ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್ ವಿದಾಯ: ವಿಶ್ವದ ಪ್ರತಿಕ್ರಿಯೆ ಹೀಗಿತ್ತು..

Published : 18 ಡಿಸೆಂಬರ್ 2024, 10:02 IST
Last Updated : 18 ಡಿಸೆಂಬರ್ 2024, 10:02 IST
ಫಾಲೋ ಮಾಡಿ
Comments
‘ಯುವ ಬೌಲರ್‌ ಆಗಿ ಕ್ರಿಕೆಟ್ ಜೀವನ ಆರಂಭಿಸಿದ ಅಶ್ವಿನ್ ಅವರು ಆಧುನಿಕ ಕ್ರಿಕೆಟ್‌ವರೆಗೂ ದಿಗ್ಗಜರಾಗಿ ಬೆಳೆದ ಹಾದಿಯನ್ನು ಗಮನಿಸಿದರೆ ಅವರ ಸಾಧನೆ ವರ್ಣನಾತೀತ’ 
ಗೌತಮ್ ಗಂಭೀರ್, ಭಾರತ ತಂಡದ ಮುಖ್ಯ ಕೋಚ್
‘ಭಾರತ ಕ್ರಿಕೆಟ್‌ನ ಅತ್ಯದ್ಭುತ ಮ್ಯಾಚ್‌ ವಿನ್ನರ್‌, ಚೆಂಡಿನ ಮಾಂತ್ರಿಕ ಹಾಗೂ ಆಟದ ಕುರಿತು ಚಾಣಾಕ್ಷ ಚಿಂತಕ ಆರ್. ಅಶ್ವಿನ್. ಅವರ ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನದ ಕುರಿತು ಹೆಮ್ಮೆ ಇದೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ’
ಜಯ್‌ ಶಾ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ
‘ನಾನು ನಿಮ್ಮೊಂದಿಗೆ 14 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇನೆ. ಆದರೆ ಇಂದು ನೀವು ನಿವೃತ್ತಿ ಘೋಷಿಸಿದಾಗ, ನಾನು ತುಸು ಭಾವುಕನಾದೆ. ನಿಮ್ಮೊಂದಿಗೆ ಆಟದಲ್ಲಿ ಕಳೆದ ಕ್ಷಣಗಳು ಸ್ಮೃತಿಪಟಲದ ಮುಂದೆ ಹಾದುಹೋದವು. ಆ ಎಲ್ಲವನ್ನೂ ನಾನು ಸಂಭ್ರಮಿಸಿದ್ದೇನೆ. ನಿಮ್ಮ ಕೌಶಲ ಹಾಗೂ ಪಂದ್ಯ ಗೆಲ್ಲಿಸುವಲ್ಲಿನ ನಿಮ್ಮ ಬದ್ಧತೆ ಅನನ್ಯ. ಭಾರತ ಕ್ರಿಕೆಟ್‌ ದಾಖಲೆಯಲ್ಲಿ ದಿಗ್ಗಜರಾಗಿ ನೀವು ಸದಾ ಇರುವಿರಿ’
ವಿರಾಟ್ ಕೊಹ್ಲಿ, ಭಾರತ ತಂಡದ ಆಟಗಾರ
‘ನಾನು ಮುಖ್ಯ ಕೋಚ್ ಆಗಿದ್ದ ಅವಧಿಯಲ್ಲಿ ತಂಡಕ್ಕೆ ನೀವೊಬ್ಬರು ಬೆಲೆ ಕಟ್ಟಲಾಗದ ಆಸ್ತಿಯಾಗಿದ್ದಿರಿ. ನಿಮ್ಮ ಕೌಶಲ ಹಾಗೂ ಪರಿಶ್ರಮದಿಂದ ಪ್ರತಿ ಪಂದ್ಯವನ್ನೂ ಆಡಲು ಹಾಗೂ ನೋಡಲು ಯೋಗ್ಯವೆನಿಸುವಂತೆ ಮಾಡುತ್ತಿದ್ದ ಆ ನಿಮ್ಮ ಪರಿಶ್ರಮ ನೆನಪಿದೆ’
ರವಿ ಶಾಸ್ತ್ರಿ, ಭಾರತ ತಂಡದ ಮಾಜಿ ಮುಖ್ಯ ಕೋಚ್
ಒಬ್ಬ ಟೆಸ್ಟ್ ಕ್ರಿಕೆಟರ್ ಆಗಿ ನಿಮ್ಮ ಮಹತ್ವಾಕಾಂಕ್ಷೆ ಪ್ರಶಂಸನೀಯ. ದಶಕಗಳಿಂದ ಭಾರತ ಕ್ರಿಕೆಟ್‌ನ ಸ್ಪಿನ್ ವಿಭಾಗದ ಮುಂಚೂಣಿಯ ಬೌಲರ್‌ ಆಗಿದ್ದು ಅಭಿನಂದನಾರ್ಹ. ನಿಮ್ಮ ಸಾಧನೆಗಳ ಬಗ್ಗೆ ನಿಮಗೆ ಹೆಚ್ಚು ಹೆಮ್ಮೆ ಇರಲಿ ಹಾಗೂ ಭವಿಷ್ಯದಲ್ಲಿ ನಿಮ್ಮನ್ನು ಇನ್ನಷ್ಟು ನೋಡುವಂತಾಗಲಿ.
