ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುನಕ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

Last Updated 27 ಅಕ್ಟೋಬರ್ 2022, 16:06 IST
ಅಕ್ಷರ ಗಾತ್ರ

ನೂತನವಾಗಿ ಆಯ್ಕೆಯಾಗಿರುವ ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್‌ ಜೊತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಾತುಕತೆ ನಡೆಸಿದ್ದು, ಮುಕ್ತ ವಹಿವಾಟು ಒಪ್ಪಂದಕ್ಕೆ ಉಭಯ ನಾಯಕರು ಒಲವು ತೋರಿದ್ದಾರೆ.

ಸುನಕ್‌ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಮೋದಿ ದೂರವಾಣಿ ಕರೆ ಮೂಲಕ ಅವರನ್ನು ಅಭಿನಂದಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ನರೇಂದ್ರ ಮೋದಿ, ರಿಷಿ ಸುನಕ್‌ ಜೊತೆ ಮಾತನಾಡಲು ಹೆಮ್ಮೆ ಎನಿಸುತ್ತಿದೆ. ಯುಕೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವುದಕ್ಕೆ ಅವರನ್ನು ಅಭಿನಂದಿಸಿರುವೆ. ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ. ಸಮಗ್ರ ಮತ್ತು ಸಮತೋಲಿತ ಮುಕ್ತ ವಹಿವಾಟು ಕುರಿತಾದ ಆರಂಭಿಕ ತೀರ್ಮಾನದ ಪ್ರಾಮುಖ್ಯತೆಯನ್ನು ಕೂಡ ನಾವು ಒಪ್ಪಿಕೊಂಡಿದ್ದೇವೆ ಎಂದಿದ್ದಾರೆ.

ಮೋದಿ ಜೊತೆಗಿನ ಮಾತುಕತೆಯ ಕುರಿತಾಗಿ ಸುನಕ್‌ ಕೂಡ ಟ್ವೀಟ್‌ ಮಾಡಿದ್ದಾರೆ. ನನ್ನ ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದಂತೆ ಅಭಿನಂದನೆ ಸಲ್ಲಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಯುಕೆ ಮತ್ತು ಭಾರತದ ಬಾಂಧವ್ಯ ಗಟ್ಟಿಯಾಗಿದೆ. ಭದ್ರತೆ, ರಕ್ಷಣೆ ಮತ್ತು ಆರ್ಥಿಕ ಪಾಲುದಾರಿಕೆಯಲ್ಲಿ ಎರಡು ಬಲಿಷ್ಠ ಪ್ರಜಾಸತಾತ್ಮಕ ದೇಶಗಳ ನಡುವಿನ ಮುಂದಿನ ಹೆಜ್ಜೆ ಕುರಿತು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT