ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಉತ್ತಮ ನಿದ್ದೆಯ ಜೊತೆಗೆ ಒತ್ತಡ ನಿರ್ವಹಣೆ ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ನಿದ್ದೆ ಮತ್ತು ಒತ್ತಡ ನಿರ್ವಹಣೆ ಅಗತ್ಯವಾಗಿದ್ದು. ಇದನ್ನು ನಿರ್ವಹಿಸುವುದು ಕೂಡ ಅಷ್ಟೇ ಸವಾಲಿನ ಕೆಲಸ.

ಒತ್ತಡ ಎಂಬುದು ಬದುಕಿನ ಸಹಜ ಕ್ರಿಯೆಯಾದರೂ ಸಹ ಅದು ಅತಿಯಾದರೆ ಭಯ, ಭೀತಿ, ಆತಂಕ ಮತ್ತು ಸುಸ್ತಿಗೆ ಕಾರಣವಾಗುತ್ತದೆ. ಇದರಿಂದ ದೈಹಿಕ ಚಟುವಟಿಕೆಗಳಲ್ಲಿ ಬದಲಾವಣೆ ಉಂಟಾಗಬಹುದು. ಹಾಗಾಗಿ ಒತ್ತಡ ಹೆಚ್ಚಳಕ್ಕೆ ಕಾರಣಗಳನ್ನು ಪತ್ತೆಹಚ್ಚುವುದು ಮತ್ತು ಅದನ್ನು ಶಮನಗೊಳಿಸುವುದು ಅಗತ್ಯ.
.ಪಪ್ಪಾಯಿ ಸೇವನೆಯಿಂದಾಗುವ ಪ್ರಯೋಜನ, ಎಷ್ಟು ಸೇವಿಸಬೇಕು? ಇಲ್ಲಿದೆ ಮಾಹಿತಿ.ವಿಟಮಿನ್ ಡಿ ಕೊರತೆಯಿಂದ ಸಂತಾನೋತ್ಪತ್ತಿ ಮೇಲೆ ಪರಿಣಾಮ: ಇಲ್ಲಿದೆ ಪರಿಹಾರ.
ಯಾವೆಲ್ಲಾ ಕಾರಣಗಳಿಂದಾಗಿ ಒತ್ತಡ ಉಂಟಾಗುತ್ತದೆ ಮತ್ತು ಅದನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಮೊದಲು ಪಟ್ಟಿ ಮಾಡಬೇಕು. ಧೂಮಪಾನ, ಅತಿಯಾಗಿ ತಿನ್ನುವುದು, ಅತಿಯಾದ ಸ್ಕ್ರೀನ್ ಟೈಮ್ ಹಾಗೂ ಅನಾರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವುದರಿಂದ ಒತ್ತಡ ಮತ್ತು ನಿದ್ರಾಹೀನತೆ ಉಂಟಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಮನೆಮದ್ದು ಎಂದರೆ, ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುವುದು.

ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಇರುವ ಸರಳ ಸೂತ್ರವೆಂದರೆ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ವ್ಯಾಯಾಮ ಮಾಡುವುದರಿಂದ ಮಾನಸಿಕ, ದೈಹಿಕ ಆರೋಗ್ಯ ಹೆಚ್ಚಿಸುವ ಮತ್ತು ಉದ್ವೇಗ ಕಡಿಮೆ ಮಾಡಬಹುದು. ಇತರರೊಂದಿಗೆ ಮಾತಿನ ಸಂಪರ್ಕ ಸಾಧಿಸುವುದು, ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಮತ್ತು ವಿರಾಮ ತೆಗೆದುಕೊಳ್ಳುವ ಮೂಲಕ ಚಟುವಟಿಕೆಗಳನ್ನು ಮುಂದುವರೆಸುವುದು ಮನಸ್ಸಿನ ಸಮತೋಲನವನ್ನು ಕಾಪಾಡುತ್ತದೆ. ಒತ್ತಡ ಅತಿಯಾದರೆ ವೃತ್ತಿಪರರ ಸಲಹೆ ಪಡೆಯಲು ಹಿಂಜರಿಯಬಾರದು.

ಪ್ರತಿಯೊಬ್ಬರ ಜೀವನಶೈಲಿಯಲ್ಲೂ ನಿದ್ದೆ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಇಡೀ ದಿನ ದೇಹ ದಣಿದಿರುವಾಗ ಚೇತರಿಕೆಗೆ, ರೋಗನಿರೋಧಕ ಶಕ್ತಿ ಮತ್ತು ಹಾರ್ಮೋನ್ ನಿಯಂತ್ರಣದಲ್ಲಿಡಲು ನಿದ್ದೆ ಬಹಳ ಮುಖ್ಯ. ನಿದ್ದೆ ಮಾಡಲು ಕಷ್ಟಪಡುವವರು, ಹಗಲಿನಲ್ಲಿ ಆಯಾಸದಿಂದಿರುವವರು ಅಥವಾ ಏರುಪೇರಿನ ದಿನಚರಿಗಳನ್ನು ಹೊಂದಿರುತ್ತಾರೆ.
.ಚಳಿಗಾಲದಲ್ಲಿ ‘ವಿಟಮಿನ್ ಡಿ’ ಕೊರತೆಗೆ ಕಾರಣವೇನು? ಹೆಚ್ಚಿಸಲು ಇಲ್ಲಿದೆ ಸಲಹೆ.
ನಿದ್ರಾಹೀನತೆ ತಡೆಗಟ್ಟಲು ಕೆಳಗಿನ ಸಲಹೆಗಳು:

ನಿದ್ದೆಗೆ ನಿಗದಿತ ವೇಳಾಪಟ್ಟಿಯನ್ನು ಅನುಸರಿಸಬೇಕು. ಹಗಲಿನಲ್ಲಿ ನಿದ್ದೆ ಮಾಡುವುದನ್ನು ತಪ್ಪಿಸಬೇಕು. ರಾತ್ರಿ ಸರಿಯಾಗಿ ನಿದ್ದೆ ಮಾಡುವುದನ್ನು ಅಭ್ಯಾಸ ಮಾಡಬೇಕು.

ಮಲಗುವ ಮುನ್ನ ದೀಪಗಳನ್ನು ಮಂದಗೊಳಿಸುವುದು, ನೀಲಿ ಬೆಳಕು ಸೂಸುವ ವಸ್ತುಗಳಿಂದ ಬಳಕೆ ಮಾಡದಿರುವುದು

ಮಲಗುವ ಕೋಣೆಯಲ್ಲಿ ಆರಾಮದಾಯಕ ಹಾಸಿಗೆ, ತಂಪು ತಾಪಮಾನ ಮತ್ತು ಕನಿಷ್ಠ ಶಬ್ದದೊಂದಿಗೆ ಕೂಡಿದ ವಾತಾವರಣವನ್ನು ನಿರ್ಮಿಸಿಕೊಂಡಾಗ ನಿದ್ದೆಯ ಗುಣಮಟ್ಟವನ್ನು ಸುಧಾರಿಸಬಹುದು.

ಲೇಖಕರು: ಮನೋವೈದ್ಯರು, ವಾಸವಿ ಆಸ್ಪತ್ರೆ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.