ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಂಪ್ ಮೇಲೆ ದಾಳಿ; ಕ್ಷಣಾರ್ಧದಲ್ಲಿ ಪ್ರತಿದಾಳಿ ನಡೆಸಿದ ಅಮೆರಿಕದ ಸ್ನೈಪರ್‌ ಪಡೆ

Published : 14 ಜುಲೈ 2024, 7:38 IST
Last Updated : 14 ಜುಲೈ 2024, 7:38 IST
ಫಾಲೋ ಮಾಡಿ
Comments

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಹೊಸತೊಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಕುರಿತು 'ಸೆಂಟ್ ಡಿಫೆಂಡರ್' ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ಆಧಾರವಾಗಿಟ್ಟುಕೊಂಡು 'ಎನ್‌ಡಿಟಿವಿ' ವರದಿ ಮಾಡಿದೆ.

ಟ್ರಂಪ್ ಅವರು ಚುನಾವಣಾ ಸಮಾವೇಶದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡುವಾಗ ಶಂಕಿತ ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ್ದಾನೆ. ವೇದಿಕೆಯಲ್ಲಿ ಭಾಷಣ ನಡೆಸುತ್ತಿದ್ದ ಟ್ರಂಪ್, ಪ್ರಾಣಾಪಾಯದಿಂದ ಪಾರಾಗಿದ್ದು, ಬಲ ಕಿವಿಗೆ ಗಾಯವಾಗಿದೆ.

ಭದ್ರತೆಯ ನಡುವೆಯೂ ಟ್ರಂಪ್ ಅವರ ವಿರುದ್ಧ ದಾಳಿ ನಡೆದಿದೆ. ತಕ್ಷಣ ಕಾರ್ಯಪ್ರವೃತರಾಗಿರುವ ಅಮೆರಿಕದ ಸೀಕ್ರೆಟ್ ಸರ್ವಿಸ್‌ನ ಸ್ನೈಪರ್‌ ಪಡೆ ಕ್ಷಣಾರ್ಧದಲ್ಲಿ ಪ್ರತಿದಾಳಿ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಶಂಕಿತ ಬಂದೂಕುಧಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ಖಚಿತಪಡಿಸಿದೆ.

'ಸ್ಪೆಕ್ಟಾಕ್ಟರ್ ಇಂಡೆಕ್ಸ್' ಎಕ್ಸ್ ಖಾತೆಯಲ್ಲಿ ಟ್ರಂಪ್ ಹತ್ತಿರದಿಂದ ಬುಲೆಟ್ ಹಾದು ಹೋಗುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದೆ.

ಒಟ್ಟಿನಲ್ಲಿ ಈ ಎರಡೂ ಚಿತ್ರಗಳು ಘಟನೆಯ ಭಯಾನಕತೆಗೆ ಸಾಕ್ಷಿಯಾಗಿದೆ. ಅಮೆರಿಕದ ಫೆಡರಲ್‌ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್‌ ಸಮಗ್ರ ತನಿಖೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT