ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೆಲ್ಲಲಿದೆ: ಮಮತಾ ಬ್ಯಾನರ್ಜಿ

Last Updated 12 ಆಗಸ್ಟ್ 2021, 15:26 IST
ಅಕ್ಷರ ಗಾತ್ರ

ಕೋಲ್ಕತ್ತ: ತ್ರಿಪುರದಲ್ಲಿ ಬಿಜೆಪಿಯ ವಿರೋಧವನ್ನು ಮೆಟ್ಟಿ ತೃಣಮೂಲ ಕಾಂಗ್ರೆಸ್ ವಿಧಾನಸಭಾ ಚುನಾವಣೆ ಗೆಲ್ಲುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ. ತ್ರಿಪುರದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದರೆ ದೆಹಲಿಯಲ್ಲಿ ಪರಿಣಾಮ ಉಂಟಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ!

ಬಿಜೆಪಿ ಕಾರ್ಯಕರ್ತರ ದಾಳಿಯಲ್ಲಿ ಗಾಯಗೊಂಡವರನ್ನು ಸೇರಿದಂತೆ, ಕನಿಷ್ಠ 14 ಟಿಎಂಸಿ ನಾಯಕರು, ಕಾರ್ಯಕರ್ತರನ್ನು ಕೋವಿಡ್‌ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ತ್ರಿಪುರದ ಖೊವಾಯಿ ಜಿಲ್ಲೆಯಲ್ಲಿ ಆಗಸ್ಟ್ 8 ರಂದು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಗುಟುರು ಹಾಕಿದ್ದಾರೆ.

ತ್ರಿಪುರ ವಿಧಾನಸಭೆಗೆ 2023ರಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ. ಆದರೂ ಟಿಎಂಸಿ ನಾಯಕರು ತ್ರಿಪುರಕ್ಕೆ ಭೇಟಿ ನೀಡುವ ಪ್ರಮಾಣ ಕಡಿಮೆ. ಈ ಬಗ್ಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಬಿಜೆಪಿಗೆ ನಿಷ್ಠರಾದ ಸುಮಾರು 2 ಲಕ್ಷ ಜನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊರ ರಾಜ್ಯ, ಹೊರ ದೇಶಗಳಿಂದ ಬಂದಿದ್ದರು. ಬಿಜೆಪಿ ಆಡಳಿತವಿರುವ ತ್ರಿಪುರಕ್ಕೆ ಹೋಗಲು ಟಿಎಂಸಿ ನಾಯಕರಿಗೆ ಏಕೆ ಆಗುತ್ತಿಲ್ಲ ಎಂದು ಮಮತಾ ಆಶ್ಚರ್ಯ ವ್ಯಕ್ತಪಡಿಸಿದರು.

‘ನಾವು ಖಂಡಿತವಾಗಿಯೂ ತ್ರಿಪುರದಲ್ಲಿ ಚುನಾವಣೆ ಗೆಲ್ಲುತ್ತೇವೆ. ತ್ರಿಪುರದಲ್ಲಿ ಹೋರಾಟ ಮುಂದುವರಿಯುತ್ತದೆ,‘ ಎಂದು ಟಿಎಂಸಿ ವರಿಷ್ಠರೂ ಆದ ಮಮತಾ ತಿಳಿಸಿದರು.

‘ತ್ರಿಪುರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ನಡೆದರೆ, ಅದರ ಪರಿಣಾಮವನ್ನು ದೆಹಲಿಯಲ್ಲಿ ಎದುರಿಸಬೇಕಾಗುತ್ತದೆ,‘ ಎಂದು ಹೇಳಿದ ಮಮತಾ, ಅದರ ಬಗ್ಗೆ ಏನನ್ನೂ ವಿವರಿಸಲಿಲ್ಲ.

ಬಿಜೆಪಿ ಕಾರ್ಯಕರ್ತರು ನಡೆಸಿದ್ದಾರೆ ಎನ್ನಲಾದ ದಾಳಿಯಲ್ಲಿ ಗಾಯಗೊಂಡು, ತ್ರಿಪುರದಿಂದ ಕೋಲ್ಕತ್ತಾಗೆ ಬಂದು ಚಿಕಿತ್ಸೆ ಪಡೆಯುತ್ತಿರುವ ಟಿಎಂಸಿ ಕಾರ್ಯಕರ್ತರನ್ನು ಮಮತಾ ಬ್ಯಾನರ್ಜಿ ಗುರುವಾರ ಭೇಟಿಯಾದರು. ಈ ವೇಳೆ ಮಾತನಾಡಿರುವ ಅವರು, ತ್ರಿಪುರದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತ್ರಿಪುರ ಸರ್ಕಾರಕ್ಕೂ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT