ಬೆಂಗಳೂರು: 'ಯಾವ ನಾಯಕತ್ವ ಬದಲಾವಣೆಯೂ ಇಲ್ಲ. ಸಿದ್ದರಾಮಯ್ಯನವರ ಕೈ ಬಲಪಡಿಸುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, 'ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ನೋಟಿಸ್ ಕೊಡುತ್ತೇನೆ' ಎಂದರು.

'ಬಿ.ಆರ್ ಪಾಟೀಲ, ಬಾಲಕೃಷ್ಣ ಯಾರೇ ಆಗಿರಲಿ. ಇನ್ಮುಂದೆ ಯಾರೂ ಮಾಧ್ಯಮಗಳ ಮುಂದೆ ಹೋಗಬಾರದು' ಎಂದರು.

ಶಾಸಕರ ಜೊತೆ ಪಕ್ಷ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತ್ಯೇಕ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್ , 'ಯಾರಿಗೂ ಗಾಬರಿ ಬೇಡ. ಪಕ್ಷ ಸಂಘಟನೆ ವಿಚಾರಕ್ಕೆ ಸಭೆ ಮಾಡುತ್ತಿದ್ದಾರೆ' ಎಂದರು.

'ಇಡೀ ದೇಶದಾದ್ಯಂತ ಬ್ಲಾಕ್ ಕಾಂಗ್ರೆಸ್ ನಲ್ಲಿ ಬದಲಾವಣೆ ಆಗುತ್ತಿದೆ. ಜಿಲ್ಲಾ ಕಾಂಗ್ರೆಸ್ ಘಟಕದಲ್ಲೂ ಬದಲಾವಣೆ ಆಗುತ್ತಿದೆ. ಖರ್ಗೆಯವರು ಬೆಳಗಾವಿಯಲ್ಲಿ ಈ ವಿಚಾರ ಹೇಳಿದ್ದಾರೆ. ಇದು ಸಂಘಟನೆಯ ವರ್ಷ ಎಂದು ಅವರು ಹೇಳಿದ್ದಾರೆ' ಎಂದರು.

'ಯಾವೆಲ್ಲ ಬದಲಾವಣೆ ತರಬೇಕು. ಎಲ್ಲಿ ಏನು, ಯಾವ ಬಿಲ್ಡಿಂಗ್ ಕಟ್ಟಬೇಕು ಎಂದು ಎಐಸಿಸಿ ನಾಯಕರು ಅಭಿಪ್ರಾಯ ಸಂಗ್ರಹಿಸ್ತಿದ್ದಾರೆ. ಇದು ಪಕ್ಷ ಸಂಘಟನೆ ವಿಚಾರವಾಗಿ ಸಭೆ ಅಷ್ಟೇ' ಎಂದರು.
.ಬಂಡೆ ರೀತಿ ನಮ್ಮ ಸರ್ಕಾರ ಭದ್ರ: ಸಿದ್ದರಾಮಯ್ಯ, ಡಿಕೆಶಿ ಒಗ್ಗಟ್ಟು ಪ್ರದರ್ಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.