ವಾಷಿಂಗ್ಟನ್: ಜಗತ್ತಿನ 180 ರಾಷ್ಟ್ರಗಳ ಮೇಲೆ ಪ್ರತಿ ಸುಂಕ ಹೇರಿರುವ ಅಮೆರಿಕದ ಡೊನಾಲ್ಡ್ ಟ್ರಂಪ್, ‘ಇದು ನಮ್ಮ ಸ್ವಾತಂತ್ರ್ಯದ ಘೋಷಣೆ. ನಾವು ಕನಿಷ್ಠ ಶೇ 10ರಷ್ಟು ತೆರಿಗೆಯನ್ನು ಮೂಲವಾಗಿಟ್ಟುಕೊಂಡಿದ್ದೇವೆ’ ಎಂದಿದ್ದಾರೆ.

ಚೀನಾಗೆ ಶೇ 34ರಷ್ಟು, ಐರೋಪ್ಯ ಒಕ್ಕೂಟ ಮತ್ತು ಜಪಾನ್ಗೆ ಶೇ 20 ಹಾಗೂ ಶೇ 24ರಷ್ಟು, ಭಾರತಕ್ಕೆ ಶೇ 26ರಷ್ಟು ಪ್ರತಿ ಸುಂಕವನ್ನು ಅಮೆರಿಕ ಹೇರಿದೆ.

ಅಮೆರಿಕದ ನಡೆಗೆ ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೆಲ ರಾಷ್ಟ್ರದವರು ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ.

‘ಈ ನ್ಯಾಯಯುತವಲ್ಲದ ನಡೆಯಿಂದಾಗಿ ಅಮೆರಿಕದ ಜನರು ದೊಡ್ಡ ಬೆಲೆಯನ್ನೇ ತೆರುತ್ತಾರೆ’ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೊಣಿ ಅಲ್ಬೆನೀಸ್ ಹೇಳಿದ್ದಾರೆ.

ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೇ ಮಾತನಾಡಿ, ‘ಜಾಗತಿಕ ವ್ಯಾಪಾರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕಾರ್ಯವಾಗಿದೆ. ಉಕ್ಕು, ಅಲ್ಯುಮಿನಿಯಂ ಮತ್ತು ವಾಹನಗಳ ಮೇಲೆ ವಿಧಿಸಲಾದ ಸುಂಕವು ಕೆನಡಾದ ಜನರ ಮೇಲೆ ಭಾರೀ ಪರಿಣಾಮ ಬೀರಲಿದೆ. ಇದಕ್ಕೆ ಪ್ರತಿಕ್ರಿಯೆ ಮೂಲಕವೇ ಉತ್ತರ ನೀಡಲಾಗುವುದು’ ಎಂದಿದ್ದಾರೆ.

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಪ್ರತಿಕ್ರಿಯಿಸಿ, ‘ಈ ವ್ಯಾಪಾರ ಯುದ್ಧದಲ್ಲಿ ಯಾರ ಹಿತವೂ ಇಲ್ಲ. ಆದರೆ ಎಲ್ಲಾ ರೀತಿಯ ಬದಲಾವಣೆ ಎದುರಿಸಲು ನಾವು ಸಿದ್ಧರಾಗಿದ್ದೇವೆ’ ಎಂದಿದ್ದಾರೆ.

‘ವ್ಯಾಪಾರ ಯುದ್ಧವು ಎರಡೂ ಕಡೆ ಬಾಧಿಸಲಿದೆ’ ಎಂದು ಜರ್ಮನಿ ಹೇಳಿದೆ.

‘ತನ್ನ ಕಂಪನಿಗಳು ಹಾಗೂ ಕಾರ್ಮಿಕರ ಹಿತ ಕಾಯುವುದರ ಜತೆಗೆ ಜಗತ್ತಿಗೆ ತೆರೆದುಕೊಳ್ಳುವುದನ್ನು ಮುಂದುವರಿಸಲಾಗುವುದು’ ಎಂದು ಸ್ಪೇನ್ನ ಪ್ರಧಾನಿ ಪೆಡ್ರೊ ಸ್ಯಾನ್ಷೆ ಹೇಳಿದ್ದಾರೆ.

‘ನಮಗೆ ವ್ಯಾಪಾರ ಯುದ್ಧ ಬೇಕಿಲ್ಲ. ಅಮೆರಿಕದೊಂದಿಗೆ ಉತ್ತಮ ಸಹಕಾರ ಹೊಂದುವ ಮೂಲಕ ನಮ್ಮ ದೇಶದ ಜನರು ಉತ್ತಮ ಬದುಕು ನಡೆಸಲು ಸಾಧ್ಯವಾಗಬೇಕು’ ಎಂದು ಐರ್ಲೆಂಡ್ ಪ್ರಧಾನಿ ಹೇಳಿದ್ದಾರೆ.

ಟ್ರಂಪ್ ಸ್ನೇಹಿತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಪ್ರತಿಕ್ರಿಯಿಸಿ, ‘ಟ್ರಂಪ್ ಅವರೊಂದಿಗೆ ಚರ್ಚಿಸಿ ಈ ಯುದ್ಧದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಇಂಥ ಪ್ರಹಾರಗಳು ಪಶ್ಚಿಮವನ್ನು ಇನ್ನಷ್ಟು ದುರ್ಬಲಗೊಳಿಸಲಿವೆ’ ಎಂದಿದ್ದಾರೆ.

ಚೀನಾದ ವಾಣಿಜ್ಯ ಸಚಿವ ಪ್ರತಿಕ್ರಿಯಿಸಿ, ‘ಅಮೆರಿಕವು ಕೂಡಲೇ ಈ ಸುಂಕವನ್ನು ರದ್ದುಗೊಳಿಸಬೇಕು. ಅಮೆರಿಕದ ಈ ನಡೆಯು ಜಾಗತಿಕ ಆರ್ಥಿಕ ಅಭಿವೃದ್ಧಿಗೆ ಅಪಾಯ ತಂದೊಡ್ಡಲಿದೆ. ಇದರಿಂದ ಅಂತರರಾಷ್ಟ್ರೀಯ ಪೂರಕ ಸರಪಳಿಗೆ ಮತ್ತೊಮ್ಮೆ ಅಪಾಯ ಉಂಟು ಮಾಡಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.