ನವದೆಹಲಿ: ಉತ್ತರಾಖಂಡ ಸಾರಿಗೆ ಸಚಿವ ಯಶ್‌ಪಾಲ್ ಆರ್ಯ ಅವರು ಸೋಮವಾರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದರು. ತಮ್ಮ ಪುತ್ರ ಸಂಜೀವ್ ಅವರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಶಾಸಕರಾಗಿರುವ ಸಂಜೀವ್ ಆರ್ಯ ನೈನಿತಾಲ್ ಕ್ಷೇತ್ರ ಪ್ರತಿನಿಧಿಸುತ್ತಾರೆ. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಮುಖ ನಾಯಕರ ನಿರ್ಗಮನದ ಮೂಲಕ ಬಿಜೆಪಿ ದೊಡ್ಡ ಆಘಾತವೊಂದು ಎದುರಾದಂತಾಗಿದೆ.

ನವದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಹರೀಶ್ ರಾವತ್, ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಯಶ್‌ಪಾಲ್ ಆರ್ಯ ಮತ್ತು ಶಾಸಕ ಸಂಜೀವ್ ಕಾಂಗ್ರೆಸ್‌ಗೆ ಸೇರಿದರು.

ಇದಕ್ಕೂ ಮೊದಲು ಯಶ್‌ಪಾಲ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು.

ಅವರು2007 ರಿಂದ 2014 ರವರೆಗೆ ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಸ್ಪೀಕರ್ ಮತ್ತು ಸಚಿವರಾಗಿದ್ದರು. 2017ರಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು. ರಾಜ್ಯದ ಮುಕ್ತೇಶ್ವರ ಕ್ಷೇತ್ರವನ್ನು ಯಶ್‌ಪಾಲ್ ಪ್ರತಿನಿಧಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.