ಜ್ವರ ಬಂದಿತೆಂದರೆ ರೋಗಿ ಮತ್ತವರ ಮನೆಯವರು ಆತಂಕಕ್ಕೆ ಒಳಗಾಗುತ್ತಾರೆ. ಮಕ್ಕಳಿಗೆ ಜ್ವರ ಬಂದರೆ ಅದು ಕಡಿಮೆಯಾಗುವ ತನಕ ಹೆತ್ತವರಿಗೆ ನೆಮ್ಮದಿಯಿಂದ ಇರಲಾಗುವುದಿಲ್ಲ. ಜ್ವರವು ಅರೋಗ್ಯವಂತ ಶರೀರದ ನೈಸರ್ಗಿಕ ಪ್ರತಿಕ್ರಿಯೆ - ಎಂಬ ಸತ್ಯವು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ನಮ್ಮ ದೇಹದ ತಾಪಮಾನದ ಸೂಕ್ತ ನಿಯಂತ್ರಣವು ಬಹಳ ಪ್ರಮುಖವಾದ ಅಂಶವಾಗಿದೆ. ನಮ್ಮ ದೇಹದ ವಿವಿಧ ಕಣ ಮತ್ತು ಕೋಶಗಳ ಕ್ರಿಯೆಗಳನ್ನು ನಿಯಂತ್ರಿಸುವ ವಿವಿಧ ಹಾರ್ಮೋನುಗಳು ಮತ್ತು ಕಿಣ್ವಗಳು ಸರಿಯಾಗಿ ಕೆಲಸಮಾಡಲು ದೇಹದ ತಾಪಮಾನದ ನಿಯಂತ್ರಣವು ಅತ್ಯಗತ್ಯ. ದೇಹದ ತಾಪಮಾನವನ್ನು ಮಿದುಳಿನ ‘ಹೈಪೋಥೆಲಾಮಸ್’ ಎಂಬ ಭಾಗವು ನಿಯಂತ್ರಿಸುತ್ತದೆ. ಚಳಿಗಾಲದಲ್ಲಿ ಹೊರಗಿನ ವಾತಾವರಣದ ತಾಪಮಾನ ಕಡಿಮೆಯಾದಲ್ಲಿ ದೇಹದೊಳಗೆ ನಡೆಯುವ ವಿವಿಧ ಕ್ರಿಯೆಗಳು ತಾಪಮಾನ ಹೆಚ್ಚುವಂತೆ ನೋಡಿಕೊಳ್ಳುತ್ತವೆ. ಹೆಚ್ಚು ಚಳಿಯಾದಾಗ ನಡುಗುವುದು ಮತ್ತು ಹಲ್ಲು ಕಡಿಯುವುದು ಕೂಡ ತಾಪಮಾನವನ್ನು ಹೆಚ್ಚು ಮಾಡುವ ಪ್ರಯತ್ನಗಳು. ಸೆಕೆ ವಿಪರೀತವಾಗಿ ಹೊರಗಿನ ಉಷ್ಣತೆ ಜಾಸ್ತಿಯಾದಾಗ ದೇಹವು ಬೆವರುವ ಮೂಲಕ ಮತ್ತು ದೇಹದೊಳಗೆ ನಡೆಯುವ ವಿವಿಧ ಕ್ರಿಯೆಗಳ ಮೂಲಕ ತಾಪಮಾನದ ನಿಯಂತ್ರಣವನ್ನು ಮಾಡುತ್ತದೆ. ನಮ್ಮ ದೇಹದ ತಾಪಮಾನದ ಬದಲಾವಣೆಗಳು ನಮ್ಮ ಗಮನಕ್ಕೆ ಬರುವ ಕಾರಣದಿಂದ ನಾವು ಸೂಕ್ತ ವಸ್ತ್ರಗಳನ್ನು ಧರಿಸುವ ಮೂಲಕ ವಾತಾವರಣಕ್ಕೆ ಹೊಂದಿಕೊಳ್ಳುತ್ತೇವೆ. ಮನುಷ್ಯನು ಸಸ್ತನಿಗಳ ವರ್ಗಕ್ಕೆ ಬರುವ ಜೀವಿಯಾದುದರಿಂದ ಸಸ್ತನಿಗಳು ದೇಹದ ತಾಪಮಾನವನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸುತ್ತಾರೆ. ಸರೀಸೃಪಗಳು ಮತ್ತು ಉಭಯಚರಗಳು ತಮ್ಮ ದೇಹದ ತಾಪಮಾನದಲ್ಲಿ ಹೆಚ್ಚು ಬದಲಾವಣೆಗಳಾದರೂ ಅವುಗಳು ಅದಕ್ಕೆ ಹೊಂದಿಕೊಳ್ಳುವುದನ್ನು ಕರಗತ ಮಾಡಿಕೊಂಡಿವೆ.

ನಮ್ಮ ದೇಹದೊಳಗಡೆ ಯಾವುದೇ ಕೀಟಾಣುವಿನ ಪ್ರವೇಶವಾದಾಗ ಅದರ ವಿರುದ್ಧ ನಮ್ಮ ದೇಹದ ವಿವಿಧ ಕಣಗಳು ಪ್ರತಿಕ್ರಿಯೆ ನೀಡುತ್ತದೆ. ದೇಹದ ರೋಗನಿರೋಧಕ ಕಣಗಳು ಜಾಗೃತವಾಗುತ್ತವೆ. ದೇಹದ ತಾಪಮಾನವನ್ನು ನಿಯಂತ್ರಿಸುವ ‘ಹೈಪೋಥೆಲಾಮಸ್’ ಎಂಬ ಮಿದುಳಿನ ಭಾಗದ ಮೇಲೆ ದೇಹದಲ್ಲಿ ಉತ್ಪತ್ತಿಯಾದ ‘ಪ್ರೋಸ್ಟಾಗ್ಲಾನ್ಡಿನ್’ ಸ್ಥಳೀಯ ಹಾರ್ಮೋನಿನ ರೀತಿ ಕೆಲಸಮಾಡುತ್ತದೆ. ಈ ಪ್ರೋಸ್ಟಾಗ್ಲಾನ್ಡಿನ್ ಕಣಗಳು ಹೈಪೋಥೆಲಾಮಸ್ ಅಂಗದಲ್ಲಿ ದೇಹದ ತಾಪಮಾನದ ನಿಗದಿತ ಮಟ್ಟವನ್ನು ಏರಿಸುವ ಕೆಲಸವನ್ನು ಮಾಡುತ್ತದೆ. ಹೈಪೋಥೆಲಾಮಸಿನಲ್ಲಿ ನಿಗದಿಯಾಗುವ ತಾಪಮಾನವನ್ನು ದೇಹವು ಅನುಸರಿಸುವ ಕಾರಣದಿಂದ ಇಡೀ ದೇಹದ ತಾಪಮಾನವು ಹೈಪೋಥೆಲಾಮಸ್ನಲ್ಲಿ ಎಷ್ಟು ಏರಿದೆಯೊ, ಅಷ್ಟೆ ಪ್ರಮಾಣದಲ್ಲಿ ಏರುತ್ತದೆ. ದೇಹದ ಈ ನೈಸರ್ಗಿಕ ಪ್ರತಿಕ್ರಿಯೆಯನ್ನು ನಾವು ‘ಜ್ವರ’ ಎಂದು ಕರೆಯುತ್ತೇವೆ.

ಮಾನವನ ವಿಕಾಸದಲ್ಲಿ ಈ ಜ್ವರ ಕೂಡ ಅಪಾಯಕ್ಕೆ ಹೊಂದಿಕೊಂಡು ಅದರಲ್ಲಿ ಮೇಲುಗೈ ಪಡೆಯುವ ಒಂದು ಕಾರ್ಯವಿಧಾನವಾಗಿದೆ. ತೀವ್ರ ರೀತಿಯಲ್ಲಿ ಅಸ್ವಸ್ಥವಾದ ದೇಹ ಮತ್ತು ನವಜಾತ ಶಿಶುಗಳ ದೇಹಗಳು ಜ್ವರದ ಪ್ರತಿಕ್ರಿಯೆಯನ್ನು ನೀಡಲು ಸಶಕ್ತವಾಗಿರುವುದಿಲ್ಲ. ಜ್ವರ ಬಂದಾಗ ನಾವು ನಮ್ಮ ಹೃದಯದ ಬಡಿತ, ಉಸಿರಾಟ ಮುಂತಾದ ನೈಸರ್ಗಿಕ ಕ್ರಿಯೆಗಳು ಹೆಚ್ಚು ವೇಗವಾಗುವುದನ್ನು ಗಮನಿಸಿರಬಹುದು. ದೇಹದ ತಾಪಮಾನವು ಜ್ವರದ ಸಮಯದಲ್ಲಿ ಹೆಚ್ಚಾಗಿರುವುದು ದೇಹದ ರೋಗನಿರೋಧಕ ಶಕ್ತಿಗೆ ಸಹಾಯವಾಗುತ್ತದೆ. ಹೆಚ್ಚಿನ ತಾಪಮಾನದಲ್ಲಿ ದೇಹದ ವಿವಿಧ ರೋಗ ನಿರೋಧಕ ಕಣಗಳು ಕೀಟಾಣುಗಳ ವಿರುದ್ಧ ಹೆಚ್ಚು ಸಮರ್ಥವಾಗಿ ಹೋರಾಡುತ್ತವೆ.

ನಮ್ಮ ದೇಹದೊಳಗೆ ಸೇರಿಕೊಂಡಿರುವ ವಿವಿಧ ಬ್ಯಾಕ್ಟೀರಿಯಾ ಅಥವಾ ವೈರಸ್ಗಳು ಉತ್ಪಾದನೆ ಮಾಡುವ ಜ್ವರದ ಪ್ರಮಾಣ ಮತ್ತು ಅವುಗಳ ಪುನರಾವರ್ತನೆಯ ಸಮಯವು ಆಯಾ ಕೀಟಾಣುವಿನ ಗುಣಲಕ್ಷಣಕ್ಕೆ ಅನುಗುಣವಾಗಿ ವಿಭಿನ್ನವಾಗಿರುತ್ತವೆ. ಜ್ವರಗಳ ತೀವ್ರತೆ ಮತ್ತು ಅವುಗಳ ಪುನರಾವರ್ತನೆಯ ಸಮಯದ ಆಧಾರದಲ್ಲಿ ರೋಗಗಳನ್ನು ಅಂದಾಜಿಸಬಹುದಾಗಿದೆ.
ಹೆಚ್ಚಿನ ಜ್ವರಗಳು ಪ್ರಮಾಣವನ್ನು ‘ಪ್ಯಾರಾಸೆಟಮಾಲ್’ ಮುಂತಾದ ಔಷಧಗಳು ಕಡಿಮೆ ಮಾಡಿ ರೋಗಿಯ ಅನಾನುಕೂಲತೆಯನ್ನು ಶಮನ ಮಾಡಬಲ್ಲವು. ಕೆಲವು ಸಂದರ್ಭಗಳಲ್ಲಿ ಜ್ವರವು ತನ್ನ ಪಾಡಿಗೆ ತಾನೇ ಅಥವಾ ಔಷಧಗಳ ಸಹಾಯದಿಂದ ಶಮನವಾಗದೆ ಇದ್ದಲ್ಲಿ ಅವು ದೇಹದ ಅಂಗಾಂಗಗಳ ಕೆಲಸಕಾರ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಲ್ಲವು.

ಜ್ವರವು ಕೇವಲ ಕೀಟಾಣುಗಳ ಕಾರಣಗಳಿಂದ ಮಾತ್ರ ಬರುವುದಿಲ್ಲ. ಜ್ವರವು ಕೆಲವು ವಾರಗಳ ತನಕ ಮುಂದುವರಿದಲ್ಲಿ ಕ್ಷಯರೋಗ, ಕ್ಯಾನ್ಸರ್ ಅಥವಾ ಅಟೋಇಮ್ಯೂನ್ ಕಾಯಿಲೆಗಳಿರುವ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಬೇಕಾಗುತ್ತದೆ. ಐದು ವರ್ಷಗಳ ಕೆಳಗಿನ ಕೆಲವು ಮಕ್ಕಳಲ್ಲಿ ಜ್ವರವು ನಿಯಂತ್ರಣಕ್ಕೆ ಬರದಿದ್ದಾಗ ಅವರಲ್ಲಿ ಮೂರ್ಛೆರೋಗವು ಕಾಣಿಸಿಕೊಂಡು ಹೆತ್ತವರ ಆತಂಕವನ್ನು ಅದು ಹೆಚ್ಚಿಸಬಹುದು. ಆದರೆ ಇದರಿಂದಾಗಿ ಮಗುವಿನಲ್ಲಿ ಯಾವುದೇ ದೀರ್ಘಕಾಲದ ಸಮಸ್ಯೆಗಳು ಉಂಟಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.