ಹರ್ಭಜನ್ ಸಿಂಗ್, ಭಾರತ ತಂಡದ ಮಾಜಿ ಸ್ಪಿನ್ನರ್
‘ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆದು ಹಾಗೂ ಅತೀವ ಪ್ರೀತಿಯಿಂದಲೇ ಆಟದಲ್ಲಿ ಪಾಲ್ಗೊಳ್ಳುತ್ತಿದ್ದ ನೀವು ಮೈದಾನದಲ್ಲಿ ಅತ್ಯಂತ ಸ್ಫೂರ್ತಿಯ ವ್ಯಕ್ತಿ. ನಿಮ್ಮ ಅದ್ಭುತ ಕ್ರಿಕೆಟ್‌ನ ಜೀವನಕ್ಕೆ ಅಭಿನಂದನೆಗಳು. ಕ್ರಿಕೆಟ್‌ ಜಗತ್ತಿನಲ್ಲಿ ಇನ್ನಷ್ಟು ಉಜ್ವಲ ಭವಿಷ್ಯ ನಿಮ್ಮದಾಗಲಿ’
ಅನಿಲ್ ಕುಂಬ್ಳೆ, ಭಾರತದ ತಂಡದ ಮಾಜಿ ಆಟಗಾರ ಹಾಗೂ ತರಬೇತುದಾರ
‘ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಆಟಗಾರನಾಗಿ ನಿವೃತ್ತಿ ಘೋಷಿಸಿರುವುದು ಯಾವುದೇ ಸ್ಮಾರಕಕ್ಕಿಂತ ಕಡಿಮೆಯಲ್ಲ. ಬೌಲಿಂಗ್‌ ಮಾತ್ರವಲ್ಲದೇ, ಬ್ಯಾಟಿಂಗ್‌ನಲ್ಲೂ ನೀವು ಮಿಂಚಿರುವುದು ನಿಮ್ಮೊಳಗಿರುವ ಒಬ್ಬ ಆಲ್‌ರೌಂಡರ್‌ನ ಅದ್ಭುತ ಆಟಗಳಷ್ಟೇ.
