ನಾಗ್ಪುರ: 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಸಂದರ್ಭದಲ್ಲಿ ಚೀನಾ ನಿರ್ಮಿತ ಕಡಿಮೆ ಬೆಲೆಯ ಪಾಕಿಸ್ತಾನದ ಡ್ರೋನ್ಗಳನ್ನು ಹೊಡೆದುರುಳಿಸಲು ₹15 ಲಕ್ಷ ಮೌಲ್ಯದ ಕ್ಷಿಪಣಿಗಳನ್ನು ಏಕೆ ಬಳಸಲಾಯಿತು ಎಂದು ಕಾಂಗ್ರೆಸ್ ನಾಯಕರೊಬ್ಬರು ಪ್ರಶ್ನೆ ಮಾಡಿದ್ದಾರೆ.

'ಬಹುಶಃ ಪಾಕಿಸ್ತಾನ ಹಾರಿಸಿರುವ ಚೀನಾ ನಿರ್ಮಿತ ಡ್ರೋನ್ಗಳ ಬೆಲೆ ತಲಾ ₹15,000 ಆಗಿರುವ ಸಾಧ್ಯತೆಯಿದೆ. ಇವುಗಳನ್ನು ಹೊಡೆದುರುಳಿಸಲು ಭಾರತ ತಲಾ ₹15 ಲಕ್ಷ ಬೆಲೆಬಾಳುವ ಕ್ಷಿಪಣಿಗಳನ್ನು ಬಳಕೆ ಮಾಡಿದೆ. ಹಾಗಾಗಿ ನಮಗೆ ಆದ ನಷ್ಟದ ಕುರಿತು ಸರ್ಕಾರ ಮಾಹಿತಿ ನೀಡಬೇಕು' ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಆಗ್ರಹಿಸಿದ್ದಾರೆ.

ನಾಗ್ಪುರದಲ್ಲಿ ಬುಧವಾರದಂದು (ಮೇ 21) ಮಾತನಾಡಿದ ಅವರು, ಪಾಕ್ ವಿರುದ್ಧದ ಸಂಘರ್ಷದಲ್ಲಿ ಉಂಟಾಗಿರುವ ನಷ್ಟದ ಕುರಿತು ಕೇಳುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ.

ಸೇನಾ ಕಾರ್ಯಾಚರಣೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಚುಟ್ಪುಟ್' (ಸಣ್ಣ ಯುದ್ಧ) ಎಂದು ಕರೆದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಸಂಘರ್ಷದಲ್ಲಿ ದೇಶಕ್ಕೆ ಆದ ನಷ್ಟ ಹಾಗೂ ಯೋಧರ ಸಾವು-ನೋವುಗಳ ಕುರಿತು ಸರ್ಕಾರವನ್ನು ಪ್ರಶ್ನಿಸುವುದು ತಪ್ಪಲ್ಲ' ಎಂದು ತಿಳಿಸಿದ್ದಾರೆ.

'ಪಾಕ್ ವಿರುದ್ಧದ ಯುದ್ಧದಲ್ಲಿ ನಮ್ಮ ರಫೇಲ್ ಯುದ್ಧ ವಿಮಾನ ನಷ್ಟವಾಗಿದೆಯೇ?' ಎಂದೂ ಕೇಳಿದ್ದಾರೆ.
.Operation Sindoor | ಪಾಕ್ಗೆ ಸರ್ಕಾರದಿಂದಲೇ ಮಾಹಿತಿ: ರಾಹುಲ್ ಆರೋಪ.ಪಾಕಿಸ್ತಾನದ ಮಿಲಿಟರಿ ಪೋಸ್ಟ್, ಡ್ರೋನ್ ಲಾಂಚ್ಪ್ಯಾಡ್ ಧ್ವಂಸಗೊಳಿಸಿದ ಭಾರತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.