ತುಳಸಿ ಗಿಡವನ್ನು ಮನೆಯ ಮುಂದೆ ನೆಟ್ಟು ಪೂಜೆ ಮಾಡುವುದರಿಂದ ಸಕಾರಾತ್ಮಕ ಭಾವನೆ ಮೂಡುತ್ತದೆ ಎಂಬ ನಂಬಿಕೆ ಇದೆ. ಅಷ್ಟು ಮಾತ್ರವಲ್ಲ ಈ ಗಿಡದಲ್ಲಿ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ. ಇದರ ಬೇರು, ಎಲೆಗಳನ್ನು ವಿವಿಧ ರೂಪದಲ್ಲಿ ತೆಗೆದುಕೊಳ್ಳುವುದರಿಂದ ಅನೇಕ ಕಾಯಿಲೆಗಳ ನಿವಾರಣೆಗೆ ಸಹಕಾರಿ ಎಂದು ಆಯುರ್ವೇದ ತಜ್ಞರಾದ ಡಾ. ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.

ತುಳಸಿ ಎಲೆಯ ಉಪಯೋಗಗಳು

ತುಳಸಿಯಲ್ಲಿ ವಿಟಮಿನ್ ಎ, ಸಿ, ಕಬ್ಬಿಣಾಂಶ, ಕ್ಯಾಲ್ಸಿಯಂ ಅಂಶಗಳನ್ನು ಹೊಂದಿದೆ. ಇದರ ಎಲೆಯನ್ನು ಪ್ರತಿದಿನ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.
.ಮುಖದ ಅಂದಗೆಡಿಸುವ ಮೊಡವೆಗಳ ನಿವಾರಣೆಗೆ ಇಲ್ಲಿವೆ ಸರಳ ಮನೆಮದ್ದುಗಳು.
ತುಳಸಿ ಎಲೆಯನ್ನು ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಬಿಟ್ಟೂ ಬಿಡದೆ ಕಾಡುವ ಶೀತ, ಜ್ವರವನ್ನು ನಿಯಂತ್ರಿಸುತ್ತದೆ. ಈ ಎಲೆಯ ರಸವನ್ನು ಹುರಿದ ಲವಂಗದ ಜತೆ ಸೇವನೆ ಮಾಡುವುದರಿಂದ ಕೆಮ್ಮಿನ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಆಯುರ್ವೇದ ವೈದ್ಯರು ಮಾಹಿತಿ ತಿಳಿಸಿದ್ದಾರೆ.

ತುಳಸಿ ಎಲೆಯನ್ನು ಕಾಫಿ ಟೀಯಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಗಂಟಲು ಕೆರೆತ ಕಮ್ಮಿ ಆಗುತ್ತದೆ.

ಪ್ರತಿನಿತ್ಯ ತುಳಸಿ ಎಲೆಯನ್ನು ಜಗಿಯುವುದರಿಂದ ಬಾಯಿ ವಾಸನೆ ಹೋಗಿಸಲು ಸಹಕಾರಿ. ಇದನ್ನು ಅರೆದು ಮುಖಕ್ಕೆ, ಚರ್ಮದ ಮೇಲೆ ಹಚ್ಚುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ ಎಂದು ಆಯುರ್ವೇದ ತಜ್ಞರಾದ ಡಾ. ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.