ ರುಚಿಗಳಂತೆ ಚಂದ್ರುರವರ ಕೈರುಚಿ ಸಹ ಕನ್ನಡಿಗರ ಗಮನ ಸೆಳೆದಿದೆ. ಚಂದ್ರು ಮಾಡುವ ಪಾಕ ಪಾಠದಿಂದ ನಾನಾ ಖಾದ್ಯಗಳನ್ನು ಸಿದ್ಧಪಡಿಸಿ, ಅಡುಗೆ ಮನೆಯಲ್ಲಿ ಸೈ ಎನಿಸಿಕೊಂಡ ದೊಡ್ಡ ಪಡೆಯೇ ಇದೆ. ಇಂಥಹಾ ಚಂದ್ರುರವರ ಅಡುಗೆ ರುಚಿ ‘ಕರುನಾಡ ಸವಿಯೂಟ‘ದಲ್ಲಿ ಗಮನ ಸೆಳೆಯುತ್ತಿದೆ. ಹಲಸಿನ ಮುಲ್ಕಿ, ಹಿತ್ಕಿದ ಅವರೇಬೇಳೆ ಮೇಲೋಗರ ಸೇರಿ ನಾನಾ ಖಾದ್ಯಗಳ ಸಂಭ್ರಮವನ್ನು ನೀವು ನೋಡಿ ಕಲಿಯಲು ಇಲ್ಲಿದೆ ಅವಕಾಶ.

ಆದರ್ಶ್ ತಟ್ಪತಿ

ಸದಾ ಒಂದಿಲ್ಲೊಂದು ಅಡುಗೆ ಖಾದ್ಯಗಳ ವಿವರಣೆ ನೀಡುವ ಕಾರ್ಯಕ್ರಮಗಳಲ್ಲಿ ಬ್ಯುಸಿ ಇರುವ, ಆ ಮೂಲಕ ರಾಜ್ಯಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಿರೂಪಕರು ಆದರ್ಶ್ ತಟ್ಪತಿ. ಸಾಮಾನ್ಯರಿಗೆ ಅರ್ಥವಾಗುವ ಅತ್ಯಂತ ಸರಳ ಭಾಷೆಯಲ್ಲಿಯೇ ಅಡುಗೆ ವಿವರಣೆ ನೀಡುವುದು ಇವರ ಆಕರ್ಷಣೆ. ವಿಶೇಷವಾಗಿ ನಾನ್ವೆಜ್ ಪ್ರಿಯರನ್ನು ಸೆಳೆಯುವ ವಿವಿಧ ಖಾದ್ಯಗಳು ಸೇರಿ ವೆಜ್ ರೆಸಿಪಿಗಳನ್ನು ರುಚಿಭರಿತವಾಗಿ ಮಾಡುವುದು ಹೇಗೆನ್ನುವ ಪಾಠ ಇವರಿಂದ ಕಲಿಯಬಹುದು. ಕರುನಾಡ ಸವಿಯೂಟ ಸೀಸನ್–4ನಲ್ಲಿ ಈಗಾಗಲೇ ರಾಯಚೂರು ತುಂಟಾಪುರ ಕೋಳಿ ಕಡ್ಡಿ, ಬಟಾಣಿ ಕುರ್ಮಾ, ಮಂಗಳೂರು ಶೈಲಿಯ ಕಡಲೇ ಸುಕ್ಕಾ ಮಸಾಲಾ ಖಾದ್ಯಗಳ ವಿವರಣೆ ಸಿದ್ಧವಾಗಿದೆ.

ಒಗ್ಗರಣೆ ಡಬ್ಬಿ ಮುರಳಿ

ಖ್ಯಾತ ಟಿವಿ ನಿರೂಪಕರಾಗಿ ಕನ್ನಡಿಗರ ಮನೆಮಾತಾಗಿರುವ ಒಗ್ಗರಣೆ ಡಬ್ಬಿ ಮುರಳಿ ತಮ್ಮ ವಿಭಿನ್ನ ನಿರೂಪಣೆಯ ಮೂಲಕವೇ ಪ್ರಸಿದ್ಧರು. ಪಾಕಶಾಲೆಯ ಯಾವುದೇ ಅಡುಗೆ ಕುರಿತು ರಸವತ್ತಾಗಿ ವಿವರಣೆ ನೀಡಬಲ್ಲ ಖ್ಯಾತ ನಿರೂಪಕರಾದ ಮುರಳಿ, ಒಗ್ಗರಣೆ ಡಬ್ಬಿ ಕಾರ್ಯಕ್ರಮದಿಂದ ಎಲ್ಲರ ಅಡುಗೆ ಮನೆಗೆ ಪ್ರವೇಶ ಪಡೆದರು. ವಿಶೇಷವೆಂದರೆ, ಪ್ರಸ್ತುತ ಮುರಳಿ ತಮ್ಮ ಪತ್ನಿ ಸುಚಿತ್ರರೊಂದಿಗೆ ‘ಕರುನಾಡ ಸವಿಯೂಟ ಸೀಸನ್–4‘ರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕನ್ನಡಿಗರಿಗೆ ಮತ್ತಷ್ಟು ಸವಿರುಚಿಗಳನ್ನು ಉಣಬಡಿಸಲಿದ್ದಾರೆ. ಮಳವಳ್ಳಿ ವೈಟ್ ಚಿಕನ್ ಪಲಾವ್, ನಾಟಿ ಕೋಳಿ ಬಸ್ಸಾರು ಸೇರಿದಂತೆ ನಾನಾ ನಾನ್ವೆಜ್ ರೆಸಿಪಿಗಳನ್ನು ಮಾಡುವುದು ಹೇಗೆನ್ನುವ ಪಾಠವನ್ನು ಒಗ್ಗರಣೆ ಡಬ್ಬಿ ಮುರಳಿ ವಿವರಿಸಲಿದ್ದಾರೆ.
.ಮಂಗಳೂರು ಶೈಲಿಯ ಹೊಸ ಸ್ನ್ಯಾಕ್ಸ್ ಕಡಲೆ ಮನೊಲಿ ಸುಕ್ಕಾ ಮಸಾಲಾ: ವಿಡಿಯೊ ನೋಡಿ.ಪ್ಯಾನ್ ಕರ್ನಾಟಕ ಡಿಶ್ ಬಟಾಣಿ ಕುರ್ಮಾ: ಸಾಂಪ್ರದಾಯಿಕ ವೆಜ್ ಕುರ್ಮಾ ರೆಸಿಪಿ.ರೆಸಿಪಿ: ರಾಯಚೂರಿನ ರಗಡ್ ರುಚಿಯ ತುಂಟಾಪುರ ಕೋಳಿ ಕಡ್ಡಿ! ವಿಡಿಯೊ ನೋಡಿ.Video | ಕರುನಾಡ ಸವಿಯೂಟ: ಹೋಟೆಲ್ ಸ್ಟೈಲ್ ಬೋಂಡಾ ಸೂಪ್ ಮನೆಯಲ್ಲಿಯೇ ಮಾಡಿ .ಸೌತೆಕಾಯಿ ಮುದ್ದಿಪಲ್ಯ: ಎಲ್ಲರಿಗೂ ಇಷ್ಟವಾಗುತ್ತೆ ಉ.ಕರ್ನಾಟಕದ ಈ ಟೇಸ್ಟಿ ಫುಡ್.Video | ಹಿತ್ಕಿದ ಅವರೆಬೇಳೆ ಮೇಲೋಗರ– ಕರ್ನಾಟಕದ ಹಳೆಯ ಅಡುಗೆ ಹೊಸ ಸ್ಟೈಲ್ನಲ್ಲಿ .Video | ಹುರಿಗಡಲೆ ನಿಪ್ಪಟ್ಟು – ಒಬ್ಬಟ್ಟಿನ ಜೊತೆಗೂ ಜೈ, ಚಹಾ ಜೊತೆಗೂ ಸೈ.Video | ಕರುನಾಡ ಸವಿಯೂಟ–4: ಕರಾವಳಿ ಕರ್ನಾಟಕದ ಸ್ಪೆಷಲ್ ಹಲಸಿನ ಮುಲ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.