ಇರ್ಫಾನ್ ಪಠಾಣ್, ಭಾರತ ಕ್ರಿಕೆಟ್‌ನ ಮಾಜಿ ಆಲ್‌ರೌಂಡರ್
‘ಚೆಂಡಿನೊಂದಿಗಿನ ನಿಮ್ಮ ಕೈಚಳಕ, ಚುರುಕು ಬುದ್ಧಿ, ಟೆಸ್ಟ್‌ ಕ್ರಿಕೆಟ್ ಕುರಿತು ಸರಿಸಾಟಿ ಇಲ್ಲದ ಆಸಕ್ತಿ ಸದಾ ನಮ್ಮ ಹೃದಯಲ್ಲಿರುತ್ತದೆ. ಸಂಭ್ರಮ ಹಾಗೂ ಹೆಮ್ಮೆ ಪಡಲು ನೀವು ಎಣಿಸಲಾಗದಷ್ಟು ಕ್ಷಣಗಳನ್ನು ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು’
ಸುರೇಶ್ ರೈನಾ, ಮಾಜಿ ಆಟಗಾರ
‘ನೀವು ಕ್ರಿಕೆಟ್‌ಗೆ ಬಂದಿದ್ದಕ್ಕೆ ಧ್ಯನವಾದಗಳು. ಇಷ್ಟು ಸುದೀರ್ಘ ಅವಧಿಯವರೆಗೆ ನೀವು ಅಂತರರಾಷ್ಟ್ರೀಯ ಕ್ರಿಕೆಟ್‌ನ ಭಾಗವಾಗಿದ್ದರಿ. ನಿಮ್ಮ ಪ್ರೌಢಿಮೆ, ನೀವು ಕಲಿಸಿದ ಪಾಠಗಳು ಹಾಗೂ ನೀವು ನೀಡಿದ ಮನರಂಜನೆ ಎಲ್ಲವೂ ಅನನ್ಯ’
ಇಯಾನ್ ಬಿಷಪ್‌, ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ
‘ಅವರ ಗಳಿಸಿದ ಆ ವಿಕೆಟ್‌ ಸಂಖ್ಯೆಗಳೇ ಅವರ ಸಾಧನೆಯನ್ನು ಹೇಳುತ್ತವೆ. ಭಾರತ ತಂಡದಲ್ಲಿ ಅವರೊಬ್ಬ ಅತ್ಯದ್ಭುತ ಬೌಲರ್‌ ಆಗಿದ್ದರು. ನಮ್ಮ ತಂಡಕ್ಕೆ ಸದಾ ಅವರು ಭಾರತದ ಕಡೆಯಿಂದ ಮುಳ್ಳಾಗಿಯೇ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯ ಭಾಗವಾಗಿದ್ದೂ ಸಂತಸದ ಸಂಗತಿ‘
ಮೈಕಲ್ ಸ್ಟಾರ್ಕ್, ಆಸ್ಟ್ರೇಲಿಯಾ ತಂಡದ ಬೌಲರ್
‘ಒಬ್ಬ ಅದ್ಭುತ ಆಟಗಾರ ನಿವೃತ್ತಿಯಾಗಿದ್ದಾರೆ. ನಿಮ್ಮ ಅದ್ಭುತ ಕ್ರಿಕೆಟ್ ಜೀವನಕ್ಕಾಗಿ ಅಭಿನಂದನೆಗಳು. ನಿಮ್ಮೊಂದಿಗೆ ಆಟವಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ನನಗೆ ಹೆಮ್ಮೆ ಇದೆ. ತಮಿಳುನಾಡಿನಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ವಿಶಿಷ್ಟ ಬೌಲರ್‌ ನೀವು.
ದಿನೇಶ್ ಕಾರ್ತಿಕ್, ಭಾರತದ ಮಾಜಿ ಬ್ಯಾಟರ್
‘ಧನ್ಯವಾದಗಳು ಅಶ್ವಿನ್‌.... ಭಾರತದ ಪರವಾಗಿ ನೀವು ಆಡುವುದನ್ನು ನೋಡಿ ಸಂಭ್ರಮಿಸಿದ್ದೇನೆ’
ಮೈಕಲ್ ವ್ಯಾಘನ್, ಇಂಗ್ಲೆಂಡ್‌ ಟೆಸ್ಟ್‌ ಕ್ರಿಕೆಟ್‌ನ ಮಾಜಿ ನಾಯಕ
‘ನಮ್ಮ ಆಟ ಆಡಿದ ಅತ್ಯುತ್ತಮರಲ್ಲಿ ಒಬ್ಬರು... ನೀವು ಬಿಟ್ಟು ಹೋಗುತ್ತಿರುವುದು ನಮ್ಮ ಪಾಲಿನ ಅದ್ಭುತ ಸಂಗತಿಗಳು. ಹಾಲ್‌ ಆಫ್ ಫೇಮ್‌ನಲ್ಲಿ ನಿಮಗೊಂದು ಪುಟದ ಖಾಲಿ ಇದೆ.
ಹರ್ಷಾ ಭೋಗ್ಲೆ, ಕ್ರಿಕೆಟ್‌ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT