ನವದೆಹಲಿ: ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್-19 ವಿರುದ್ಧದ ಲಸಿಕೆ ಪಡೆಯಲು ಅರ್ಹರಾಗುತ್ತಾರೆ. ರಾಜ್ಯಗಳು, ಖಾಸಗಿ ಆಸ್ಪತ್ರೆಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಉತ್ಪಾದಕರಿಂದ ನೇರವಾಗಿ ಡೋಸೇಜ್‌ಗಳನ್ನು ಪಡೆಯಲು ಲಸಿಕಾ ಅಭಿಯಾನವನ್ನು ಉದಾರೀಕರಣಗೊಳಿಸಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಮುಂದಿನ ತಿಂಗಳು ಪ್ರಾರಂಭವಾಗುವ ಲಸಿಕಾ ಅಭಿಯಾನದ ಮೂರನೇ ಹಂತದ ಅಡಿಯಲ್ಲಿ, ಲಸಿಕೆ ತಯಾರಕರು ತಮ್ಮ ಮಾಸಿಕ ಕೇಂದ್ರ ಡ್ರಗ್ಸ್ ಲ್ಯಾಬೊರೇಟರಿ (ಸಿಡಿಎಲ್) ಯ ಶೇ 50ರಷ್ಟು ಪ್ರಮಾಣವನ್ನು ಕೇಂದ್ರ ಸರ್ಕಾರಕ್ಕೆ ಪೂರೈಸುತ್ತಾರೆ ಮತ್ತು ಉಳಿದ ಶೇ 50ರಷ್ಟು ಪ್ರಮಾಣವನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಗೆ ಪೂರೈಸಬಹುದಾಗಿದೆ.

2021ರ ಮೇ 1 ರ ಮೊದಲು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವ ಶೇ 50 ರಷ್ಟು ಪೂರೈಕೆಗೆ ತಯಾರಕರು ಮುಂಗಡ ದರ ಘೋಷಣೆ ಮಾಡಬೇಕಾಗುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಈ ಬೆಲೆಯ ಆಧಾರದ ಮೇಲೆ, ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಸಂಸ್ಥೆಗಳು ಇತ್ಯಾದಿಗಳು ಉತ್ಪಾದಕರಿಂದ ಲಸಿಕೆ ಡೋಸ್‌ಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.

ಖಾಸಗಿ ಲಸಿಕಾ ಪೂರೈಕೆದಾರರು ತಮ್ಮ ಸ್ವಯಂ-ನಿಗದಿತ ವ್ಯಾಕ್ಸಿನೇಷನ್ ಬೆಲೆಯನ್ನು ಪಾರದರ್ಶಕವಾಗಿ ಘೋಷಿಸುವ ಅಗತ್ಯವಿರುತ್ತದೆ ಮತ್ತು ಈ ಮೂಲಕ ಎಲ್ಲ ವಯಸ್ಕರಿಗೂ ಅಂದರೆ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯುವ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.

ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರು ಸೇರಿದಂತೆ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಭಾರತ ಸರ್ಕಾರದ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಅರ್ಹ ಜನಸಂಖ್ಯೆಗೆ ಉಚಿತವಾಗಿ ಲಸಿಕೆ ಅಭಿಯಾನ ಮುಂದುವರಿಯುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಅನುಮತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.