ನವದೆಹಲಿ: 240ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ವ್ಯಕ್ತಿಯೊಬ್ಬರು ಪವಾಡಸದೃಶವಾಗಿ ಪಾರಾಗಿದ್ದರೆ.

ವಿಮಾನದ ‘11ಎ’ ಆಸನದಲ್ಲಿದ್ದ ಬ್ರಿಟನ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ಗೆ (45) ಬದುಕು ಇನ್ನೊಂದು ಅವಕಾಶ ನೀಡಿದೆ.
.Ahmedabad Plane Crash: ಮಾರ್ಬಲ್ ಉದ್ಯಮಿಯ ಇಬ್ಬರು ಮಕ್ಕಳು ಸಾವು .
ಎಕಾನಮಿ ಕ್ಲಾಸ್ನ ಮೊದಲ ಸಾಲಿನಲ್ಲಿರುವ ಆರು ಸೀಟುಗಳ ಪೈಕಿ '11A' ತುರ್ತು ನಿರ್ಗಮನ ದ್ವಾರ ಹಾಗೂ ವಿಮಾನದ ಗ್ಯಾಲರಿ ಪ್ರದೇಶದಲ್ಲಿ ಇದೆ. ಹೀಗಾಗಿ ಬೆಂಕಿಯುಂಡೆಯಂತಾದ ವಿಮಾನದಿಂದ ವಿಶ್ವಾಸ್ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇದೇ ಕಾರಣ ಎಂದು ಅಂತಿಮ ನಿರ್ಣಯಕ್ಕೆ ಬರಲಾಗದು. ತುರ್ತು ನಿರ್ಗಮನ ದ್ವಾರದ ಬಳಿ ಇದ್ದಿದ್ದು, ಪಾರಾಗಲು ಒಂದು ಕಾರಣ.

ಸದ್ಯ ಏರ್ ಇಂಡಿಯಾ ಬಳಿ 27 B787-8 ವಿಮಾನಗಳಿದ್ದು, ಇದರಲ್ಲಿ 238 ಎಕನಾಮಿ ಹಾಗೂ 18 ಬ್ಯುಸಿನೆಸ್ ಕ್ಲಾಸ್ ಸೀಟುಗಳಿವೆ.

ಈ ಎಲ್ಲಾ ವಿಮಾನಗಳು ಮುಂದಿನ ತಿಂಗಳುಗಳಲ್ಲಿ ಮರುಜೋಡಣೆಗೆ ಹೋಗಲಿವೆ.
.Plane Crash: ಶಾಂತ ಸ್ವಭಾವ, ಬಿಗಿ ಆಡಳಿತಕ್ಕೆ ಹೆಸರಾಗಿದ್ದ ವಿಜಯ ರೂಪಾನಿ.
ಬೋಯಿಂಗ್ ಕಂಪನಿಯ (787–8 ಡ್ರೀಮ್ಲೈನರ್) ಈ ವಿಮಾನವು 12 ಸಿಬ್ಬಂದಿ ಸೇರಿ 242 ಮಂದಿಯನ್ನು ಹೊತ್ತು ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿತ್ತು.

ವಿಮಾನದಲ್ಲಿದ್ದ 241 ಜನರು ಸಾವನ್ನಪ್ಪಿದ್ದಾರೆ ಎಂದು ಏರ್ ಇಂಡಿಯಾ ದೃಢಪಡಿಸಿದೆ.

ವಿಮಾನದಲ್ಲಿ 242 ಜನರಲ್ಲಿ 169 ಭಾರತೀಯರು, 53 ಬ್ರಿಟಿಷ್, 7 ಪೋರ್ಚುಗೀಸ್ ಮತ್ತು ಓರ್ವ ಕೆನಡಾದ ಪ್ರಜೆ ಇದ್ದರು.
.Ahmedabad Plane Crash: ವಿಮಾನ ದುರಂತದಲ್ಲಿ ಪಾರಾದ ಬ್ರಿಟನ್ ಪ್ರಜೆ ವಿಶ್ವಾಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.