ವಾಷಿಂಗ್ಟನ್: 'ಕದನ ವಿರಾಮ ಪ್ರಸ್ತಾಪವನ್ನು ತಿರಸ್ಕರಿಸುವುದು ರಷ್ಯಾಕ್ಕೆ ವಿನಾಶಕಾರಿಯಾಗಿ ಪರಿಣಮಿಸಬಹುದು' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಈ ಕುರಿತು 'ಎನ್ಡಿಟಿವಿ' ವರದಿ ಮಾಡಿದೆ.

ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಅಂತ್ಯಗಾಣಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಉಕ್ರೇನ್ ಮಧ್ಯೆ ಸೌದಿ ಅರೇಬಿಯಾದಲ್ಲಿ ಮಂಗಳವಾರ ಮಾತುಕತೆ ನಡೆದಿತ್ತು.

ಅಮೆರಿಕ ಮುಂದಿರಿಸಿದ ಪ್ರಸ್ತಾಪವನ್ನು ಉಕ್ರೇನ್ ಒಪ್ಪಿಕೊಂಡಿದ್ದು, 30 ದಿನಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ.

ಈಗ ಕದನ ವಿರಾಮ ನಿರ್ಧಾರ ರಷ್ಯಾದ ಅಂಗಳದಲ್ಲಿದೆ. ಈ ಮಧ್ಯೆ ಕದನ ವಿರಾಮ ಪ್ರಸ್ತಾಪವನ್ನು ತಿರಸ್ಕರಿಸಬಾರದು ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

'30 ದಿನಗಳ ಕದನ ವಿರಾಮಕ್ಕೆ ಉಕ್ರೇನ್ ಒಪ್ಪಿಕೊಂಡಿರುವ ಬಳಿಕ ಸಂಭಾವ್ಯ ಮಾತುಕತೆಗಾಗಿ ಅಮೆರಿಕದ ಅಧಿಕಾರಿಗಳು ಈಗಲೇ ರಷ್ಯಾಕ್ಕೆ ತೆರಳುತ್ತಿದ್ದಾರೆ' ಎಂದು ಟ್ರಂಪ್ ಹೇಳಿದ್ದಾರೆ.

'ನಾವು ರಷ್ಯಾಕ್ಕೆ ತುಂಬಾ ಕೆಟ್ಟದ್ದನ್ನು ಮಾಡಬಹುದು. ಅದು ರಷ್ಯಾಕ್ಕೆ ವಿನಾಶಕಾರಿಯಾಗಬಹುದು. ಆದರೆ ನಾವು ಹಾಗೆ ಮಾಡಲು ಬಯಸುವುದಿಲ್ಲ. ನಾವು ಶಾಂತಿಯನ್ನು ಬಯಸುತ್ತೇವೆ. ರಷ್ಯಾದಿಂದಲೂ ಕದನ ವಿರಾಮ ನಿರೀಕ್ಷೆ ಮಾಡುತ್ತಿದ್ದೇವೆ' ಎಂದು ಅವರು ಹೇಳಿದ್ದಾರೆ.

ಸಂಧಾನ ಮಾತುಕತೆಯಾಗಿ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್, ರಷ್ಯಾಕ್ಕೆ ತೆರಳುತ್ತಿರುವುದಾಗಿ ಶ್ವೇತಭವನ ತಿಳಿಸಿದೆ.
.ಕದನ ವಿರಾಮಕ್ಕೆ ಉಕ್ರೇನ್ ಸಮ್ಮತಿ, ರಷ್ಯಾದಿಂದಲೂ ನಿರೀಕ್ಷೆ: ಡೊನಾಲ್ಡ್ ಟ್ರಂಪ್.ಉಕ್ರೇನ್ಗೆ ಸೇನಾ ನೆರವು ನಿರ್ಬಂಧ ತೆರವುಗೊಳಿಸಿದ ಅಮೆರಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.