ಸೀಗೆಕಾಯಿ, ಅಂಟುವಾಳ, ಮದರಂಗಿ ಸೊಪ್ಪು, ದಾಸವಾಳ ಇವುಗಳೇ ಒಂದು ಕಾಲದ ಶಾಂಪೂ, ಸೋಪ್, ಕಂಡೀಷನರ್, ಸಿರಮ್ ಹಾಗೂ ಡೈಗಳು. ಆದರೆ ಆಧುನಿಕ ಯುಗದಲ್ಲಿ ಎಲ್ಲವೂ ರಾಸಾಯನಿಕಯುಕ್ತ. ಇದರ ಪರಿಣಾಮವೇ ತಲೆಯಲ್ಲಿ ಹೊಟ್ಟು, ಕೂದಲು ಉದುರುವ ಸಮಸ್ಯೆ ಇತ್ಯಾದಿ. ಆಯುರ್ವೇದದ ಬೇರು ಹಳೆಯದಾದರೂ ಇದರ ಉಪಯೋಗ ಹೊಸ ಚಿಗುರಿನಂತೆ ನಿತ್ಯ ಪ್ರಸ್ತುತ. ತಲೆ ಹೊಟ್ಟು ನಿವಾರಣೆಗೆ ನೈಸರ್ಗಿಕವಾಗಿ ಸಿಗುವ ವಸ್ತುವಿನಿಂದ ಪರಿಹಾರ ಕಂಡುಕೊಳ್ಳಬಹುದೆಂದು ಆಯುರ್ವೇದ ತಜ್ಞರಾದ ಡಾ ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.

ತಲೆಹೊಟ್ಟು ಆಗಲು ಮುಖ್ಯ ಕಾರಣಗಳಿವು

ವಾರವೀಡಿ ತಲೆ ತೊಳೆಯದೆ ಇದ್ದರೆ

ಹೆಲ್ಮೆಟ್ ಶುಚಿಯಾಗಿ ಇಟ್ಟುಕೊಳ್ಳದಿದ್ದರೆ

ಕೂದಲಿಗೆ ಧೂಳು ತಗುಲಿದರೆ

ಶುಚಿ ಇಲ್ಲದ ತಲೆ ದಿಂಬಿನ ಬಳಕೆ

ಸ್ನಾನದ ಬಳಿಕ ತಲೆ ಚೆನ್ನಾಗಿ ಒಣಗಿಸದಿದ್ದರೆ

ತಲೆಗೆ ಎಣ್ಣೆ ಹಾಕಿ ದಿನ ಪೂರ್ತಿ ಬಿಟ್ಟರೆ

ಸ್ಟ್ರೈಟ್ನಿಂಗ್ ಮಾಡಿಕೊಳ್ಳುವುದರಿಂದ

ಸೋರಿಯಾಸಿಸ್ ಕಾಯಿಲೆ ಕೂಡ ತಲೆ ಹೊಟ್ಟಿಗೆ ಕಾರಣವಾಗುತ್ತದೆ ಎಂಬುದು ಆಯುರ್ವೇದ ತಜ್ಞರ ಅಭಿಪ್ರಾಯವಾಗಿದೆ.

ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸರಳ ಮನೆ ಮದ್ದುಗಳು

ಕಹಿ ಬೇವಿನ ಎಲೆಯನ್ನು ನುಣ್ಣಗೆ ರುಬ್ಬಿಕೊಂಡು ಅದನ್ನು ತಲೆಗೆ ಹಚ್ಚಿ 1–2 ಗಂಟೆಗಳ ಕಾಲ ಬಿಟ್ಟು ತಲೆ ತೊಳೆದುಕೊಳ್ಳಬಹುದು ಅಥವಾ ಪ್ರತಿದಿನ ಇದರ ಎಲೆಯನ್ನು ಸೇವಿಸುವುದರಿಂದ ಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಡಾ ಶರದ್ ಕುಲಕರ್ಣಿ ಅವರು ಸಲಹೆ ನೀಡಿದ್ದಾರೆ.

ಹೆಚ್ಚಾಗಿ ಹಾಗಲಕಾಯಿ ಖಾದ್ಯ, ಕರಿಬೇವಿನ ಎಲೆ ಸೇವನೆಯಿಂದ ಹಾಗೂ ನಿಂಬೆ ಹಣ್ಣಿನ ರಸ, ಲೋಳೆಸರ, ದಾಸವಾಳ, ಮೆಂತ್ಯೆಕಾಳಿನ ಪೇಸ್ಟ್ನ್ನು ಬುರುಡೆಗೆ ಹಚ್ಚಿ ಮಸಾಜ್ ಮಾಡಿ ತಲೆ ತೊಳೆಯುವುದರಿಂದ ಹೊಟ್ಟಿನ ಸಮಸ್ಯಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಆಯುರ್ವೇದ ತಜ್ಞರಾದ ಡಾ ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.

ಲೇಖಕರು: ಬೆಂಗಳೂರಿನ ಆಯುರ್ವೇದ ವೈದ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.