ಸೋಲ್: ದಕ್ಷಿಣ ಕೊರಿಯಾಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುತ್ತಿದ್ದಂತೆಯೇ ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿದೆ ಎಂದು ವರದಿಯಾಗಿದೆ.

ಸಮುದ್ರದಿಂದ ನೆಲಕ್ಕೆ ಚಿಮ್ಮುವ ಕ್ರೂಸ್ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗವನ್ನು ಉತ್ತರ ಕೊರಿಯಾ ನಡೆಸಿದೆ. ಗುರಿ ನಿರ್ದೇಶಿತ ಕ್ಷಿಪಣಿಗಳು ಪಶ್ಚಿಮ ಸಾಗರದಲ್ಲಿ ಗುರಿ ಮುಟ್ಟಿವೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸ್ ತಿಳಿಸಿದೆ.

ಡೊನಾಲ್ಡ್ ಟ್ರಂಪ್ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೆ ಮಯುಂಗ್ ನಡುವಣ ಭೇಟಿಗೂ ಕೆಲವೇ ಗಂಟೆಗಳಿಗೂ ಮುನ್ನ ಉತ್ತರ ಕೊರಿಯಾದಿಂದ ಕ್ಷಿಪಣಿ ಪರೀಕ್ಷೆ ನಡೆದಿದೆ.

ಉತ್ತರ ಕೊರಿಯಾದ ವಿರುದ್ಧ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಸಂಯೋಜಿತ ರಕ್ಷಣಾ ಸಿದ್ದತೆ ನಡೆಸುವುದಾಗಿಯೂ ವರದಿ ಹೇಳಿದೆ.

ಆದರೂ ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಗಳಿಗೆ ಹೆಚ್ಚಿನ ಮಹತ್ವ ನೀಡಲು ಟ್ರಂಪ್ ನಿರಾಕರಿಸಿದರು. 'ಅವರು ದಶಕಗಳಿಂದಲೂ ಕ್ಷಿಪಣಿ ಪರೀಕ್ಷೆ ನಡೆಸುತ್ತಿದ್ದಾರೆ. ಸರಿಯಲ್ಲವೇ?' ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಭೇಟಿಯಾಗಲು ಟ್ರಂಪ್ ಉತ್ಸುಕತೆ ವ್ಯಕ್ತಪಡಿಸಿದ್ದಾರೆ. 'ನಮ್ಮಿಬ್ಬರ ಮಧ್ಯೆ ಉತ್ತಮ ತಿಳಿವಳಿಕೆ ಇತ್ತು' ಎಂದೂ ಹೇಳಿದ್ದಾರೆ.
.ಗಾಜಾ ಕದನ ವಿರಾಮಕ್ಕೆ ಅಪಾಯ ಇಲ್ಲ: ಡೊನಾಲ್ಡ್ ಟ್ರಂಪ್.ವರ್ಷಾಂತ್ಯಕ್ಕೆ ರಷ್ಯಾದಿಂದ ಭಾರತ ತೈಲ ಖರೀದಿ ಸ್ಥಗಿತಗೊಳಿಸಲಿದೆ: ಟ್ರಂಪ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.