ಶನಿವಾರ, ಮೇ 15, 2021
29 °C

ಜನರ ಆಕ್ರೋಶ ಎದುರಿಸಬಹುದು, ಆದರೆ ಶವಗಳ ರಾಶಿಗಳನ್ನು ನೋಡಲಾಗದು: ಅನಿಲ್‌ ವಿಜ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಚಂಡೀಗಡ: ಶವಗಳ ರಾಶಿಯನ್ನು ನೋಡಲು ಆಗದಿರುವ ಕಾರಣ ಸರ್ಕಾರವು ಕೋವಿಡ್-19- ಸಾವಿನ ಸಂಖ್ಯೆ ಹೆಚ್ಚಾಗುವುದನ್ನು ತಪ್ಪಿಸಲು ಮಾರ್ಗಸೂಚಿಗಳನ್ನು ಮತ್ತಷ್ಟು ಕಠಿಣವಾಗಿ ಜಾರಿಗೊಳಿಸಲಿದೆ. ಇದರಿಂದ ಜನರಿಗೆ ತೊಂದರೆಯಾಗಬಹುದು ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್‌ ವಿಜ್‌ ಹೇಳಿದ್ದಾರೆ.

ಕೋವಿಡ್-19 ನಿಯಂತ್ರಿಸಲು ಎರಡು ದಾರಿಗಳಿವೆ. ʼಒಂದು ಲಾಕ್‌ಡೌನ್‌. ಜೀವನ ಮುಂದೆ ಸಾಗುವುದನ್ನು ನಾವು ಬಯಸುತ್ತೇವೆ ಹಾಗಾಗಿ ಅದು ಸಾಧ್ಯವಿಲ್ಲ. ಆದರೆ, ಅದೇ ವೇಳೆ ಜನರೂ ಸುರಕ್ಷಿತರಾಗಿರಬೇಕಾಗಿದೆ. ಸೋಂಕು ಹರಡುವಿಕೆಯನ್ನು ತಡೆಯುವ ಇನ್ನೊಂದು ಮಾರ್ಗವೆಂದರೆ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿದೆʼ ಎಂದಿದ್ದಾರೆ.

ಮುಂದುವರಿದು, ʼಜನರಿಗೆ ತೊಂದರೆಯಾದರೂ ಸರಿ, ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ನಾವು ಅವರ ಆಕ್ರೋ಼ಶವನ್ನು ಎದುರಿಸಬಲ್ಲೆವು. ಆದರೆ, ಶವಗಳ ರಾಶಿಯನ್ನು ನೊಡಲಾಗದುʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಾಗಿದ್ದು, ಸಾವಿನ ಪ್ರಮಾಣ ಕಡಿಮೆ ಇದೆ ಎಂದೂ ವಿಜ್‌ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಹರಿಯಾಣದಲ್ಲಿ 27,421 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3,316ಕ್ಕೆ ಏರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು