ಅನೇಕರ ನೆಚ್ಚಿನ ಸಿಹಿ ತಿನಿಸುಗಳಲ್ಲಿ ರವೆ ಉಂಡೆ ಕೂಡ ಒಂದಾಗಿರುತ್ತದೆ. ಬೇಕರಿಗಳಲ್ಲಿ ಅದನ್ನು ಖರೀದಿಸಿ ತಿನ್ನಲು ಇಷ್ಟವಿಲ್ಲದಿದ್ದರೆ, ಮನೆಯಲ್ಲಿ ಹೇಗೆ ಸುಲಭ ವಿಧಾನದಲ್ಲಿ ಮಾಡಬಹುದು ಎಂಬುದನ್ನು ನೋಡೋಣ.

ರವೆ ಉಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳು:

ಚಿರೋಟಿ ರವೆ ಅಥವಾ ಸೂಜಿ ರವೆ

ಸಕ್ಕರೆ ಅಥವಾ ಬೆಲ್ಲ

ತುಪ್ಪ

ಒಣ ಹಣ್ಣುಗಳು

ಏಲಕ್ಕಿ ಪುಡಿ

ಒಣ ಕೊಬ್ಬರಿ/ತೆಂಗಿನ ತುರಿ

ಹಾಲು
.ಸುಲಭ ವಿಧಾನದಲ್ಲಿ ರುಚಿಕರ ಮೋತಿಚೂರ್ ಲಡ್ಡು ಹೀಗೂ ತಯಾರಿಸಬಹುದು.
ಮಾಡುವ ವಿಧಾನ

ಹಂತ 1: ಒಂದು ಬಾಣಲಿಯಲ್ಲಿ 2 ಚಮಚ ತುಪ್ಪದ ಜೊತೆಗೆ 1 ಕಪ್ ರವೆಯನ್ನು ಹಸಿ ವಾಸನೆ ಹೋಗುವವರೆಗೆ ಬಿಸಿ ಮಾಡಿಕೊಳ್ಳಿ.

ಹಂತ 2: ಕಾದ ರವೆಯನ್ನು ತಣ್ಣಾಗಾದ ಬಳಿಕ ಸಕ್ಕರೆ ಅಥವಾ ತುರಿದ ಬೆಲ್ಲವನ್ನು ಸೇರಿಸಿ 1 ನಿಮಿಷಗಳ ಕಾಲ ಮಿಕ್ಸಿಯಲ್ಲಿ ನೀರು ಹಾಕದೇ ರುಬ್ಬಿಕೊಳ್ಳಿ.

ಹಂತ 3: ಅದೇ ಬಾಣಲೆಗೆ ಒಣಹಣ್ಣುಗಳನ್ನು ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ.

ಹಂತ 4: ಒಣ ಕೊಬ್ಬರಿ ಅಥವಾ ತೆಂಗಿನ ತುರಿ ಸ್ವಲ್ಪ ಕಾಯಿಸಿಕೊಳ್ಳಿ.

ಹಂತ 5: ನಂತರ ಕಾಯಿಸಿದ ಹಾಲಿನ ಜತೆಗೆ ಕೊಬ್ಬರಿ ತುರಿ, ರುಬ್ಬಿಕೊಂಡ ರವೆ, ಡ್ರೈ ಫ್ರೂಟ್ಸ್ ಗಳನ್ನು ಮಿಶ್ರಣ ಮಾಡಿ ಹದಕ್ಕೆ ಕಲಸಿಕೊಳ್ಳಿ.

ಹಂತ 6: ನಂತರ ಉಂಡೆ ಕಟ್ಟಿ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.