ಶನಿವಾರ, ಜನವರಿ 29, 2022
17 °C

ಕಾಂಗ್ರೆಸ್ ಜಾತ್ರೆ ಶುರು ಎಂದಿದ್ದೀರಿ, ಏನು ಪ್ರಯೋಜನ: ಡಿಕೆಶಿಗೆ ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘‌‌‌ಡಿ.ಕೆ.ಶಿವಕುಮಾರ್‌ ಅವರೇ, ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಲಾಗದ ನೀವು ಅಸಹಾಯಕರು’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಶಿವಕುಮಾರ್‌ ಅವರೇ, ರಾಜ್ಯದಾದ್ಯಂತ ಕಾಂಗ್ರೆಸ್ ಜಾತ್ರೆ ಶುರುವಾಗಿದೆ ಎಂದಿದ್ದೀರಿ, ಏನು ಪ್ರಯೋಜನ?, ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಹೊರಗಿನವರು ಒಳಗಿನವರು ಎಂಬುದು ಕಾಂಗ್ರೆಸ್‌ ಪಕ್ಷದಲ್ಲಿಲ್ಲ ಎನ್ನುತ್ತಲೇ ಸಿದ್ದರಾಮಯ್ಯ ಜೊತೆ ಕಾದಾಡುತ್ತೀರಿ. #ಅಸಹಾಯಕಡಿಕೆಶಿ ಎಂಬ ಹ್ಯಾಷ್‌ ಟ್ಯಾಗ್‌ ಬಳಸಿ ಲೇವಡಿ ಮಾಡಿದೆ.

‘ಆಕಾಶ ನೋಡುವುದಕ್ಕೂ ಕೆಲವೊಮ್ಮೆ ನೂಕು‌ನುಗ್ಗಲಾಗುತ್ತದೆ. ಇನ್ನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಾತ್ರೆ ಸೇರುವುದು ಹೆಚ್ಚೇ?, ಸೇರುವ ಜನ ಎಷ್ಟು ಸಮರ್ಥರು ಎಂಬುದೂ ಮುಖ್ಯವಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು