ಶನಿವಾರ, ಮೇ 28, 2022
31 °C
ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಚಾಲನೆ

ಜಗತ್ತಿನ ಶಕ್ತಿ ಕೇಂದ್ರಗಳಾಗಿ ಹೊರಹೊಮ್ಮಲಿವೆ ಭಾರತ- ಇಸ್ರೇಲ್: ನಫ್ತಾಲಿ ಬೆನೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಂತ್ರಜ್ಞಾನ ಸಹಭಾಗಿತ್ವದ ಮೂಲಕ ಭಾರತ ಮತ್ತು ಇಸ್ರೇಲ್ ದೇಶಗಳು ಜಗತ್ತಿನ ಶಕ್ತಿಕೇಂದ್ರಗಳಾಗಿ ಹೊರಹೊಮ್ಮಲಿವೆ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈಗಾಗಲೇ ವಿಚಾರ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಶೃಂಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆರುಸಲೇಂನಿಂದ ವರ್ಚುಯಲ್ ಆಗಿ ಪಾಲ್ಗೊಂಡು ಮಾತನಾಡಿದ ಅವರು, ‘ಜಗತ್ತಿನ ಬಹುದೊಡ್ಡ ದೇಶಗಳಲ್ಲಿ ಒಂದಾಗಿರುವ ಭಾರತವು ಪ್ರಬಲ ಆರ್ಥಿಕ ಶಕ್ತಿಯಾಗಿದ್ದು, ಇಸ್ರೇಲ್ ನಾವೀನ್ಯತೆಯ ತಾಣವಾಗಿದೆ. ಎರಡೂ ರಾಷ್ಟ್ರಗಳು ಕೈ ಜೋಡಿಸಿದರೆ ಅಸಾಧಾರಣ ಸಂಗತಿಗಳು ಸಂಭವಿಸಲಿವೆ’ ಎಂದು ಹೇಳಿದರು.

ಭಾರತವು ಸಾಧಿಸಿರುವ ಡಿಜಿಟಲ್ ಪರಿಣತಿ ಉತ್ಕೃಷ್ಟವಾದುದು. ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಯೋಗಿಕತೆ ಮತ್ತು ಉತ್ಪಾದಕತೆಯ ಸಂಕಲ್ಪ ಬಲವೇ ನಿರ್ಣಾಯಕ. ನಾವೆಲ್ಲರೂ ಇಂದು ಒಳ್ಳೆಯ ಕನಸು ಕಂಡರೆ ಮುಂದೊಂದು ದಿನ ಅದು ನನಸಾಗಲಿದೆ ಎಂದರು.

ಯಾವುದೇ ಸಂಗತಿ ಸಂಭವಿಸಬೇಕೆಂದರೆ ಮುನ್ನುಗ್ಗುವ ಸ್ವಭಾವವಿರಬೇಕು. ಇದನ್ನು ಬಿಟ್ಟು ಚರ್ಚೆಯಲ್ಲೇ ಕಾಲಹರಣ ಮಾಡಬಾರದು. ಮುಂಬರುವ ದಿನಗಳಲ್ಲಿ ಎರಡೂ ದೇಶಗಳ ಸಂಬಂಧ ಹೊಸ ಎತ್ತರವನ್ನು ತಲುಪಲಿದೆ ಎಂದು ಬೆನೆಟ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
    
ತಂತ್ರಜ್ಞಾನವೆಂದರೆ ಬರೀ ಜನರಿಗೆ ನೆರವಾಗುವುದಲ್ಲ. ಇದರಾಚೆಗೆ ಜನರ ಜೀವಗಳನ್ನು ಉಳಿಸಲುಬಹುದು. ತಂತ್ರಜ್ಞಾನ ಸಹಭಾಗಿತ್ವದ ಮೂಲಕ ಭಾರತ ಮತ್ತು ಇಸ್ರೇಲಿನ ನಾಗರಿಕತೆಗಳು ಮತ್ತಷ್ಟು ದೃಢವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇವನ್ನೂ ಓದಿ...

ಮನುಷ್ಯನ ಮೇಧಾಶಕ್ತಿಯ ಸಮರ್ಥ ಬಳಕೆಗೆ ರಾಜ್ಯಕ್ಕೆ ಬನ್ನಿ: ಬೊಮ್ಮಾಯಿ ಆಹ್ವಾನ

ಕೃಷಿಯ ಸುಧಾರಣೆಗೆ ಆಧುನಿಕ ತಂತ್ರಜ್ಞಾನ: ವೆಂಕಯ್ಯ ನಾಯ್ಡು ಸಲಹೆ

ಆಹಾರ ಭದ್ರತೆ, ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು: ವೆಂಕಿ ರಾಮಕೃಷ್ಣನ್

ಮಹಿಳಾ ಉದ್ಯಮಶೀಲತೆಯಿಂದ 15 ಕೋಟಿ ಉದ್ಯೋಗ ಸೃಷ್ಟಿ ಸಾಧ್ಯ: ಮೀನಾ ಗಣೇಶ್

BTS | ಸೆಮಿಕಂಡಕ್ಟರ್‌ ತಯಾರಿಕೆಯಲ್ಲಿ ಚೀನಾ, ತೈವಾನ್‌ಗೆ ಪೈಪೋಟಿ: ರಾಮಿಸೆಟ್ಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು