ವಿಶ್ವದಾದ್ಯಂತ ಸಂಭವಿಸುವ 6 ಸಾವುಗಳ ಪೈಕಿ ಒಬ್ಬರು ಕ್ಯಾನ್ಸರ್ಗೆ ಒಳಗಾಗಿ ಮೃತಪಡುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಶೇ 60ರಷ್ಟು ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ದೇಹದ ವಿವಿಧ ಭಾಗಗಳಿಗೆ ಕ್ಯಾನ್ಸರ್ ಆಕ್ರಮಿಸುತ್ತಿದೆ. ಪುರುಷರಿಗೆ ಬಾಯಿ, ಶ್ವಾಸಕೋಶ ಮತ್ತು ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ಗಳು ಹೆಚ್ಚಾಗಿ ಕಂಡುಬರುತ್ತಿವೆ. ಮಹಿಳೆಯರಿಗೆ ಸ್ತನ, ಗರ್ಭಕಂಠ, ಅಂಡಾಶಯ, ಬಾಯಿ ಮತ್ತು ಕರುಳು (ಕೊಲೊರೆಕ್ಟಲ್) ಭಾಗದ ಕ್ಯಾನ್ಸರ್ಗಳು ಹೆಚ್ಚಾಗಿ ಕಂಡುಬರುತ್ತಿವೆ. ನಗರೀಕರಣ ಮತ್ತು ಪಾಶ್ಚಿಮಾತ್ಯ ಜೀವನಶೈಲಿಯ ಅಳವಡಿಕೆಯಿಂದಾಗಿ ಸ್ತನ ಕ್ಯಾನ್ಸರ್ನ ಸಂಭವವು ಗಮನಾರ್ಹವಾಗಿ ಹೆಚ್ಚಾಗಿದೆ.
.ಮೂತ್ರಕೋಶ ಕ್ಯಾನ್ಸರ್: ಈ ಲಕ್ಷಣಗಳು ಕಂಡುಬಂದರೆ ಎಚ್ಚರ.ಪುರುಷರಲ್ಲಿ ಸ್ತನ ಕ್ಯಾನ್ಸರ್.. ಮುನ್ನೆಚ್ಚರಿಕೆ ಇರಲಿ.. ಇದೆ ಸೂಕ್ತ ಚಿಕಿತ್ಸೆ.
ಇಂದು ಕ್ಯಾನ್ಸರ್ಗೆ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿವೆ. ಆದರೆ, ಕ್ಯಾನ್ಸರ್ ಅಪಾಯವನ್ನು ಪ್ರಾರಂಭದಲ್ಲಿಯೇ ಪತ್ತೆ ಮಾಡುವುದು ಈ ರೋಗ ನಿವಾರಣೆಯಲ್ಲಿ ಅತ್ಯಂತ ಮುಖ್ಯ. ಮಹಿಳೆಯರಲ್ಲಿ ಬಾಹ್ಯವಾಗಿ ಉತ್ಪತ್ತಿಯಾಗುವ ಹಾರ್ಮೋನುಗಳು, ಧೂಮಪಾನ, ಅತಿಯಾದ ಮದ್ಯಪಾನ ಮತ್ತು ಆಹಾರ ಪದ್ಧತಿ ಎಲ್ಲವೂ ಕ್ಯಾನ್ಸರ್ಗೆ ಪ್ರಮುಖ ಕಾರಣಗಳಾಗಿದ್ದು, ಇವುಗಳನ್ನು ನಾವು ನಿಯಂತ್ರಿಸಬಹುದಾಗಿದೆ.

ಮಹಿಳೆಯರಲ್ಲಿ ಸ್ತನ, ಎಂಡೊಮೆಟ್ರಿಯಮ್ ಮತ್ತು ಅಂಡಾಶಯಗಳು ಸೇರಿದಂತೆ ಹಲವಾರು ಕ್ಯಾನ್ಸರ್ಗಳು ಸ್ಥೂಲಕಾಯದೊಂದಿಗೆ ಸಂಬಂಧ ಹೊಂದಿವೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ವಯಸ್ಕರು ವಾರಕ್ಕೆ ಕನಿಷ್ಠ 200 ರಿಂದ 300 ನಿಮಿಷಗಳ ಕಾಲ ತೀವ್ರವಾದ ವ್ಯಾಯಾಮದಲ್ಲಿ ತಮ್ನನ್ನು ತೊಡಗಿಸಿಕೊಳ್ಳಬೇಕು. ವಾರಪೂರ್ತಿ ಈ ರೀತಿ ವ್ಯಾಯಾಮ ಮಾಡುವುದು ನಮ್ಮ ದೇಹದ ತೂಕ ಹಾಗೂ ಆರೋಗ್ಯವನ್ನು ಸುರಕ್ಷಿತವಾಗಿಡುತ್ತದೆ.

ಶ್ವಾಸಕೋಶ, ಧ್ವನಿ ಪೆಟ್ಟಿಗೆ, ಬಾಯಿ, ಅನ್ನನಾಳ, ಗಂಟಲು, ಮೂತ್ರಕೋಶ, ಮೂತ್ರಪಿಂಡ, ಯಕೃತ್ತು, ಹೊಟ್ಟೆ, ಕರಳಲ್ಲಿ ಲ್ಯುಕೇಮಿಯಾ, ಹೆಮಟೊಲಾಜಿಕಲ್ನಂತಹ ಮಾರಕ ಕಾಯಿಲೆಗಳು ತಂಬಾಕು ಸೇವನೆಯಿಂದ ಉಂಟಾಗುತ್ತವೆ. ಹೀಗಾಗಿ ತಂಬಾಕು ಪದಾರ್ಥಗಳಿಂದ ದೂರ ಉಳಿಯವುದು ಕ್ಯಾನ್ಸರ್ ನಿಯಂತ್ರಣದಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲಿ ಕಂಡುಹಿಡಿಯುವುದು ಬಹಳ ಅವಶ್ಯಕ. ಹೀಗಾಗಿ ವಾರ್ಷಿಕ ತಪಾಸಣೆಯನ್ನು ಶಿಫಾರಸ್ಸು ಮಾಡಲಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು ಪರೀಕ್ಷಿಸಲು ಮ್ಯಾಮೊಗ್ರಫಿ ಒಂದು ಸರಳ ಪರೀಕ್ಷೆಯಾಗಿದೆ. 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ವಾರ್ಷಿಕವಾಗಿ ತಪಾಸಣೆಗೆ ಒಳಗಾಗಬೇಕು. 74 ವರ್ಷ ವಯಸ್ಸಿನವರೆಗೆ ಅದನ್ನು ಮುಂದುವರಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

25 ವರ್ಷದಿಂದ ಪ್ರತಿ ಒಂದರಿಂದ ಮೂರು ವರ್ಷಗಳಿಗೊಮ್ಮೆ ಕ್ಲಿನಿಕಲ್ ಸ್ತನ ಪರೀಕ್ಷೆ ಮಾಡಿಸಬೇಕು. ಕ್ಯಾನ್ಸರ್ನ ಕುಟುಂಬದ ಇತಿಹಾಸ ಅಥವಾ ಸ್ತನ ಕ್ಯಾನ್ಸರ್ನ ಹೆಚ್ಚಿನ ಅಪಾಯವನ್ನು ಹೊಂದಿರುವ ಮಹಿಳೆಯರು 35 ವರ್ಷ ವಯಸ್ಸಿನಿಂದಲೇ ಸ್ಕ್ರೀನಿಂಗ್ ಅನ್ನು ಪ್ರಾರಂಭಿಸಬೇಕು. ಜೀನ್ ಅನುಕ್ರಮವು (ಜಿನ್ ಸೀಕ್ವೆನ್ಸ್) ಅಡ್ವಾನ್ಸ್ ಆದಂತೆ ಅಂಡಾಶಯ ಮತ್ತು ಸ್ತನ ಕ್ಯಾನ್ಸರ್ಗಳಿಗೆ ಕಾರಣವಾಗುತ್ತವೆ ಎಂಬುದು ಸಂಶೋಧನೆಗಳಿಂದ ಕಂಡುಬಂದಿದೆ.
.ಕ್ಯಾನ್ಸರ್ ಪೀಡಿತರಿಗೆ ವರವಾದ ಕಿಮೋ ಥೆರೆಪಿ ಕೇಂದ್ರ.
ಸರಳ ರಕ್ತ ಪರೀಕ್ಷೆಗಳು ಈ ಜೀನ್ಗಳನ್ನು ಗುರುತಿಸಬಹುದು. ಗ್ರಾಮೀಣ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸುವ ಸಾಧ್ಯತೆ ಹೆಚ್ಚು. ಹುಡುಗಿಯರು 9ನೇ ವಯಸ್ಸಿನಿಂದ ಪ್ರಾರಂಭಿಸಿ 26ನೇ ವಯಸ್ಸಿನವರೆಗೆ ನಿರೋಧಕ ಲಸಿಕೆ ಪಡೆಯಬೇಕು. ಲೈಂಗಿಕ ಚಟುವಟಿಕೆ ಪ್ರಾರಂಭಿಸುವ ವಯಸ್ಸಿಗಿಂತ ಮೊದಲು ಈ ಲಸಿಕೆ ತೆಗೆದುಕೊಳ್ಳುವುದು ಕ್ಯಾನ್ಸರ್ನಿಂದ ಅತ್ಯುತ್ತಮ ರಕ್ಷಣೆ ನೀಡುತ್ತದೆ. 21ನೇ ವಯಸ್ಸಿನಿಂದ ಸ್ಮೀಯರ್ಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ಪ್ಯಾಪ್ ಸ್ಮೀಯರ್ಗಳನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.

ಈ ನಿಯಮಿತ ತಪಾಸಣೆಯಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ಮುಂಚಿತವಾಗಿಯೇ ಪತ್ತೆ ಮಾಡಬಹುದು. ವರ್ಷಕ್ಕೆ 20 ಪ್ಯಾಕ್ಗಿಂತ ಹೆಚ್ಚು ಧೂಮಪಾನ ಮಾಡುವ 50 ರಿಂದ 80 ವಯೋಮಾನದವರಿಗೆ ವಾರ್ಷಿಕವಾಗಿ ಈ ತಪಾಸಣೆ ಶಿಫಾರಸ್ಸು ಮಾಡಲಾಗುತ್ತದೆ. 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಿಗೆ ಡಿಜಿಟಲ್ ಗುದನಾಳದ ಪರೀಕ್ಷೆ ಮಾಡಲಾಗುತ್ತದೆ. ಪುರುಷರಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಧೂಮಪಾನ ಮತ್ತು ತಂಬಾಕು ಅಗಿಯುವುದು ಬಾಯಿಯ ಕ್ಯಾನ್ಸರ್ಗೆ ಪ್ರಮುಖ ಕಾರಣಗಳಾಗಿವೆ. ಬಾಯಿಯ ವಸುಡುಗಳ ಬಳಿ, ಕುಳಿಯಲ್ಲಿ ಯಾವುದೇ ಅನುಮಾನಾಸ್ಪದ ಹುಣ್ಣುಗಳಿದ್ದರೆ ಸರಳ ಪರೀಕ್ಷೆಯ ಮೂಲಕ ಕ್ಯಾನ್ಸರ್ ಪತ್ತೆ ಮಾಡಬಹುದು.

ಅಂಡಾಶಯ ಕ್ಯಾನ್ಸರ್ ತಪಾಸಣೆ ಪರೀಕ್ಷೆಗಳು ನಿಷ್ಪರಿಣಾಮಕಾರಿಯಾಗಿರುತ್ತವೆ. ಕುಟುಂಬದ ಇತಿಹಾಸ ಅಥವಾ ಅನುವಂಶಿಕ ಪ್ರವೃತ್ತಿಯಿಂದಾಗಿ ಅಂಡಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಮಹಿಳೆಯರು ಟ್ರಾನ್ಸ್ವಾಜಿನಲ್ ಅಲ್ಟ್ರಾಸೌಂಡ್ಗಳು ಅಥವಾ ಟಿವಿಯುಎಸ್ನಿಂದ ಪ್ರಯೋಜನ ಪಡೆಯಬಹುದು. ಪ್ರತಿ ಹತ್ತು ವರ್ಷಗಳಿಗೊಮ್ಮೆ ಕೊಲೊನೋಸ್ಕೋಪಿಯನ್ನು ಬಳಸಿಕೊಂಡು, ಕೊಲೊನ್ ಕ್ಯಾನ್ಸರ್ ಸ್ಕ್ರೀನಿಂಗ್ ಮಾಡಿಸಬಹುದು. ಇದು ಸಾಮಾನ್ಯವಾಗಿ 45ನೇ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ. ಸಂಬಂಧಿಕರಲ್ಲಿ ಅನುವಂಶಿಕ ರೂಪಾಂತರದ ಈ ಸಮಸ್ಯೆ ಕಾಣಿಸಿದರೆ, ಪ್ರತಿ ಒಂದರಿಂದ ಎರಡು ವರ್ಷಗಳಿಗೊಮ್ಮೆ ಕೊಲೊನೋಸ್ಕೋಪಿಯನ್ನು ನಡೆಸಲಾಗುತ್ತದೆ.

ಸ್ಕ್ರೀನಿಂಗ್ ಪರಿಕರಗಳ ಲಭ್ಯತೆಯಿದ್ದರೂ ಕ್ಯಾನ್ಸರ್ ರೋಗ ನಿರ್ಣಯ ಹಾಗೂ ಪತ್ತೆ ಹಚ್ಚುವಿಕೆಯಲ್ಲಿ ನಾವು ಈಗಲೂ ಹಿಂದುಳಿದಿದ್ದೇವೆ. ವಿಶೇಷವಾಗಿ ಗ್ರಾಮೀಣ ಮಹಿಳೆಯರಲ್ಲಿ ಈ ಜಾಗೃತಿ ಕಡಿಮೆ ಇದೆ. ಕ್ಯಾನ್ಸರ್ ಆರೈಕೆಯಲ್ಲಿನ ಅಂತರವನ್ನು ಕಡಿಮೆ ಮಾಡುವುದು ಹಾಗೂ ಅಗತ್ಯವಿರುವ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ತಂಬಾಕು ಬಳಕೆಯಿಂದ ದೂರವಿರುವುದು, ಸಕ್ರಿಯ ಜೀವನಶೈಲಿಯನ್ನು ಕಾಪಾಡಿಕೊಳ್ಳಬಹುದುದಾಗಿದೆ. ಆರೋಗ್ಯಕರ ಆಹಾರವನ್ನು ಸೇವಿಸುವುದು, ಮಿತವಾಗಿ ಮದ್ಯಪಾನ ಮಾಡುವುದು ಅಗತ್ಯವಾಗಿದೆ. ಐದು ವರ್ಷಗಳಲ್ಲಿ ಒಮ್ಮೆಯಾದರೂ ಮೇಲಿನ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ನಿಮ್ಮ ಆರೋಗ್ಯ ಕಾಳಹಿ ದೃಷ್ಟಿಯಿಂದ ಒಳಿತು.

ಲೇಖಕರು : ಡಾ. ಪ್ರತ್ಯುಷ್ ವಿ, ವೈದ್ಯಕೀಯ ಸಲಹೆಗಾರರು, ಆಂಕೊಲಾಜಿ ವಿಭಾಗ, ಅಪೋಲೋ ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.