ಇಸ್ಲಾಮಾಬಾದ್: ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ವಾಣಿಜ್ಯ ನಗರಿ ಕರಾಚಿ, ದಕ್ಷಿಣ ಸಿಂಧ್ ಪ್ರಾಂತ್ಯ ಮತ್ತು ಇತರೆ ನಗರ ಕೇಂದ್ರಗಳಲ್ಲಿ ಆಗಸ್ಟ್8ರವರೆಗೆ ಲಾಕ್‌ಡೌನ್ ಜಾರಿಗೊಳಿಸಿದೆ.

ಶನಿವಾರದಿಂದಲೇ ಲಾಕ್‌ಡೌನ್ ಆರಂಭವಾಗಲಿದೆ. ಲಾಕ್‌ಡೌನ್‌ಗೆ ಸ್ಥಳೀಯ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

‘ಕೋವಿಡ್–19 ಸೋಂಕಿನ ಪ್ರಕರಣ ದಿಢೀರನೆ ಹೆಚ್ಚಾಗಿದ್ದು, ರಾಜಧಾನಿ ಕರಾಚಿ ಆಸ್ಪತ್ರೆಗಳೆಲ್ಲ ಭರ್ತಿಯಾಗಿವೆ’ ಎಂದು ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್ ಅಲಿ ಶಾ ತಿಳಿಸಿದ್ದಾರೆ.

ಔಷಧಿ ಅಂಗಡಿಗಳು, ಬೇಕರಿಗಳು, ಗ್ಯಾಸ್ ಕೇಂದ್ರಗಳು ಮತ್ತು ಕಿರಾಣಿ ಅಂಗಡಿಗಳನ್ನು ಹೊರತುಪಡಿಸಿ ಸಿಂಧ್ ಪ್ರಾಂತೀಯ ಸರ್ಕಾರ ಎಲ್ಲಾ ಮಾರುಕಟ್ಟೆಗಳನ್ನು ಮುಚ್ಚುತ್ತಿದೆ. ಬೇಕರಿ, ಕಿರಾಣಿ ಅಂಗಡಿಗಳನ್ನು ಸಂಜೆ 6 ಗಂಟೆಯೊಳಗೆ ಮುಚ್ಚುವಂತೆ ಸೂಚಿಸಲಾಗಿದೆ.

ನಗರಗಳ ನಡುವಿನ ಎಲ್ಲಾ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕ ಬಸ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಇಬ್ಬರು ಪ್ರಯಾಣಿಕರೊಂದಿಗೆ ಖಾಸಗಿ ಕಾರುಗಳು ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನು ಸಹ ಲಾಕ್‌ಡೌನ್ ಕಾರಣದಿಂದ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.