ಮಕ್ಕಳ ಆರೋಗ್ಯಕ್ಕೆ ಪೂರಕವಾಗಿ ಪೋಷಕಾಂಶ ಭರಿತ ಆಹಾರ ನೀಡುವುದು ಬಹಳ ಮುಖ್ಯ. ಡೆಕ್ಕಾನ್ ಹೆರಾಲ್ಡ್ ವರದಿ ಮಾಡಿರುವಂತೆ ಮಕ್ಕಳು ಕೆಲವು ಪೌಷ್ಟಿಕಾಂಶ ಭರಿತ ಆಹಾರಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ. ಹಾಗಿದ್ದರೆ ಆ ಆಹಾರ ಪದಾರ್ಥಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
.ಚಳಿಗಾಲದ ಆಹಾರ ಹೀಗಿರಲಿ.
ಟ್ಯಾಕೊ:

ಟ್ಯಾಕೊ ಎಂಬುದು ಮೆಕ್ಸಿಕೋದ ಸಾಂಪ್ರದಾಯಿಕ ಮತ್ತು ಜನಪ್ರಿಯ ಖಾದ್ಯವಾಗಿದೆ. ಇದು ಮೆಕ್ಕೆಜೋಳ ಅಥವಾ ಗೋಧಿಯಿಂದ ತಯಾರಿಸಿದ ಸಣ್ಣ ಗಾತ್ರದ ರೊಟ್ಟಿಯಲ್ಲಿ ಟೊಮೆಟೊ, ಜೋಳ, ಮೊಸರು ಹಾಗೂ ಪುದೀನ ಸೇರಿದಂತೆ ವಿವಿಧ ಮಸಾಲೆ ಪದಾರ್ಥಗಳನ್ನು ತುಂಬಿಸಿ ರೋಲ್ ಮಾಡಿ ಸೇವಿಸುವ ಖಾದ್ಯವಾಗಿದೆ. ಮಕ್ಕಳು ಈ ಖಾದ್ಯವನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ.

ಬಿಬಿಂಬಾಪ್ ಬೌಲ್ (ತರಕಾರಿ ಮಿಶ್ರಿತ ಪದಾರ್ಥ):

ಇದನ್ನು ಕೊರಿಯನ್ ಭಾಷೆಯಲ್ಲಿ ಬಿಬಿಂಬಾಪ್ ಬೌಲ್ (ತರಕಾರಿ ಮಿಶ್ರಿತ ಆಹಾರ) ಎಂದು ಕರೆಯುತ್ತಾರೆ. ಇದು ಕೊರಿಯನ್ ಖಾದ್ಯವಾಗಿದ್ದು, ಅನ್ನದ ಮೇಲೆ ವಿವಿಧ ರೀತಿಯ ತರಕಾರಿ, ಮಾಂಸ ಮತ್ತು ಹುರಿದ ಮೊಟ್ಟೆಯನ್ನು ಸೇರಿಸಿ ತಯಾರಿಸಲಾಗುತ್ತದೆ. ಮುಖ್ಯವಾಗಿ ಪಾಲಕ್ ಸೊಪ್ಪು, ಕ್ಯಾರೆಟ್ ಸೇರಿಸಲಾಗುತ್ತದೆ. ಸಾಸ್ ಹಾಗೂ ಸೋಯಾ ಸಾಸ್ ಸೇರಿಸಿಕೊಂಡು ಸೇವನೆ ಮಾಡಬಹುದು.

ಚೀಸ್ ದೋಸೆ:

ದೋಸೆಯ ಮೇಲೆ ಚೀಸ್ ಹಾಕಿ ತಯಾರಿಸುವ ಜನಪ್ರಿಯ ದಕ್ಷಿಣ ಭಾರತದ ಖಾದ್ಯವಾಗಿದೆ. ಬೆಣ್ಣೆ ಸವರಿ ಈ ದೋಸೆಯನ್ನು ತಯಾರಿಸಲಾಗುತ್ತದೆ. ತರಕಾರಿಯ ಪಲ್ಯ, ಚೀಸ್ ಸೇರಿಸಿ ದೋಸೆಯನ್ನು ಮಡಚಿ ಕೊಡಲಾಗುತ್ತದೆ. ಈ ದೋಸೆ ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ.

ಆಲೂಗಡ್ಡೆ ಫ್ರೈ:

ಆಲೂಗಡ್ಡೆ ಬೇಯಿಸಿ ಅದನ್ನು ತೆಳುವಾದ ತುಂಡುಗಳಾಗಿ ಕತ್ತರಿಸಲಾಗುತ್ತದೆ. ನಂತರ ಬಿಸಿ ಎಣ್ಣೆಯಲ್ಲಿ ಕರಿದು ಮಸಾಲೆ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಗೂ ಅರಿಶಿನ ಪುಡಿ ಸೇರಿಸಿದರೆ, ಗರಿಗರಿಯಾಗಿರುವ ಆಲೂಗಡ್ಡೆ ಫ್ರೈ ಸಿದ್ದವಾಗುತ್ತದೆ. ಚಳಿಗಾಲದಲ್ಲಿ ಸಂಜೆ ವೇಳೆ ಸೇವಿಸಲು ಅತ್ಯುತ್ತಮ ಖಾದ್ಯವೆಂದು ಹೇಳಬಹುದು. ಈ ಖಾದ್ಯ ಫೈಬರ್ ಮತ್ತು ವಿಟಮಿನ್ಗಳಿಂದ ಸಮೃದ್ಧವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.