ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿಕೆ ತಿರುಚಲಾಗಿದೆ..: ತೇಜಸ್ವಿಗೆ ಸಿಎಂ ಸ್ಥಾನ ಎಂದ ಆರ್‌ಜೆಡಿ ನಾಯಕನ ಸ್ಪಷ್ಟನೆ

Last Updated 1 ಅಕ್ಟೋಬರ್ 2022, 4:22 IST
ಅಕ್ಷರ ಗಾತ್ರ

ಪಟ್ನಾ: ‘ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು 2023ರಲ್ಲಿ ತೇಜಸ್ವಿ ಯಾದವ್‌ ಅವರಿಗೆ ರಾಜ್ಯದ ಜವಾಬ್ದಾರಿ ನೀಡಲಿದ್ದಾರೆ. ಸಮಾಜವಾದಿ ನಾಯಕ ದೇಶವನ್ನು ಮುನ್ನಡೆಸಬೇಕು’ ಎಂಬ ತಮ್ಮ ಹೇಳಿಕೆಗೆ ಬಿಹಾರದ ಆರ್‌ಜೆಡಿ ಮುಖ್ಯಸ್ಥ ಜಗದಾನಂದ ಸಿಂಗ್‌ ಸ್ಪಷ್ಟನೆ ನೀಡಿದ್ದಾರೆ.

‘ನಿತೀಶ್ ಕುಮಾರ್ ಅವರು 2024 ರಲ್ಲಿ ದೇಶವನ್ನು ಮುನ್ನಡೆಸಿದರೆ, ಅವರು ತೇಜಸ್ವಿ ಯಾದವ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತಾರೆ. ಇದು ನನ್ನ ಹೇಳಿಕೆ ಮತ್ತು ಅದರಲ್ಲಿ ಸಮಯದ ನಿಬಂಧನೆಗಳಿಲ್ಲ ' ಎಂದು ಸಿಂಗ್‌ ಹೇಳಿದ್ದಾರೆ.

‘ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ತೇಜಸ್ವಿ ಯಾದವ್ ಬಿಹಾರದ ಜನಪ್ರಿಯ ಯುವ ನಾಯಕ ಎಂದು ನಾನು ಹೇಳಿದ್ದೇನೆ. ಎಲ್ಲರೂ ಅವರತ್ತ ನೋಡುತ್ತಿದ್ದಾರೆ. ಅವರು 10 ಲಕ್ಷ ಉದ್ಯೋಗಗಳ ಭರವಸೆ ನೀಡಿದ್ದರು. ಸಿಎಂ ನಿತೀಶ್ ಕುಮಾರ್ ಅದನ್ನು 20 ಲಕ್ಷಕ್ಕೆ ವಿಸ್ತರಿಸಿದ್ದಾರೆ. ಮಹಾಮೈತ್ರಿಕೂಟದ ಸರ್ಕಾರವು ನಿರುದ್ಯೋಗಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಲು ಪ್ರಾರಂಭಿಸಿದೆ. ಅವರು ತಮ್ಮ ಭರವಸೆಯನ್ನು ಈಡೇರಿಸುತ್ತಿದ್ದಾರೆ’ ಎಂದು ನಿತೀಶ್‌ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

‘...ಎನ್‌ಡಿಎ ಸರ್ಕಾರದ ಅಡಿಯಲ್ಲಿ ನಿರುದ್ಯೋಗ ಪ್ರಮಾಣ ವಿಪರೀತ ಏರಿತ್ತು. ಅವರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಿಲ್ಲ. ಈಗ ನಾವು ಅದನ್ನು ಪ್ರಾರಂಭಿಸಿದ್ದೇವೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿದ್ದೇವೆ. ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆಯೊಂದಿಗೆ ನಾವು ಉದ್ಯೋಗಗಳನ್ನು ನೀಡುತ್ತಿದ್ದೇವೆ. ಗಳಿಕೆಯನ್ನು ಹೆಚ್ಚಿಸಲು ಪ್ರತಿಯೊಂದು ವಲಯಕ್ಕೂ ಇದು ಸಹಾಯ ಮಾಡುತ್ತದೆ. ಅದಕ್ಕೆ ಅನುಗುಣವಾಗಿ ಕೊಳ್ಳುವ ಶಕ್ತಿಯೂ ಹೆಚ್ಚಲಿದೆ’ ಎಂದು ಅವರು ಹೇಳಿದರು.

ಜಗದಾನಂದ ಸಿಂಗ್ ಅವರಂತೆಯೇ ಆರ್‌ಜೆಡಿಯ ಮತ್ತೊಬ್ಬ ನಾಯಕ, ಮನೇರ್‌ನ ಶಾಸಕ ಭಾಯಿ ವೀರೇಂದ್ರ ಅವರೂ ಮಾತನಾಡಿದ್ದಾರೆ. ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿಯಾಗಬೇಕು ಎಂದು ಪ್ರತಿಪಾದಿಸಿದ ಅವರು, ನಿತೀಶ್ ಕುಮಾರ್ ಕೇಂದ್ರದಲ್ಲಿ ರಾಜಕೀಯ ಮಾಡಲಿದ್ದಾರೆ ಎಂದರು.

‘ಸಿಂಗ್ ಹೇಳಿಕೆಗೆ ಬೆಲೆ ಇಲ್ಲ’ ಎಂದು ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಹೇಳಿದ್ದಾರೆ. ‘ನಾವು ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಿತೀಶ್ ಕುಮಾರ್ ಅವರು 2025ರ ವರೆಗೆ ಮುಖ್ಯಮಂತ್ರಿಯಾಗಿರಲಿದ್ದಾರೆ. ನಂತರವೂ ಅವರೇ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಹೇಳಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT